ಮರಳುಶಿಲ್ಪ ಕಲಾವಿದ ಸುದರ್ಶನ ಪಟ್ನಾಯಕ ತಮ್ಮ ಕಲೆಯ ಮೂಲಕ ನೋಡುಗರ ಹುಬ್ಬೇರಿಸುವಂತಹ ಮರಳು ಶಿಲ್ಪವನ್ನ ತಯಾರಿಸುತ್ತಲೇ ಇರ್ತಾರೆ. ಒಡಿಶಾದ ಕಡಲದಂಡೆಯ ಮೇಲೆ ಅವರ ಬೃಹದ್ಗಾತ್ರದ ಮರಳಶಿಲ್ಪಗಳನ್ನು ವಿವಿಧ ಸಂದರ್ಭಗಳಲ್ಲಿ ಮಾಡುತ್ತಲೇ ಬಂದಿದ್ದಾರೆ.
ಇದೀಗ ಚಂದ್ರಯಾನ 3 ಥೀಮ್​ನ ಮರಳು ಶಿಲ್ಪವನ್ನ ಒಡಿಶಾದ ಪುರಿ ಬೀಚ್​ನಲ್ಲಿ ಸುದರ್ಶನ ಪಟ್ನಾಯಕ ಅವರ ವಿದ್ಯಾರ್ಥಿಗಳು ಮಾಡಿದ್ದಾರೆ.ನೀಲಿ ಬಣ್ಣದ ಬಾಹ್ಯಾಕಾಶದ ಮೇಲೆ ರಚಿಸಲಾದ ಕಾಲಾಕೃತಿಯು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಇದರಲ್ಲಿ ಚಂದ್ರನ ಮೇಲ್ಮೈನಲ್ಲಿರುವ ಕುಳಿಗಳ ನೈಜತೆ, ಆಕಾಶದ ಹಿನ್ನೆಲೆ ಮತ್ತು ಒಟ್ಟಾರೆ ಕಲಾಕೃತಿ ಬಹಳ ಸುಂದರವಾಗಿ ಮೂಡಿ ಬಂದಿದೆ.
ALL THE BEST 🇮🇳#Chandrayan3My students created a sand art on#Chandrayaan3 with the message "Jai Ho@isro, at Puri beach in Odisha.pic.twitter.com/SDbL8kpbEt
ಆ. 22ರಂದು ಪೋಸ್ಟ್ ಮಾಡಿದ ಈ ಚಿತ್ರವನ್ನು ಈತನಕ ಸುಮಾರು 16,000 ಜನರು ನೋಡಿದ್ದಾರೆ. ಸುಮಾರು 900 ಜನರು ಲೈಕ್ ಮಾಡಿದ್ದಾರೆ. 120 ಜನರು ರೀಪೋಸ್ಟ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದರ್ಶನ ತಮ್ಮ ವಿದ್ಯಾರ್ಥಿಗಳ ಈ ಕಲಾಕೃತಿಯ ಚಿತ್ರವನ್ನು X (ಟ್ವಿಟರ್​) ನಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 5 =
Remember me
