ನಾಗ್ಪುರ:ನಾಗ್ಪುರ ನಗರದ ಕೈಗಾರಿಕಾ ಎಕ್ಸ್‌ಪೊ ಸಂದರ್ಭ ಶೌಚಾಲಯದಲ್ಲಿ ಮಹಿಳೆಯರ ವಿಡಿಯೋ ಚಿತ್ರೀಕರಿಸುತ್ತಿದ್ದ ಕಾಮುಕ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಎಜುಕೇಶನ್ ಎಕ್ಸಪೋದಲ್ಲಿ ನಿವೃತ್ತ ಮೇಜರ್ ಸಿ.ಎಸ್. ಆನಂದ ಕಾರ್ಯಾಗಾರ
ಬಂಧಿತ ಆರೋಪಿ ನಾಗ್ಪುರದ ಕಸರ್‌ಪುರದ ನಿವಾಸಿ 37 ವರ್ಷದ ಮಂಗೇಶ್ ವಿನಾಯಕ್ ರಾವ್ ಖರ್ಪೆ (37) ಎಂದು ಗುರುತಿಸಲಾಗಿದೆ. ಶೌಚಾಲಯದ ಕಿಟಕಿ ಮೂಲಕ ಮಹಿಳೆಯರ ವಿಡಿಯೋ ಮೊಬೈಲ್​ನಲ್ಲಿ ಚಿತ್ರೀಕರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮೂರು ದಿನಗಳ ಕೈಗಾರಿಕಾ ಎಕ್ಸ್​​ಪೋ ಅಡ್ವಾಂಟೇಜ್​ ವಿದರ್ಭ ಎಂಬ ಕಾರ್ಯಕ್ರಮವನ್ನು ನಾಗ್ಪುರ ವಿಶ್ವವಿದ್ಯಾಲಯದ ಕ್ಯಾಂಪಸ್​​ನಲ್ಲಿ ಆಯೋಜಿಸಲಾಗಿತ್ತು.
ವ್ಯಕ್ತಿಯೊಬ್ಬ ವಿಡಿಯೋ ಚಿತ್ರೀಕರಿಸುತ್ತಿದ್ದ ಬಗ್ಗೆ ಮಹಿಳೆಯೊಬ್ಬರು ಸಂಘಟಕರಿಗೆ ದೂರು ನೀಡಿದ್ದರು. ಬಳಿಕ, ತನಿಖೆ ನಡೆಸಿ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ನಗರದ ಪ್ರತಿಷ್ಠಿತ ಕಾಲೇಜಿನ ಕಲಾ ಶಿಕ್ಷಕನಾಗಿದ್ದು, ಫೆಸ್ಟಿವಲ್ ಗೇಟ್ ಅಲಂಕಾರಕ್ಕೆ ನಿಯೋಜಿಸಲಾಗಿತ್ತು. ಘಟನೆ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದ ಅಂಬಜಾರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿನಾಯಕ್ ಗೊಲ್ಹೆ ಮತ್ತು ಅವರ ತಂಡ ಆರೋಪಿಯನ್ನು ಪತ್ತೆ ಮಾಡಿದೆ.
ಎಕ್ಸ್ ಪೋ ಸಿದ್ಧತೆಯಲ್ಲಿ 4 ದಿನಗಳಿಂದ ಈತ ತೊಡಗಿಸಿಕೊಂಡಿದ್ದ ಎಂದು ವರದಿ ತಿಳಿಸಿದೆ. ಪೊಲೀಸರು ವಶಪಡಿಸಿಕೊಂಡ ಮೊಬೈಲ್‌ನಲ್ಲಿ ಹತ್ತಾರು ಮಹಿಳೆಯರ ವಿಡಿಯೊಗಳು ಪತ್ತೆಯಾಗಿದ್ದು, ಕೆಲವನ್ನು ಡಿಲೀಟ್ ಮಾಡಲಾಗಿದೆ ಎಂದು ಪರಿಶೀಲನೆ ವೇಳೆ ತಿಳಿದು ಬಂದಿದೆ. ಶಿಕ್ಷಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಲೋಕಸಭೆ ಚುನಾವಣೆ: 16 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಸಮಾಜವಾದಿ ಪಾರ್ಟಿ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × three =
Remember me
