ಉತ್ತರಪ್ರದೇಶ:ಪೊಲೀಸ್​​ ಪೇದೆಯೊಬ್ಬರು ಇಲಾಖೆಯಲ್ಲಿ ತಮಗೆ ಆಗುತ್ತಿರುವ ಸಂಕಷ್ಟದ ಬಗ್ಗೆ ಹೇಳಿ ಕಣ್ಣೀರಿಟ್ಟಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ.
ಇದನ್ನೂ ಓದಿ:ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ದಾಳಿ; ಹಣವನ್ನು ಗದ್ದೆಗೆ ಎಸೆದು ಸಹಾಯಕ ಎಂಜಿನಿಯರ್‌ ಪರಾರಿ
ನಮ್ಮ ಇಲಾಖೆ ಕನಿಷ್ಠ ಪಕ್ಷ ನಮ್ಮ ಕಷ್ಟವನ್ನು ಕೇಳುವ ಕಾಳಜಿ ಕೂಡ ಮಾಡುತ್ತಿಲ್ಲ. ನಮ್ಮ ಕುಟುಂಬಕ್ಕೆ ನಾವೇ ಆಸರೆ. ಆದರೆ ನಮ್ಮ ಮನೆಯವರಿಗೆ ಏನಾದರೂ ಕಷ್ಟ ಬಂದರೆ ಅವರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಜುಲೈ 20ಕ್ಕೆ ನನ್ನ ತಂಗಿ ಸಾವನ್ನಪ್ಪಿದ್ದಾಳೆ. ಅದಕ್ಕಾಗಿ ನಾನು ರಜೆಗಾಗಿ ಮನವಿ ಮಾಡಿದ್ದೇ, ಇನ್ನು ನಮ್ಮನ್ನು ದೂರದ ಊರಿಗೆ ಪೋಸ್ಟಿಂಗ್‌ ಹಾಕುವ ಕಾರಣ ಅಲ್ಲಿಂದ ನಮ್ಮ ಕುಟುಂಬ ಹೇಗಿದೆ? ಅವರ ಜತೆಗೆ ನಾವು ಸ್ವಲ್ಪ ಕಾಲ ಕಳೆಯಲು ಆಗುತ್ತಿಲ್ವಲ್ಲ. ನನ್ನ ತಂಗಿ ಸಾವನ್ನಪ್ಪಿದ ಕಾರಣ ಜುಲೈ 20ಕ್ಕೆ ನನಗೆ ರಜೆ ಬೇಕಿತ್ತು. ಅದರೂ ನನಗೆ ರಜೆ ನೀಡಿಲ್ಲ ಎಂದು ಅಧಿಕಾರಿ ವಿಡಿಯೋದಲ್ಲಿ ಆರೋಪಿಸಿದ್ದಾರೆ. ಯುಪಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ 10-12 ಕಾನ್‌ಸ್ಟೆಬಲ್‌ಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬದನ್ನು ಕೂಡ ಹೇಳಿ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ:ಕಾರವಾರದಲ್ಲಿ ಪತ್ತೆಯಾಯ್ತು ದೇಶದ ಅತಿ ದೊಡ್ಡ ಬಂಗಡೆ ಮೀನು
ವಿಡಿಯೋ ಮಾಡಿರುವ ಪೊಲೀಸ್ ಪೇದೆಯನ್ನು ಬಾಗ್‌ಪತ್ ಪೊಲೀಸ್ ಇಲಾಖೆಯ ಓಂವೀರ್ ಸಿಂಗ್ ಎಂದು ಗುರುತಿಸಲಾಗಿದೆ. ಇನ್ನು ವಿಡಿಯೋವನ್ನು ಓಂವೀರ್ ಸಿಂಗ್ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.
ಈ ಹಿಂದೆ ಕೇಂದ್ರ ಗೃಹ ಸಚಿವಾಲಯವು ರಚಿಸಿದ ಕಾರ್ಯಪಡೆಯು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯಲ್ಲಿ ಆತ್ಮಹತ್ಯೆ ಪ್ರಕರಣಗಳ ಹೆಚ್ಚುತ್ತಿರಲು ಕಾರಣ ಇಲಾಖೆಯಲ್ಲಿ ಅವಮಾನ, ಕಿರುಕುಳ ಮತ್ತು ರಜೆಗೆ ಸಂಬಂಧಿಸಿದ ಸಮಸ್ಯೆಗಳು ಎಂದು ಕಂಡು ಬಂದಿತ್ತು. ಇಲಾಖೆಯಲ್ಲಿ ಹೆಚ್ಚುವರಿ ಸಮಯ ಕೆಲಸ ಮಾಡುವಂತೆ ಒತ್ತಡ ಹೆಚ್ಚಾಗಿತ್ತು, ಇದಕ್ಕಾಗಿಯೇ ಅಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರೇನಾಲ್ಡ್ಸ್‌ಪೇನ್​ ಮಾರಾಟ ಸ್ಥಗಿತ?…ಕಂಪನಿ ಹೇಳುವುದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
