ನಾಗ್ಪುರ:ದಾಂಪತ್ಯ ಜೀವನದಲ್ಲಿ ಉಂಟಾದ ಕಲಹದ ಕಾರಣಕ್ಕೆ ವ್ಯಕ್ತಿಯೊಬ್ಬನ ಐದನೇ ಹೆಂಡತಿ, ಗಂಡನನ್ನು ಕುರ್ಚಿಗೆ ಕಟ್ಟಿ ಸೆಕ್ಸ್​ ಮಾಡಿ, ನಂತರ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಪಿಂಚಣಿ ವಿಚಾರದಲ್ಲಿ ಮನೆಯಲ್ಲಿ ಜಗಳವಾಗಿದ್ದೇ ಈ ಕೊಲೆಗೆ ಕಾರಣ ಎನ್ನಲಾಗಿದೆ.
ನಾಗ್ಪುರದ ಲಕ್ಷ್ಮಣ ಮಲ್ಲಿಕ್​ಗೆ ಸ್ವಾತಿಯನ್ನು ಐದನೇ ಹೆಂಡತಿಯಾಗಿ ಸ್ವೀಕರಿಸಿದ್ದ. ದಂಪತಿಗೆ ಮೂರು ತಿಂಗಳ ಮಗುವೂ ಇದೆ. ಲಕ್ಷ್ಮಣ್​ಗೆ ನಿವೃತ್ತಿಯಾಗಿದ್ದು, ಆ ಪಿಂಚಣಿ ಹಣದಲ್ಲಿ ಗಂಡ ಹೆಂಡತಿ ನಡುವೆ ಜಗಳವಾಗುತ್ತಿತ್ತಂತೆ. ಅದೇ ಸಿಟ್ಟಿನಿಂದ ಆಕೆ ತವರು ಮನೆ ಸೇರಿಕೊಂಡಿದ್ದಾಳೆ. ಮಾರ್ಚ್​ 8ರಂದು ಗಂಡನ ಮನೆಗೆ ಬಂದು, ಆತನನ್ನು ಕುರ್ಚಿಯೊಂದರಲ್ಲಿ ಕೂರಿಸಿದ್ದಾಳೆ. ಅಶ್ಲೀಲ ವಿಡಿಯೋಗಳನ್ನು ಆತನಿಗೆ ತೋರಿಸಿದ್ದಾಳೆ. ನಂತರ ಆತನ ಎರಡೂ ಕೈಗಳನ್ನು ಕಟ್ಟಿದ್ದಾಳೆ. ಆತನೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದಾಳೆ.
ಅದಾದ ನಂತರ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಗಂಡನ ಕುತ್ತಿಗೆಗೆ ಇರಿದಿದ್ದಾಳೆ. ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. 9ನೇ ತಾರೀಖಿನಂದು ಪೊಲೀಸರಿಗೆ ಈ ವಿಚಾರ ತಿಳಿದುಬಂದಿದ್ದು, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಅದಾದ ನಂತರ ಸ್ವಾತಿಯ ಮೇಲೆ ಅನುಮಾನ ಬಂದು ಆಕೆಯನ್ನು ಹುಡುಕಿ ವಶಕ್ಕೆ ಪಡೆಯಲಾಗಿದೆ. ಪೊಲೀಸರ ತನಿಖೆಯಲ್ಲಿ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿರುವುದಾಗಿ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಕಾಂಗ್ರೆಸ್​ಗೆ ಬಿಗ್​ ಶಾಕ್​! ಪಕ್ಷ ತೊರೆದ 170 ಶಾಸಕರು: ಸಮೀಕ್ಷೆಯಿಂದ ಬಯಲಾಯ್ತು ಸತ್ಯ…

ಬಾಕ್ಸ್​ ಆಫೀಸ್​ ಸುಲ್ತಾನನೆಂಬುದು ಮತ್ತೆ ಸಾಬೀತು: ಮೊದಲ ದಿನವೇ ಸ್ಯಾಂಡಲ್​ವುಡ್​ ದಾಖಲೆ ಮುರಿದ ಡಿ ಬಾಸ್!​

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nine − seven =
Remember me
