ಮುಂಬೈ:ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಎರಡು ತಿಂಗಳ ಬಳಿಕವೂ ತನಿಖೆಯಲ್ಲಿ ಅಚ್ಚರಿಯ ಸಂಗತಿಗಳು ಹೊರ ಬೀಳುತ್ತಲೇ ಇವೆ.
ಬಾಂದ್ರಾದಲ್ಲಿರುವ ಮನೆಯಲ್ಲಿ ಜೂನ್​ 14ರಂದು ಸುಶಾಂತ್​ ಸಿಂಗ್​ ದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ಥಳಕ್ಕೆ ಬಂದು ಮಹಜರು ಅಥವಾ ಪಂಚನಾಮೆ ನಡೆಸಿದ್ದ ಪೊಲೀಸರ ವರದಿಯಲ್ಲಿ ಆಶ್ಚರ್ಯಕರ ಸಂಗತಿಯೊಂದು ಬಯಲಾಗಿದೆ.
ಇದನ್ನೂ ಓದಿ;ಭಾರತದಲ್ಲಿ ಬಿಜೆಪಿ, ಆರ್​ಎಸ್​ಎಸ್​ ನಿಯಂತ್ರಣದಲ್ಲಿದೆಯೇ ಫೇಸ್​ಬುಕ್..? ಕೆಸರೆರಚಾಟಕ್ಕೆ ಕಾರಣವೇನು?
ಸುಶಾಂತ್​ ಸಿಂಗ್​ ಬೆಡ್​ರೂಮ್​ನಲ್ಲಿ ಮಂಚದ ಮೇಲಿದ್ದ ಹಾಸಿಗೆಯಿಂದ ಫ್ಯಾನ್​ವರೆಗಿನ ಎತ್ತರ 5 ಅಡಿ 11 ಅಂಗುಲ ಇದೆ. ಆದರೆ, ಸುಶಾಂತ್​ ಎತ್ತರ 5 ಅಡಿ 10 ಅಂಗುಲ ಇರುವುದು ಗೊತ್ತಾಗಿದೆ. ಹೀಗಿರುವಾಗ ಅಷ್ಟು ಎತ್ತರದ ವ್ಯಕ್ತಿ ಫ್ಯಾನಿನಿಂದ ನೇತಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದ್ದಿದೆ.
ಈ ಪ್ರಶ್ನೆಯೇ ಸುಶಾಂತ್​ ಸಿಂಗ್​ ರಜಪೂತ್​ನದ್ದು ಆತ್ಮಹತ್ಯೆ ಎಂಬ ವಾದವನ್ನೇ ಪೊಳ್ಳು ಮಾಡುತ್ತದೆ. ಇದಲ್ಲದೇ, ಆತ್ಮಹತ್ಯೆಗೆ ಸ್ನಾನಗೃಹದ ನಿಲುವಂಗಿಯ ಬೆಲ್ಟ್​ ಬಳಸಿದ್ದ. ಅದು ತುಂಡಾಗಿತ್ತು. ಹಾಸಿಗೆ ಮೇಲೆಯೇ ಬಿದ್ದಿತ್ತು ಎಂಬುದು ಕೂಡ ಪೊಲೀಸ್​ ವರದಿಯಲ್ಲಿಯೇ ಇದೆ.
ಇದನ್ನೂ ಓದಿ;ಸೆ.6ರವರೆಗೂ ಲಾಕ್​ಡೌನ್​ ವಿಸ್ತರಣೆ; ನಿರ್ಬಂಧಗಳನ್ನು ಹಿಂದಿನಂತೆಯೇ ಮುಂದುವರಿಸಿದ್ದೆಲ್ಲಿ?
ಕೊನೆಗೆ ಹಸಿರುಕುರ್ತಾ ಬಳಸಿಕೊಂಡು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮುಂಬೈ ಪೊಲೀಸರು ಹೇಳಿದ್ದರು. ಜತೆಗೆ ಫೊರೆನ್ಸಿಕ್​ ತನಿಖೆಯಲ್ಲೂ ಇದು ಖಚಿತವಾಗಿದೆ ಎಂದು ವರದಿ ನೀಡಿದ್ದರು. ತನಿಖೆ ಮುಂದುವರಿದಂತೆ ಹೊಸ ಹೊಸ ಸಂಗತಿಗಳ ಬಯಲಾಗುತ್ತಿರುವುದು ಪ್ರಕರಣವನ್ನು ಇನ್ನಷ್ಟು ಕಗ್ಗಂಟಾಗಿಸುತ್ತಿದೆ.
ಇದು ಭಾರಿ ಭಯಾನಕ ಕರೊನಾ; ಈಗಿನದ್ದಕ್ಕಿಂತಲೂ ಹತ್ತು ಮಾರಕ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − one =
Remember me
