ಜೈಪುರ:ಕರೊನಾ ಸೋಂಕಿನ ನಿಯಂತ್ರಣಕ್ಕೆಂದು ಅನೇಕ ರಾಜ್ಯಗಳು ಲಾಕ್​ಡೌನ್​ ಜಾರಿಗೊಳಿಸಿವೆ. ಜನರು ಅನಾವಶ್ಯಕವಾಗಿ ಮನೆಯಿಂದ ಹೊರ ಬಾರದಂತೆ ಎಚ್ಚರಿಸಲಾಗಿದೆ. ಆದರೆ ಕೆಲವರು ಲಾಕ್​ಡೌನ್​ ನಿಯಮಗಳನ್ನು ಗಾಳಿಗೆ ತೂರಿ, ಹೊರಗಡೆ ಸುತ್ತಾಡುತ್ತಿದ್ದು, ಅಂತವರಿಗೆ ಪೊಲೀಸರು ವಿಧ ವಿಧವಾಗಿ ಶಿಕ್ಷೆ ನೀಡಲಾರಂಭಿಸಿದ್ದಾರೆ.
ರಾಜಸ್ಥಾನದಲ್ಲಿ ಸದ್ಯ ಲಾಕ್​ಡೌನ್​ ಜಾರಿಯಲ್ಲಿದೆ. ಆದರೆ ಅದನ್ನು ಲೆಕ್ಕಿಸದ ಕೆಲ ಯುವಕರು ರಸ್ತೆಗಿಳಿಯುತ್ತಿದ್ದಾರೆ. ಅದೇ ರೀತಿ ಜಲಾವರ ಜಿಲ್ಲೆಯಲ್ಲೂ ಇಬ್ಬರು ಯುವಕರು ರಾತ್ರಿ ಹೊತ್ತು ಜಾಲಿ ರೈಡ್​ಗೆಂದು ಮನೆಯಿಂದ ಹೊರಬಂದಿದ್ದಾರೆ. ಅವರನ್ನು ತಡೆದ ಪೊಲೀಸರು ನಾಗಿಣಿ ಡಾನ್ಸ್​ ಮಾಡುವ ಶಿಕ್ಷೆ ನೀಡಿದ್ದಾರೆ. ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲೂ ಹರಿಬಿಡಲಾಗಿದೆ. ಸಮಾಜದೆದುರು ತಪ್ಪು ಮಾಡಿ, ನಾಚಿಕೆ ಅನುಭವಿಸಿದ ಯುವಕರು, ಲಾಕ್​ಡೌನ್​ ಮುಗಿಯುವವರೆಗೂ ಮನೆಯಿಂದ ಹೊರಬರುವುದಿಲ್ಲ ಎನ್ನುತ್ತಾ ಮನೆಗೆ ತೆರಳಿದ್ದಾರೆ.
ರಸ್ತೆಗಿಳಿಯೋ ಮುನ್ನ ಹುಷಾರ್​!ಕರೊನಾ ನಿಯಂತ್ರಣಕ್ಕಾಗಿ ಲಾಕ್​ಡೌನ್​ ಮಾಡಿದೀವಿ, ಮನೆಯಿಂದ ಯಾರೂ ಹೊರಗೆ ಬರಬೇಡಿ ಎಂದು ಅದೆಷ್ಟೇ ಹೇಳಿದರೂ ನಮ್ಮ ಯುವಜನತೆ ಅದನ್ನು ಕೇಳುತ್ತಿಲ್ಲ. ಅದೇ ಕಾರಣಕ್ಕೆ ರಾಜಸ್ಥಾನದ ಪೊಲೀಸರು ಕೊಟ್ಟ ಶಿಕ್ಷೆ ಹೇಗಿದೆ ನೋಡಿ..pic.twitter.com/q0UXIuqAPb
— Vijayavani (@VVani4U)May 18, 2021

ರಾಜಸ್ಥಾನ ಮಾತ್ರವಲ್ಲ ಕರ್ನಾಟಕ ಪೊಲೀಸರೂ ಇದೇ ರೀತಿ ವಿಶೇಷ ಶಿಕ್ಷೆಯನ್ನು ಲಾಕ್​ಡೌನ್​ ನಿಯಮ ಪಾಲಿಸದವರಿಗೆ ವಿಧಿಸಿದ್ದಾರೆ. ಬಸ್ಕಿ ಹೊಡೆಯುವ ಶಿಕ್ಷೆ, ಕಸ ಗುಡಿಸುವ ಶಿಕ್ಷೆ, ಅವರ ಕೆನ್ನೆಗೆ ಅವರೇ ಹೊಡೆದುಕೊಳ್ಳುವ ಶಿಕ್ಷೆ ಹೀಗೆ ಅನೇಕ ರೀತಿಯ ಪ್ರಯತ್ನಗಳು ನಮ್ಮಲ್ಲೂ ನಡೆದಿವೆ. (ಏಜೆನ್ಸೀಸ್)
ನಿಂತಿದ್ದ ಆ್ಯಂಬುಲೆನ್ಸ್​ ಅಲ್ಲಾಡುತ್ತಿತ್ತು; ಹತ್ತಿರ ಹೋಗಿ ನೋಡಿದ ಪೊಲೀಸರಿಗೆ ಕಂಡಿದ್ದು ಬೇರೆಯದ್ದೇ ದೃಶ್ಯ!

ಸ್ನೇಹಿತೆಯ ಹೆಣ ಕಂಡವಳೇ ಅವಳ ಪರ್ಸ್​ಗೆ ಕೈ ಹಾಕಿ ದುಡ್ಡು ಕದ್ದಳು! ರೆಸ್ಟೋರೆಂಟ್​ನಲ್ಲಿ ಮಜಾ ಮಾಡಿ ಸಿಕ್ಕಿಬಿದ್ದ ಮಹಿಳೆ

ಕರೊನಾಕ್ಕೆ ಬಲಿಯಾದ ಮಗಳನ್ನು ಹೆಗಲ ಮೇಲೆ ಹೊತ್ತೊಯ್ದು ಅಂತ್ಯಸಂಸ್ಕಾರ ಮಾಡಿದ ತಂದೆ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eight + 3 =
Remember me
