ನವದೆಹಲಿ: ಮಹತ್ವಾಕಾಂಕ್ಷೆಯ ಟ್ಯಾಂಕ್-ನಿರೋಧಕ ಕ್ಷಿಪಣಿ ‘ನಾಗ್’ (ಎಟಿಜಿಎಂ ನಾಗ್)ನ ಅಂತಿಮ ಪರೀಕ್ಷೆ ರಾಜಸ್ಥಾನದ ಪೋಖರಣ್ ಸೇನಾ ರೇಂಜ್​ನಲ್ಲಿ ಗುರುವಾರ ಯಶಸ್ವಿಯಾಗಿ ನೆರವೇರಿತು. ನಿರುಪಯುಕ್ತವಾಗಿದ್ದ ಟ್ಯಾಂಕ್ ಒಂದರ ಮೇಲೆ ಸಜೀವ ಸಿಡಿತಲೆ ಬಳಸಿ ಈ ಪರೀಕ್ಷೆ ನಡೆಸಲಾಗಿದೆ ಎಂದು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಮೂಲಗಳು ತಿಳಿಸಿವೆ.
ಹತ್ತು ಯಶಸ್ವಿ ಪ್ರಯೋಗ ಪೂರ್ಣಗೊಳಿಸಿರುವುದರಿಂದ ನಾಗ್ ಕ್ಷಿಪಣಿ ಸೇನೆಗೆ ಶೀಘ್ರವೇ ಸೇರ್ಪಡೆಯಾಗಲಿದ್ದು, ಲಡಾಖ್​ನಲ್ಲಿ ನಿಯೋಜಿಸಲು ಚಿಂತನೆ ನಡೆದಿದೆ. ನಾಲ್ಕು ಕಿಲೋ ಮೀಟರ್ ವ್ಯಾಪ್ತಿಯ ಗುರಿ ತಲುಪಬಲ್ಲ ಈ ಕ್ಷಿಪಣಿಗಳನ್ನು ಇನ್ನು ಮುಂದೆ ಇಸ್ರೇಲ್ ಅಥವಾ ಅಮೆರಿಕದಿಂದ ಆಮದು ಮಾಡಿಕೊಳ್ಳುವ ಅಗತ್ಯವಿಲ್ಲ. ಶತ್ರು ಪಾಳೆಯದ ಗುರಿಯನ್ನು ಗುರುತಿಸಿ ಅದರ ಮೇಲೆ ದಾಳಿ ಮಾಡುವ ಸಾಮರ್ಥ್ಯವನ್ನು ನಾಗ್ ಗಳಿಸಿದೆ. ರಾತ್ರಿ ವೇಳೆಯೂ ಕಾರ್ಯಾಚರಣೆ ನಡೆಸುವಂತೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಭೂಮಿ ಮತ್ತು ಸಮುದ್ರ ಎರಡೂ ಕಡೆಯಿಂದ ಉಡಾವಣೆ ಸಾಧ್ಯವಾಗಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಡಾರ್ನಿಯರ್​ ವಿಮಾನ ಚಲಾಯಿಸಲು ಸಿದ್ಧವಾಗಿದೆ ಮೊದಲನೇ ಮಹಿಳಾ ಪೈಲಟ್ ತಂಡ
ಟ್ಯಾಂಕ್-ನಿರೋಧಕ ಅಸ್ತ್ರ ಇಲ್ಲದ ಕಾರಣ ಭಾರತ ತುರ್ತಾಗಿ ಇಸ್ರೇಲ್​ನಿಂದ 200 ಸ್ಟ್ರೈಕ್ ಟ್ಯಾಂಕ್-ನಿರೋಧಕ ಕ್ಷಿಪಣಿಗಳನ್ನು ಖರೀದಿಸಿತ್ತು. ಗಲ್ವಾನ್ ಸಂಘರ್ಷದ ನಂತರ ಅವುಗಳನ್ನು ಖರೀದಿಸಲಾಗಿತ್ತು. ಭಾರತವನ್ನು ಹಣಿಯಲೆಂದು ಚೀನಾ ಆಕ್ರಮಿತ ಅಕ್ಸಾಯ್ ಚಿನ್​ನಲ್ಲಿ ಭಾರಿ ಪ್ರಮಾಣದಲ್ಲಿ ಸೈನಿಕರು, ರಾಕೆಟ್​ಗಳು ಮತ್ತು ಟ್ಯಾಂಕ್​ಗಳನ್ನು ಜಮಾಯಿಸಿದ ನಂತರ ಈಗ ಟ್ಯಾಂಕ್-ನಿರೋಧಕ ಕ್ಷಿಪಣಿಗಳ ನಿಯೋಜನೆಗೆ ಆದ್ಯತೆ ನೀಡಲಾಗುತ್ತಿದೆ. (ಏಜೆನ್ಸೀಸ್)
#WATCH: The successful final trial of Nag anti-tank guided missile conducted earlier today at Pokhran field firing ranges in Rajasthan.
The missile is now ready for induction into the armed forces.pic.twitter.com/lsExIBbefR
— ANI (@ANI)October 22, 2020

‘ಭಾಗ್ಯಲಕ್ಷ್ಮಿ’ ಇನ್ನು ‘ಸುಕನ್ಯಾ ಸಮೃದ್ಧಿ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two − 2 =
Remember me
