ಕೊಹಿಮಾ:ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವವರಲ್ಲಿ ಪೊಲೀಸರಿಗೆ ಅಗ್ರಸ್ಥಾನ. ಇದೀಗ ನಾಗಾಲ್ಯಾಂಡ್​ನ ಪೊಲೀಸರ ತಂಡವೊಂದು ಬಿಡುವಿನ ವೇಳೆಯಲ್ಲಿ ನೊ ಲಾಫ್​ (No-Laugh Challenge) ಚಾಲೆಂಜ್ ಮಾಡಿ ಎಂಜಾಯ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ನಾಗಾಲ್ಯಾಂಡ್​ನ ಉನ್ನತ ಶಿಕ್ಷಣ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ತೆಮ್ಜೆನ್ ಇಮ್ನಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ 12 ಜನ ಪೊಲೀಸರ ತಂಡ ‘ನೊ ಲಾಫ್’ ಚಾಲೆಂಜ್​ ಆಟ ಆಡುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದು. ಒಬ್ಬೊಬ್ಬರಾಗಿ ಕೈಲಾಶ್ ಖೇರ್ ಅವರ ಪ್ರಸಿದ್ಧ ‘ಸೈಯಾನ್’ ಹಾಡನ್ನು ಹಾಡಿದ್ದಾರೆ. ಈ ವೇಳೆ ಯಾರು ನಗುತ್ತಾರೋ ಅವರ ತಲೆಗೆ ಎಲ್ಲರೂ ಕಾಗದದ ಕೋಲಿನಿಂದ ಹೊಡಯಬೇಕು ಎಂಬುವುದು ಆಟದ ನಿಯಮ.
ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಈ ವಿಡಿಯೋ ನಿಮ್ಮಲ್ಲಿ ಖಂಡಿತವಾಗಿಯೂ ನಗು ತರಿಸುತ್ತದೆ. ಜೀವನದಲ್ಲಿ ಕೆಲಸದ ಕಾರಣದಿಂದ ಎಷ್ಟೇ ಒತ್ತಡ ನಿರ್ಮಾಣವಾದರೂ, ಮಾನಸಿಕವಾಗಿ ಶಕ್ತಿಯುತವಾಗಿರಲು ಪ್ರಯತ್ನಿಸಬೇಕು. ನಮ್ಮ ರಾಜ್ಯದ ಪೊಲೀಸರ ಈ ವಿಡಿಯೋ ನೋಡಲು ಖುಷಿಯಾಗುತ್ತದೆ ಎಂದು ಬರೆದುಕೊಂಡಿದ್ದಾರೆ.
No matter how busy life gets, one should constantly try to be cheerful and energetic. ⚡️Came across this video while scrolling through Facebook.It is encouraging to see our front-line workers having fun outside of their demanding job schedules.pic.twitter.com/UHt9SrJyPW— Temjen Imna Along (@AlongImna)October 28, 2022
No matter how busy life gets, one should constantly try to be cheerful and energetic. ⚡️Came across this video while scrolling through Facebook.It is encouraging to see our front-line workers having fun outside of their demanding job schedules.pic.twitter.com/UHt9SrJyPW
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 1 =
Remember me
