ಕೊಹಿಮಾ:ಕಣಿವೆಗಳ ಮೇಲೆ ಹರಿಯುತ್ತಿರುವ ಈ ದೃಶ್ಯ ಸುಂದರವಾಗಿಲ್ಲವೇ..? ಎಂದು ಪ್ರಶ್ನಿಸುವ ಮೂಲಕ ನಾಗಾಲ್ಯಾಂಡ್ ಬುಡಕಟ್ಟು ಸಚಿವ ತೆಮ್ಜೆನ್ ಇಮ್ನಾ ಅವರು ತಮ್ಮ ಟ್ವೀಟ್​ ಖಾತೆಯಲ್ಲಿ ವಿಡಿಯೋ ಸಮೇತ ಹಂಚಿಕೊಂಡಿದ್ದಾರೆ.
ಪ್ರಕೃತಿ ಹಲವಾರು ವೈಶಿಷ್ಟ್ಯತೆಗಳನ್ನು ತನ್ನಲ್ಲಿ ಹುದುಗಿಸಿಕೊಂಡಿದ್ದು, ಹಲವು ಅಚ್ಚರಿಗಳ ಘಟನೆಗೆ ಸಾಕ್ಷಿಯಾಗಿದೆ. ಭೂಮಿಯಲ್ಲಿ ವಿಶೇಷ ಹಾಗೂ ಸುಂದರ ಸ್ಥಳಗಳು ಮನುಷ್ಯನನ್ನು ಮಂತ್ರಮುಗ್ದಗೊಳಿಸುತ್ತಿರುತ್ತವೆ.ಅಂತಹ ವಿಶೇಷ ಹಾಗೂ ವಿಸ್ಮಯ ದೃಶ್ಯವನ್ನು ಹಂಚಿಕೊಳ್ಳುವ ಮೂಲಕ ಸಚಿವ ತೆಮ್ಜೆನ್​​, ಈ ಸುಂದರ ದೃಶ್ಯವನ್ನು ನೀವೊಮ್ಮೆ ನೋಡಿ ಕಣ್ತುಂಬಿಕೊಳ್ಳಿ ಎಂದಿದ್ದಾರೆ.
https://twitter.com/AlongImna/status/1551493514969886720?s=20&t=_384xNMA6Am4ZfpbjuJchQ
ಅಂದಹಾಗೆ ದೃಶ್ಯದಲ್ಲಿ ಏನಿದೆ ಎಂಬುದಾದರೆ ಅದೊಂದು ಸುಂದರವಾದ ಕಣಿವೆಗಳ ಪ್ರದೇಶವಾಗಿದ್ದು, ಕಣಿವೆಗಳ ಮೇಲೆ ಸಾವಿರಾರು ಮನೆಗಳಿವೆ. ಮನೆಗಳ ಮೇಲೆಯೇ ಮೋಡಗಳು ಹರಿಯುವಂತೆ ತೇಲುತ್ತಿವೆ. ಈ ಸುಂದರ ಹಾಗೂ ಅದ್ಭುತ ಕ್ಷಣವನ್ನು ಸಚಿವರು ಸೆರೆ ಹಿಡಿದು ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.
ಸಚಿವರು ಹಂಚಿಕೊಂಡಿರುವ ಈ ವಿಡಿಯೋ ಭಾರೀ ವೈರಲ್​ ಆಗುತ್ತಿದ್ದು, ಈ ಸುಂದರ ತಾಣಕ್ಕೆ ನಾವೊಮ್ಮೆ ಭೇಟಿ ನೀಡಬೇಕು ಎಂದು ಕೆಲವರು ಅಭಿಪ್ರಾಯಹಂಚಿಕೊಂಡಿದ್ದಾರೆ.(ಏಜೆನ್ಸೀಸ್​)
ಲಾಕ್​ಡೌನ್​ ವೇಳೆ ತಾನೇ ತಯಾರಿಸಿದ ವಿಮಾನದಲ್ಲಿ ಕುಟುಂಬ ಸಮೇತ ಯೂರೋಪ್​ ಸುತ್ತಿಬಂದ ಇಂಜಿನಿಯರ್!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × four =
Remember me
