ಚೆನ್ನೈ:ತಮ್ಮ ಮಗ ಇನ್ಬನಿತಿ, ಗರ್ಲ್​ಫ್ರೆಂಡ್​ ಜತೆ ಇರುವ ಖಾಸಗಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ಉದಯನಿಧಿ ಸ್ಟಾಲಿನ್​ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉದಯನಿಧಿ, ನನ್ನ ಮಗನಿಗೆ 18 ವರ್ಷ ಮತ್ತು ಇದು ಆತನ ಖಾಸಗಿ ವಿಚಾರ ಎಂದು ಹೇಳಿದ್ದಾರೆ.
ಇದು ನನ್ನ ಮಗನ ವೈಯಕ್ತಿಕ ವಿಷಯ. ವ್ಯಕ್ತಿಯ ವೈಯಕ್ತಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವುದಕ್ಕೂ ಮಿತಿ ಇದೆ. ನಾನು, ನನ್ನ ಹೆಂಡತಿ ಮತ್ತು ಮಗ ಸಾರ್ವಜನಿಕವಾಗಿ ಚರ್ಚಿಸುವುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು. ಉದಯನಿಧಿ ಅವರ ಉತ್ತರಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಈ ಮಧ್ಯೆ, ತಮಿಳುನಾಡಿನ ಪ್ರತಿಪಕ್ಷಗಳು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ರಾಜಕೀಯ ಅಸ್ತ್ರವಾಗಿ ಬಳಸುತ್ತಿವೆ.
ಇದನ್ನೂ ಓದಿ:ಇಬ್ಬರು ಪತ್ನಿಯರು ವಿದೇಶದಲ್ಲಿ… ಕಾಮದಾಹ ತೀರಿಸಿಕೊಳ್ಳಲು ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದ ಕಿರಾತಕ
ಕಳೆದ ಜನವರಿಯಲ್ಲಿ ಇನ್ಬನಿತಿ ಮತ್ತು ಅವರ ಗರ್ಲ್​ಫ್ರೆಂಡ್​ ಫೋಟೋಗಳು ಹೊರಬಂದವು. ಚಿತ್ರಗಳು ಎಲ್ಲೆಡೆ ವೈರಲ್ ಆಗಿದ್ದು ಭಾರೀ ವಿವಾದವನ್ನು ಸೃಷ್ಟಿಸಿದೆ. ಈ ವಿಚಾರದಲ್ಲಿ ಉದಯನಿಧಿ ಸ್ಟಾಲಿನ್ ಮತ್ತು ಅವರ ಪತ್ನಿ ಕೃತಿಕಾ ಉದಯನಿಧಿ ತಮ್ಮ ಮಗನನ್ನು ಬೆಂಬಲಿಸಿದ್ದಾರೆ.(ಏಜೆನ್ಸೀಸ್​)
ಪರಮೇಶ್ವರ್​ಗೆ BJP ಟಿಕೆಟ್ ಆಕಾಂಕ್ಷಿಯ ಮೀಸೆ ಮೇಲೆಯೇ ಕಣ್ಣು: ಅನಿಲ್ ಕುಮಾರ್ ಮೀಸೆಗೆ ಹೆದರಿದ್ರಾ ಮಾಜಿ ಡಿಸಿಎಂ?!

ಬೆಂಗ​ಳೂರು-ಮೈಸೂರು ಹೆದ್ದಾರಿಯಲ್ಲಿ ಟೋಲ್‌ ಸಂಗ್ರಹ ವಿರೋಧಿಸಿ ಪ್ರತಿಭಟನೆ; ಸಮಸ್ಯೆ ಬಗೆಹರಿಸುವಂತ ಸೂಚನೆ ನೀಡಿದ್ದೇನೆ ಎಂದ ಸಿಎಂ

ಎಲ್ಲಾ ಪ್ರಶ್ನೆಗಳಿಗೂ ತೆರೆ ಎಳೆದ ಸಚಿವ ಸೋಮಣ್ಣ; ಬಿಜೆಪಿ ಬಿಡುವ ಬಗ್ಗೆ ಸಚಿವರು ಹೇಳಿದ್ದಿಷ್ಟು…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 2 =
Remember me
