ನವದೆಹಲಿ:ಲಡಾಖ್​ನ ಪೂರ್ವಭಾಗದ ಗಲ್ವಾನ್​ ಕಣಿವೆಯಲ್ಲಿ ಜೂ.15ರಂದು ನಡೆದ ಭಾರತ ಮತ್ತು ಚೀನಿ ಯೋಧರ ನಡುವಿನ ರಕ್ತಸಿಕ್ತ ಘರ್ಷಣೆಗೆ ಚೀನಾ ಪಾಳೆಯದ ಶಿಬಿರದಲ್ಲಿ ನಿಗೂಢವಾಗಿ ಕಾಣಿಸಿಕೊಂಡ ಬೆಂಕಿ ಕಾರಣವಾಯಿತು ಎಂದು ಕೇಂದ್ರ ಸಚಿವ ವಿ.ಕೆ. ಸಿಂಗ್​ ಹೇಳಿದ್ದಾರೆ.
ಈ ಘರ್ಷಣೆಯಲ್ಲಿ ಚೀನಾದ 40ಕ್ಕೂ ಹೆಚ್ಚು ಯೋಧರು ಹತರಾಗಿರುವುದಾಗಿ ಪುನರುಚ್ಚರಿಸಿದ ಅವರು, ಕಮಾಂಡರ್​ ಮಟ್ಟದ ಸಭೆಯಲ್ಲಿ ವಾಸ್ತವ ಗಡಿರೇಖೆಯಲ್ಲಿ ಯೋಧರು ಯಾರೂ ಇರಬಾರದು ಎಂದು ನಿರ್ಧರಿಸಲಾಗಿತ್ತು. ಆದರೆ, ತಮ್ಮ ಭಾಗದ ಪ್ರದೇಶದಲ್ಲಿ ಭಾರತೀಯ ಯೋಧರು ಇದನ್ನು ಪರಿಶೀಲಿಸಲು ಹೋದಾಗ, ಅಲ್ಲಿ ಚೀನಾ ಯೋಧರು ಇರುವುದು ಪತ್ತೆಯಾಯಿತು. ಜತೆಗೆ, ಅಲ್ಲೊಂದು ಟೆಂಟ್​ ಹಾಕಿರುವುದು ಗೊತ್ತಾಯಿತು ಎಂದು ವಿವರಿಸಿದ್ದಾರೆ.
ಆ ಟೆಂಟ್​ ಅನ್ನು ತೆಗೆದು ಹಾಕುವಂತೆ ಭಾರತದ ಕಮಾಂಡಿಂಗ್​ ಆಫೀಸರ್​ ಹೇಳಿದ್ದರು. ಅದರಂತೆ ಅವರು ಟೆಂಟ್​ ತೆಗೆಯುವಾಗ ಹಠಾತ್ತನೆ ಅದರಲ್ಲಿ ಬೆಂಕಿ ಕಾಣಿಸಿಕೊಂಡಿತು. ಇದು ಉಭಯ ರಾಷ್ಟ್ರದ ಯೋಧರ ನಡುವಿನ ಘರ್ಷಣೆಗೆ ಕಾರಣವಾಯಿತು ಎಂದು ಹೇಳಿದ್ದಾರೆ.
‘ಕೊವಿಡ್​-19 ಸೋಂಕನ್ನು ಜಗತ್ತಿಗೆ ಕಳಿಸಿದ್ದು ಭಗವಾನ್​ ಶ್ರೀಕೃಷ್ಣ…’: ಕಾಂಗ್ರೆಸ್​ ಮುಖಂಡನ ವಾದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
