ಲಖನೌ:ಹೆತ್ತು, ಹೊತ್ತು, ಸಾಕಿದ್ದ ಅಪ್ಪ ಅಮ್ಮನನ್ನು ಮಕ್ಕಳೇ ಉಸಿರುಗಟ್ಟಿಸಿ ಸಾಯಿಸಿ, ಬೆಂಕಿ ಹಚ್ಚಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ. ದಂಪತಿಯ ನಿಗೂಢ ಸಾವಿನ ತನಿಖೆ ನಡೆಸಿದ ಪೊಲೀಸರಿಗೆ ಘಟನೆಯ ನಿಜಾಂಶ ತಿಳಿದುಬಂದಿದೆ.
ಇದನ್ನೂ ಓದಿ:ಮೂರು ವರ್ಷಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಕಾಣೆಯಾಗಿದ್ದ, ಈಗ ಅಸ್ಸಾಂನಲ್ಲಿ ಪತ್ತೆಯಾದ! ಗುರುತು ಪತ್ತೆ ಮಾಡಿದ್ದೇ ಒಂದು ಸಾಹಸ!
ರಾಜೇಂದ್ರ (61) ಮತ್ತು ಆತನ ಪತ್ನಿ ರಾಜಾವತಿ (57) ಬರೇಲಿಯ ಸಂಜರ್​ಪುರ ಗುಲಾಲ್​ ಗ್ರಾಮದಲ್ಲಿ ವಾಸವಿದ್ದರು. ಇವರಿಗೆ ನಾಲ್ಕು ಗಂಡು ಮಕ್ಕಳಿದ್ದಾರಾದರೂ ಎಲ್ಲರೂ ಬೇರಾಗಿದ್ದು, ದಂಪತಿ ಇಬ್ಬರೇ ತಮ್ಮ ಮನೆಯಲ್ಲಿ ಜೀವನ ಕಳೆಯುತ್ತಿದ್ದರು. ಇಬ್ಬರು ಮಕ್ಕಳು ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದರೆ ಇನ್ನಿಬ್ಬರು ಬರೇಲಿಯಲ್ಲಿದ್ದರು. ಇತ್ತೀಚೆಗೆ ಈ ದಂಪತಿ ತಮ್ಮ ಕೋಣೆಯಲ್ಲಿ ಅರೆ ಸುಟ್ಟ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಎರಡೂ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಅದಾಗಲೇ ಸ್ಥಳಕ್ಕೆ ಬಂದಿದ್ದ ಮಕ್ಕಳನ್ನು ವಿಚಾರಿಸಿದಾಗ ಅವರು, ಹೊದಿಕೆಗೆ ಬೆಂಕಿ ಹತ್ತಿರುವ ಕಾರಣ ಈ ದುರ್ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಸತ್ಯ ಹೊರಬಿದ್ದಿದೆ. ದಂಪತಿ ಬೆಂಕಿಯಿಂದಲ್ಲ, ಉಸಿರು ಕಟ್ಟಿದ್ದರಿಂದಾಗಿ ಸಾವನ್ನಪ್ಪಿದ್ದಾರೆ ಎನ್ನುವುದು ತಿಳಿದುಬಂದಿದೆ. ಈ ವಿಚಾರವಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಆಗ ಮಕ್ಕಳ ಬಾಯಿಯಿಂದ ನಿಜಾಂಶ ಹೊರಗೆ ಬಂದಿದೆ.
ಇದನ್ನೂ ಓದಿ:ಮನೆಗೆ ಕರೆಸಿಕೊಂಡು ಬಟ್ಟೆ ಬಿಚ್ಚಿಸುತ್ತಿದ್ದ! ಬಾಲಕನ ಮೇಲೆ ಬಾಲಕನಿಂದಲೇ ನಡೆಯುತ್ತಿತ್ತು ಲೈಂಗಿಕ ದೌರ್ಜನ್ಯ
ಬರೇಲಿಯಲ್ಲಿದ್ದ ವಿಕ್ರಮ್​ ಮತ್ತು ಸುಮಿತ್ ಅಂದು ಮನೆಗೆ ಬಂದಿದ್ದು, ಅಪ್ಪನೊಂದಿಗೆ ಜಗಳವಾಡಿದ್ದಾರೆ. ಅಪ್ಪನ ಹೆಸರಿನಲ್ಲಿದ್ದ 10 ಎಕರೆ ಜಮೀನನ್ನು ಮಾರಿ, ಹಣ ಹಂಚುವಂತೆ ಪೀಡಿಸಿದ್ದಾರೆ. ಈ ವಿಚಾರವಾಗಿ ಆರಂಭವಾದ ಜಗಳ ತಾರಕಕ್ಕೇರಿದ್ದು, ಅಪ್ಪ ಅಮ್ಮನ ಕುತ್ತಿಗೆ ಒತ್ತಿ ಹಿಡಿದ ಮಕ್ಕಳು ಅವರನ್ನು ಸಾಯಿಸಿದ್ದಾರೆ. ನಂತರ ಇದು ಕೊಲೆಯಲ್ಲ, ಆಕಸ್ಮಿಕ ಸಾವು ಎಂದು ನಂಬಿಸುವ ಸಲುವಾಗಿ ರೂಮಿನಲ್ಲಿ ಅವರನ್ನು ಮಲಗಿಸಿ, ಬೆಂಕಿ ಹಚ್ಚಿದ್ದಾರೆ. (ಏಜೆನ್ಸೀಸ್​)
ಸೆಕ್ಸ್​ ವರ್ಕರ್​ ಇರಲಿಲ್ಲ, ಹೋಟೆಲ್​ ಸಿಬ್ಬಂದಿಯನ್ನೇ ರೇಪ್​ ಮಾಡಿಬಿಟ್ಟರು! ವಿಚಾರಣೆ ವೇಳೆ ಹೊರಬಿತ್ತು ಭಯಾನಕ ರಹಸ್ಯ!

ಮಾರ್ಕ್ಸ್​ ಬೇಕೆಂದರೆ ನನ್ನ ಜತೆ ಸೆಕ್ಸ್​ ಮಾಡಿ! ಸರ್ಕಾರಿ ಶಾಲಾ ಶಿಕ್ಷಕನ ಬೇಡಿಕೆಗೆ ಬೆಚ್ಚಿದ ವಿದ್ಯಾರ್ಥಿನಿಯರು

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:12 + three =
Remember me
