ವಟಕರ:ತಮಗೆ ಸಿಕ್ಕಂತಹ ಚಿನ್ನಾಭರಣವನ್ನು ಅದರ ಮಾಲೀಕರಿಗೆ ಹಿಂದಿರುಗಿಸುವ ಮೂಲಕ ಮೈಸೂರು ಮೂಲದ ಇಬ್ಬರು ವ್ಯಕ್ತಿಗಳು ಪ್ರಾಮಾಣಿಕತೆಯನ್ನು ಮರೆದಿದ್ದಾರೆ. ಕೇರಳದ ಕುನಿಂಗದ್​ ನಿವಾಸಿ ರಾಜನ್​ ಎಂಬುವರ ಮನೆಯಲ್ಲಿ ಸಂಗ್ರಹಿಸಲಾದ ಹಳೇ ಶರ್ಟ್​ನ ಜೇಬಿನಲ್ಲಿ ಚಿನ್ನಾಭರಣ ಪತ್ತೆಯಾಗಿತ್ತು.
ಪತ್ತೆಯಾದ ಬಳಿಕ ತಕ್ಷಣ ಮೈಸೂರಿನಿಂದ ಬಸ್​ ಹತ್ತಿ ಕುನಿಂಗದ್​ಗೆ ಬಂದ ವ್ಯಕ್ತಿಗಳಿಬ್ಬರು ಮಾಲೀಕರಿಗೆ ಚಿನ್ನಾಭರಣ ಒಪ್ಪಿಸಿದ್ದಾರೆ. ಇಬ್ಬರ ಪ್ರಾಮಾಣಿಕತೆಗೆ ಮಾರುಹೋದ ರಾಜನ್​ ಮತ್ತು ಪತ್ನಿ ರಜಿತಾ ಅವರಿಬ್ಬರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ವಿವರಣೆಗೆ ಬರುವುದಾರೆ, ಮೈಸೂರಿನ ಎಸ್​ಎಸ್​ ಮನೋಜ್​ ಸೇವಾಶ್ರಮ ಟ್ರಸ್ಟ್​ನ ಕಾರ್ಯಕರ್ತರಾದ ಸುನೀಲ್​ ಮತ್ತು ತುಕ್ಕಾರಾಮ್​ ಚಾರಿಟಿ ಕೆಲಸದ ಭಾಗವಾಗಿ ಹಳೇ ಬಟ್ಟೆಗಳನ್ನು ಸಂಗ್ರಹಿಸಲು ಕೇರಳಕ್ಕೆ ಭೇಟಿ ನೀಡಿದ್ದರು. ಸೋಮವಾರ ರಾಜನ್​ ಮನೆಗೆ ಭೇಟಿ ನೀಡಿ, ಹಳೇ ಬಟ್ಟೆಗಳಿಗೆ ಮನವಿ ಮಾಡಿದ್ದರು. ರಾಜನ್​ ಮತ್ತು ಪತ್ನಿ ರಜಿತಾ ಎರಡು ಶರ್ಟ್ಸ್​ ಮತ್ತು ಎರಡು ಧೋತಿಗಳನ್ನು ಕೊಟ್ಟಿದ್ದರು.
ಇದನ್ನೂ ಓದಿರಿ:ಗಂಡನನ್ನು ಬಿಡಲು ಇಷ್ಟವಿಲ್ಲ ಆದ್ರೆ ಬೇರೆಯವರ ಜತೆ ಮಲಗಲು ಮನಸ್ಸು ಬಯಸುತ್ತಿದೆ ಏನು ಮಾಡಲಿ?
ಆದರೆ, ರಜಿತಾ ಅವರು ಚಿನ್ನದ ಸರ ಮತ್ತು ರಿಂಗ್​ ಅನ್ನು ಪಾಕೆಟ್​ನಲ್ಲಿಟ್ಟು ಅದನ್ನು ಶರ್ಟ್​ ಜೇಬ್​ನಲ್ಲಿ ಹಾಕಿದ್ದರು. ಅದನ್ನು ಗಮನಿಸದೇ ಶರ್ಟ್​ ಅನ್ನು ಟ್ರಸ್ಟ್​ ಕಾರ್ಯಕರ್ತರಿಗೆ ನೀಡಿದ್ದರು. ಅವರು ಸಹ ಶರ್ಟ್​ ಅನ್ನು ಗಮನಿಸದೇ ಅಲ್ಲಿಂದ ತೆರಳಿದ್ದರು. ತಾನೂ ಕೊಟ್ಟಂತಹ ಶರ್ಟ್​ನಲ್ಲಿ ಚಿನ್ನಾಭರಣ ಇದೆ ಎಂದು ಅದೇ ಸಂಜೆ ರಜಿತಾಗೆ ಗೊತ್ತಾಗಿದೆ. ಆದರೆ, ಸಂಗ್ರಹಿಸಲು ಬಂದಿದ್ದವರ ಬಗ್ಗೆ ಯಾವುದೇ ಸುಳಿವು ಇರಲಿಲ್ಲ.
ಇದಾದ ಬಳಿಕ ರಜಿತಾ ಮತ್ತು ಆಕೆತ ಪತಿ ನಾದಪುರಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅಲ್ಲದೆ, ಚಿನ್ನಾಭರಣ ಕಳೆದುಕೊಂಡು ತುಂಬಾ ದುಃಖದಲ್ಲಿದ್ದರು. ಹೀಗಿರುವಾಗ ಮಂಗಳವಾರ ಸುನೀಲ್​ ಮತ್ತು ತುಕಾರಾಮ್​ ರಜಿತಾ ಅವರ ಮನೆಗೆ ಭೇಟಿ ನೀಡಿ ಚಿನ್ನಾಭರಣ ಹಿಂದಿರುಗಿಸಿದ್ದಾರೆ.
ಆಭರಣ ಪಡೆಯುತ್ತಿದ್ದಂತೆ ರಜಿತಾ ಅವರ ಕಣ್ಣಲ್ಲಿ ನೀರು ತುಂಬಿಕೊಂಡಿತಂತೆ. ಮತ್ತೆ ತಂದು ಕೊಡುತ್ತಾರೆ ಎಂಬ ನಿರೀಕ್ಷೆಯು ಇರಲಿಲ್ಲವಂತೆ. ಆದರೆ, ಸುನೀಲ್​ ಮತ್ತು ತುಕಾರಾಮ್​ ಆಭರಣ ಮರಳಿಸಿದ್ದಕ್ಕೆ ತುಂಬಾ ಧನ್ಯವಾದಗಳನ್ನು ರಾಜನ್​ ದಂಪತಿ ಹೇಳಿದೆ.
ಇದನ್ನೂ ಓದಿರಿ:24 ವರ್ಷದ ಹಿಂದೆ ಮಾಡಿದ್ದ ತಪ್ಪಿಗಾಗಿ ಸರ್ಕಾರಿ ಕೆಲಸ ಕಳೆದುಕೊಂಡ ಮಹಿಳೆ..!
ಸುನೀಲ್​ ಮತ್ತು ತುಕಾರಾಮ್​ ಮಾತನಾಡಿ, ಸೋಮವಾರ ರಾತ್ರಿ ಬಟ್ಟೆ ಮಡಚುವಾಗ ಶರ್ಟ್​ ಜೇಬಿನಲ್ಲಿದ್ದ ಪಾಕೆಟ್​ನಲ್ಲಿ ಚಿನ್ನಾಭರಣ ಇರುವುದನ್ನು ಗಮನಿಸಿದೆವು. ರಜಿತಾ ಅವರೇ ಈ ಶರ್ಟ್​ ಕೊಟ್ಟರೆಂದು ನಮಗೆ ಖಾತ್ರಿಯಿತ್ತು. ಹಳೇ ಬಟ್ಟೆಗಳನ್ನು ಕೊಡಿ ಎಂದರು, ಕೆಲವೇ ದಿನಗಳು ಬಳಸಿದ್ದ ಉತ್ತಮ ಬಟ್ಟೆಗಳನ್ನೇ ಕೊಟ್ಟಿದ್ದರು. ಸತ್ಯಾಂಶ ಗೊತ್ತಾದ ಬಳಿಕ ಮಂಗಳವಾರ ಬೆಳಗ್ಗೆ ಕುನಿಂಗದ್​ಗೆ ತೆರಳಿ ಆಭರಣ ಹಿಂದಿರುಗಿಸಿದೆವು. ನಮ್ಮ ಧ್ಯೇಯವೇ ಸೇವೆ ಮಾಡುವುದು. ಸೇವೆಗಿಂತ ಬೇರೆ ಯಾವುದನ್ನು ನಾವು ನಿರೀಕ್ಷಿಸುವುದಿಲ್ಲ ಎಂದಿದ್ದಾರೆ.(ಏಜೆನ್ಸೀಸ್​)
ವಿದ್ಯಾರ್ಥಿನಿ ಜತೆ ಲೆಕ್ಚರರ್​ ಮಗನ ಕಾಮಪುರಾಣ! 3 ವರ್ಷದಿಂದ ಲವ್​-ಸೆಕ್ಸ್​-ಅಬಾರ್ಷನ್​​: ಮುಂದೇನಾಯ್ತು?

ಮಲತಾಯಿಯಿಂದಲೇ ಕೊಲೆಗೆ ಸುಪಾರಿ; ಮಾಜಿ ಸಿಎಂ ಧರ್ಮಸಿಂಗ್ ಸಂಬಂಧಿ ಸಿದ್ಧಾರ್ಥ್ ಕೊಲೆ ಪ್ರಕರಣ, ಮಹಿಳೆಯ ಬಂಧನ..

ಯುವರಾಜ್ ದುಡ್ಡು ವಾಪಸ್ ಕೊಟ್ಟ ರಾಧಿಕಾ; ಪತ್ನಿ ಹೆಸರಲ್ಲೂ ಅಪಾರ ಆಸ್ತಿ ಮಾಡಿರುವ ಸ್ವಾಮಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 11 =
Remember me
