ಮುಂಬೈ:ಮಳೆ ಬಂದರೆ ನದಿ-ತೊರೆ ನೀರು ಹಳದಿ ಬಣ್ಣಕ್ಕೆ ತಿರುಗುವುದನ್ನು ಕಾಣುತ್ತೇವೆ. ಆದರೆ ಮಹಾರಾಷ್ಟ್ರದ ಧಾರಶಿವ ಜಿಲ್ಲೆಯ ನದಿಯೊಂದರಲ್ಲಿ ಮಳೆ ನೀರು ನೀಲಿ ಬಣ್ಣಕ್ಕೆ ತಿರುಗಿ ಹರಿಯಲಾರಂಭಿಸಿದೆ. ಈ ವಿಸ್ಮಯ ನೋಡಲು ಜನಜಾತ್ರೆ ಸೇರುತ್ತಿದೆ. ಸ್ಥಳೀಯರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು ಇದು ವೈರಲ್​​ ಆಗುತ್ತಿದೆ.
ಇದನ್ನೂ ಓದಿ:ಗೋಲ್ಡ್ ಸ್ಕೀಂ ವಂಚನೆ: ಶಿಲ್ಪಾಶೆಟ್ಟಿ, ಪತಿ ರಾಜ್​ಕುಂದ್ರಾ ವಿರುದ್ಧ ತನಿಖೆಗೆ ಮುಂಬೈ ಕೋರ್ಟ್‌ ಆದೇಶ
ನದಿಯಲ್ಲಿ ನೀಲಿ ನೀರು ಹರಿಯುತ್ತಿರುವ ವೀಡಿಯೊವನ್ನು ಎಕ್ಸ್​ ನಲ್ಲಿ ಜಿತೇಂದ್ರ ಅಲಿಯಾಸ್​ ಜಿತೇಂದದ್ರಜಾವರ್​ ಖಾತೆಯಿಂದ “ಧಾರಶಿವಮಧೀಲ ಶೆತಾತ ನಿಂತೇ ಪಾಣಿ ಯೇತ ಆಹೇ(ಧಾರಶಿವ್​ನಲ್ಲಿ ಹೊಲಗಳಿಗೆ ನೀಲಿ ನೀರು ಬರುತ್ತಿದೆ” ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ. ಜನರು ಈಗ ನೀಲಿ ನೀರಿನ ವಿಸ್ಮಯ ನೋಡಲು ಶುರು ಮಾಡಿದ್ದಾರೆ.
धारशिवमधील शेतात निळे पाणी येत आहे. हे पाहण्यासाठी गर्दी होऊ लागली आहे….pic.twitter.com/tggdh9D16e
— jitendra (@jitendrazavar)June 11, 2024

ಧಾರಶಿವ ಜಿಲ್ಲಾಡಳಿತಕ್ಕೆ ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ‘ನೀಲಿ ಬಣ್ಣವು ನೈಸರ್ಗಿಕ ಘಟನೆಯಲ್ಲ, ಯಾರದೋ ಅಚಾತುರ್ಯದಿಂದ ಬಣ್ಣದ ಬಾಕ್ಸ್ ಮಳೆಯ ನೀರಿಗೆ ಬಿದ್ದಿದ್ದು, ನೀರಿನ ಬಣ್ಣ ಬದಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಹೆಚ್ಚು ಮಳೆಯಾದ ಕಾರಣ ಬಣ್ಣದ ಬಾಕ್ಸ್‌ಗಳಲ್ಲಿದ್ದ ಬಣ್ಣ ಮಳೆನೀರಿಗೆ ಮಿಶ್ರಣಗೊಂಡ ಪರಿಣಾಮ ನೀಲಿ ನೀರು ಹರಿಯುತ್ತಿದೆ ಎಂದು ತುಳಜಾಪುರ ತಹಸೀಲ್ದಾರ್​ ತಿಳಿಸಿದ್ದಾರೆ. ಆದರೆ ಬಣ್ಣದ ಬಾಕ್ಸ್​ಗಳು ಎಲ್ಲಿದ್ದವು? ಯಾರವು ಎಂಬ ಬಗ್ಗೆ ಏನನ್ನೂ ಹೇಳಿಲ್ಲ. ಹೀಗಾಗಿ ನೀರಿನ ಬಣ್ಣ ಬದಲಾಗಿರುವುದು ಇನ್ನೂ ನಿಗೂಢವಾಗಿಯೇ ಇದೆ.
ಕುನಾಲ್ ಕಪೂರ್ ಅವರನ್ನು ‘ವಿಶ್ವಂಭರ’ ತಂಡ ಸ್ವಾಗತಿಸಿದ್ದು ಹೀಗೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
