ಬೆಂಗಳೂರು/ನವದೆಹಲಿ:ಭಯೋತ್ಪಾದನೆ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ರಾಷ್ಟ್ರೀಯ ತನಿಖಾ ದಳ(ಎನ್​ಐಎ) ಕಾಶ್ಮೀರ, ಬೆಂಗಳೂರು ಸೇರಿ ದೇಶದ 12 ಕಡೆ ಸರ್ಕಾರೇತರ ಸಂಸ್ಥೆಗಳು (ಎನ್​ಜಿಒ) ಮತ್ತು ಇತರ ಸಂಘಟನೆಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದೆ.
ಎನ್​ಜಿಒ ಹೆಸರಿನಲ್ಲಿ ಉಗ್ರ ಸಂಘಟನೆಗಾಗಿ ಹಣ ಸಂಗ್ರಹಿಸಿದ ಆರೋಪಕ್ಕೀಡಾಗಿರುವ ಜಮ್ಮು ಕಾಶ್ಮೀರ ಕೊಲಿಯೇಷನ್ ಆಫ್ ಸಿವಿಲ್ ಸೊಸೈಟಿ (ಜೆಕೆಸಿಸಿಎಸ್) ಜತೆ ನಿಕಟ ಸಂಪರ್ಕ ಹೊಂದಿದ್ದಾರೆನ್ನಲಾದ ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ಸ್ವಾತಿ ಶೇಷಾದ್ರಿ ಎಂಬ ಮಹಿಳೆ ಮನೆ ಮೇಲೆ ದಾಳಿ ನಡೆಸಿದ ಎನ್​ಐಎ ತಂಡ ಅವರ ಪೂರ್ವಾಪರವನ್ನು ಜಾಲಾಡಿದೆ. ಕರ್ನಾಟಕ ಉಗ್ರರ ತಾಣವಾಗುತ್ತಿದೆಯೆಂಬ ಆತಂಕದ ನಡುವೆಯೇ ಈಗ ಭಯೋತ್ಪಾದನಾ ಚಟುವಟಿಕೆಗಳಿಗೆ ಇಲ್ಲಿ ಹಣ ಸಂಗ್ರಹದ ಆಯಾಮವೂ ಸಿಕ್ಕಿರುವುದರಿಂದ ಉಗ್ರಜಾಲದ ಬೇರು ವಿಸ್ತರಿಸಿರುವ ಶಂಕೆ ವ್ಯಕ್ತವಾಗಿದೆ.
ಜಮ್ಮು ಕಾಶ್ಮೀರ ಕೊಲಿಯೇಷನ್ ಆಫ್ ಸಿವಿಲ್ ಸೊಸೈಟಿ ಸಂಯೋಜಕ ಖುರ›ಮ್ ಪರ್ವೆಜ್ ಜತೆ ಒಡನಾಟ ಇದ್ದ ಕೆಲವರ ಮನೆ ಮೇಲೆ ಇಡೀ ದಿನದ ದಾಳಿ ಕೇಂದ್ರೀಕೃತವಾಗಿತ್ತು. ಸ್ವಾತಿ ಶೇಷಾದ್ರಿ ಸಹ ಈತನ ಜತೆ ಬಹು ದಿನಗಳಿಂದ ಸಂಪರ್ಕ ಹೊಂದಿದ್ದರೆನ್ನಲಾಗಿದೆ. 2000ರಲ್ಲಿ ಅಸ್ತಿತ್ವಕ್ಕೆ ಬಂದ ಜೆಕೆಸಿಸಿಎಸ್ ಶ್ರೀನಗರದ ಎನ್​ಜಿಒ ಆಗಿದ್ದು, ಶಂಕಿತ ಭಯೋತ್ಪಾದಕರಿಗೆ ವಿಧ್ವಂಸಕ ಕೃತ್ಯ ಎಸಗುವುದಕ್ಕಾಗಿ ಹಣಕಾಸು ನೆರವು ನೀಡಿರುವ ಆರೋಪಕ್ಕೆ ಗುರಿಯಾಗಿದೆ.
ಹಲವು ದಾಖಲೆ ಜಪ್ತಿ:ಬುಧವಾರ ಬೆಳಗ್ಗೆ ಬೆಂಗಳೂರಿನ ಥಣಿಸಂದ್ರದಲ್ಲಿರುವ ಜೆಕೆಸಿಸಿಎಸ್ ಕಚೇರಿಗೆ ತೆರಳಿದ ಎನ್​ಐಎ ತಂಡ ಯಾವುದೇ ದಾಖಲೆ ಸಿಗದೆ ಸ್ವಾತಿ ಶೇಷಾದ್ರಿ ಮನೆ ಮೇಲೆ ದಾಳಿ ನಡೆಸಿತು. ಈ ವೇಳೆ ಕೆಲ ದಾಖಲೆಗಳ ಜತೆಗೆ ಡಿಜಿಟಲ್ ಸಾಕ್ಷ್ಯ , ಎಲೆಕ್ಟ್ರಾನಿಕ್ ಡಿವೈಸ್​ಗಳನ್ನು ಜಪ್ತಿ ಮಾಡಿದೆ. ಸ್ವಾತಿ ಭಯೋತ್ಪಾದಕ ಕೃತ್ಯಕ್ಕೆ ಸಹಕರಿಸಿರುವುದಕ್ಕೆ ಸಂಬಂಧಿಸಿದ ದಾಖಲೆ ಪತ್ತೆಯಾದರೆ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ.
ದೇಶದ ವಿವಿಧೆಡೆ ಕಚೇರಿ ಹೊಂದಿರುವ ಜೆಕೆಸಿಸಿಎಸ್, ಎನ್​ಜಿಒ ಎಂದು ಗುರುತಿಸಿಕೊಂಡು ದೇಶ ಹಾಗೂ ವಿದೇಶಗಳಿಂದ ಹಣ ಸಂಗ್ರಹಿಸುತ್ತಿತ್ತು. ಈ ಹಣವನ್ನು ಉಗ್ರ ಸಂಘಟನೆಗೆ ಪರೋಕ್ಷವಾಗಿ ನೀಡಿರುವ ಗಂಭೀರ ಆರೋಪವಿದೆ. ಬೆಂಗಳೂರಿನಲ್ಲಿರುವ ಕಚೇರಿಯಲ್ಲೂ ಹಣ ಸಂಗ್ರಹಿಸಿರುವ ಬಗ್ಗೆ ಆರೋಪ ಕೇಳಿಬಂದಿತ್ತು. ಈ ಕುರಿತು ದೂರು ದಾಖಲಿಸಿಕೊಂಡಿದ್ದ ಎನ್​ಐಎ ತಂಡ ಇದರ ಜಾಡು ಹಿಡಿದು ಹೊರಟಾಗ ಹಣ ಸಂಗ್ರಹಿಸಿರುವ ದಾಖಲೆಗಳ ಬಗ್ಗೆ ಸುಳಿವು ಸಿಕ್ಕಿತ್ತು. ಹಣ ಪಡೆದವರ ಮನೆ ಮೇಲೆ ದಾಳಿ ನಡೆಸಿರುವ ಎನ್​ಐಎ ಇದೀಗ ತನಿಖೆಯನ್ನು ಚುರುಕುಗೊಳಿಸಿದೆ.
ಶ್ರೀನಗರ: ಭಯೋತ್ಪಾದಕರಿಗೆ ಹಣಕಾಸು ನೆರವು ಒದಗಿಸಿದ ಪ್ರಕರಣವೊಂದರ ಸಂಬಂಧ ಸರ್ಕಾರೇತರ ಸಂಸ್ಥೆಗಳು (ಎನ್​ಜಿಒ) ಹಾಗೂ ಒಂದು ಸ್ಥಳೀಯ ಪತ್ರಿಕಾ ಕಚೇರಿ ಸಹಿತ ಹತ್ತು ಸ್ಥಳಗಳಲ್ಲಿ ಎನ್​ಐಎ ಅಧಿಕಾರಿಗಳು ಶೋಧ ನಡೆಸಿದರು. ಈ ಎಲ್ಲ ಸಂಸ್ಥೆಗಳು ಭಯೋತ್ಪಾದನೆ ಚಟುವಟಿಕೆಗಳಿಗಾಗಿ ಅನಾಮಿಕ ದಾನಿಗಳಿಂದ ಹಣ ಪಡೆಯುತ್ತಿದ್ದವೆಂದು ಎನ್​ಐಎ ತಿಳಿಸಿದೆ. ಶ್ರೀನಗರದ ಜತೆಗೆ ಉತ್ತರ ಕಾಶ್ಮೀರದ ಬಂಡಿಪುರದಲ್ಲೂ ದಾಳಿ ನಡೆಸಲಾಗಿದೆ. ಜಮ್ಮು-ಕಾಶ್ಮೀರ ನಾಗರಿಕ ಸಮಾಜ ಮೈತ್ರಿಕೂಟದ ಸಂಯೋಜಕ ಖುರ›ಮ್ ಪರ್ವೆಜ್, ಆತನ ಸಹಚರರಾದ ಪರ್ವೆಜ್ ಅಹಮದ್ ಬುಖಾರಿ, ಪರ್ವೆಜ್ ಅಹಮದ್ ಮಟ್ಟಾ, ನಾಪತ್ತೆಯಾಗಿರುವ ವ್ಯಕ್ತಿಗಳ ಪಾಲಕರ ಸಂಘದ ಅಧ್ಯಕ್ಷೆ ಪರ್ವೀನಾ ಅಹಂಗೇರ್, ಎನ್​ಜಿಒ ಅಥ್​ರೂಟ್ ಮತ್ತು ಗ್ರೇಟರ್ ಕೈಲಾಶ್ ಟ್ರಸ್ಟ್​ನ ನಿವಾಸ, ಕಚೇರಿ ಮೇಲೆ ದಾಳಿ ನಡೆಸಿ ದಾಖಲೆ ವಶಪಡಿಸಿಕೊಂಡಿದೆ.
ಮೆಹಬೂಬಾ ಖಂಡನೆ:ಎನ್​ಐಎ ದಾಳಿ ಭಿನ್ನಮತದ ಮೇಲಿನ ದಾಳಿಯಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಖಂಡಿಸಿದ್ದಾರೆ. ‘ಪತ್ರಿಕೆಗಳು ಜಮ್ಮು ಮತ್ತು ಕಾಶ್ಮೀರದ ಭೂಮಿ ಮತ್ತು ಸಂಪನ್ಮೂಲಗಳನ್ನು ದೋಚುತ್ತಿರುವ ಬಗೆಗಿನ ಲೇಖನಗಳಿಗಿಂತ ಮಧುಮೇಹ ಮತ್ತು ಯೋಗ ಕುರಿತ ಲೇಖನಗಳನ್ನು ಪ್ರಕಟಿಸಬೇಕೆಂಬುದು ಕೇಂದ್ರ ಸರ್ಕಾರದ ಬಯಕೆಯಾಗಿದೆ’ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.
ಚಿನ್ನದ ಸ್ಮಗ್ಲಿಂಗ್​ ಕೇಸ್​: ಜಾಮೀನು ತಿರಸ್ಕೃತ- ಐಎಎಸ್​ ಅಧಿಕಾರಿ ಅರೆಸ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
