ನವದೆಹಲಿ:ರಾಜಧಾನಿ ದೆಹಲಿಯ ರೋಹಿಣಿಯ ಕೋರ್ಟ್​ನಲ್ಲಿ ಅನುಮಾನಾಸ್ಪದ ಸ್ಫೋಟವೊಂದು ಸಂಭವಿಸಿದೆ. ಈ ಘಟನೆಯಲ್ಲಿ ಒಬ್ಬ ಪೊಲೀಸ್​​ ಸಿಬ್ಬಂದಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇಂದಿನ ನ್ಯಾಯಾಲಯದ ಎಲ್ಲಾ ಕಲಾಪಗಳನ್ನು ಅಮಾನತ್ತಿನಲ್ಲಿರಿಸಿ, ಆವರಣವನ್ನು ಸೀಲ್​ ಮಾಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಆರಂಭಿಕ ವರದಿಗಳ ಪ್ರಕಾರ, ಬೆಳಿಗ್ಗೆ 10.40 ರ ಸಮಯಕ್ಕೆ ಕೋರ್ಟ್​​ ರೂಮೊಂದರಲ್ಲಿ ಒಂದು ಲ್ಯಾಪ್​ಟಾಪ್​ ಸ್ಫೋಟಗೊಂಡಿತು ಎನ್ನಲಾಗಿದೆ. ಪೊಲೀಸ್​ ಇಲಾಖೆಯ ಮೂಲಗಳು ಇದು ಪುಟ್ಟ ಕ್ರೂಡ್​ ಬಾಂಬ್​ನ ಪರಿಣಾಮ ಎಂದು ಹೇಳಿದ್ದಾರೆ. ಫೊರೆನ್ಸಿಕ್ಸ್​ ತಂಡದವರು ಪರಿಶೀಲನೆ ನಡೆಸಿದ ನಂತರ ವಸ್ತುಸ್ಥಿತಿ ಹೊರಬೀಳಲಿದೆ. ಅಗ್ನಿಶಾಮಕ ದಳದ ತಂಡಗಳು ಮತ್ತು ಉನ್ನತ ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ತನಿಖೆ ಕೈಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.(ಏಜೆನ್ಸೀಸ್)‘
ಶಸ್ತ್ರಾಸ್ತ್ರ ತಯಾರಿಕೇಲಿ ಭಾರತವನ್ನ ಆತ್ಮನಿರ್ಭರ್ ಮಾಡೋ ಯತ್ನದಲ್ಲಿದ್ರು: ಜನರಲ್​ ರಾವತ್​​ಗೆ ಸಿಎಂ ಬೊಮ್ಮಾಯಿ ಶ್ರದ್ಧಾಂಜಲಿ

2021ರಲ್ಲಿ ಹೆಚ್ಚು ಸರ್ಚ್​​ ಮಾಡಲಾದ ವಿಚಾರ, ವ್ಯಕ್ತಿಗಳು… ಶಾರುಖ್​ ಪುತ್ರನಿಗೂ ಸ್ಥಾನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − nine =
Remember me
