ಮುಂಬೈ:ಸಿನಿಮಾ ಕಲಾವಿದರು ಎಂದರೆ ಪಾತ್ರಗಳಿಗೆ ತಕ್ಕಂತೆ ಬಣ್ಣ ಹಚ್ಚಿ ನಟನೆ ಮಾಡುತ್ತಾರೆ. ಪರದೆ ಮೇಲೆ ಕಣ್ಣೀರು, ನಗು, ಸಂಸಾರ, ಅಪ್ಪ, ಅಮ್ಮ, ಮದುವೆ ಎಂದು ನಟನೆ ಮಾಡುತ್ತಾರೆ. ಆದರೆ ಸೀರಿಯಲ್​ ನಟರೊಬ್ಬರು ಸ್ವತಃ ತಾವು ಅನುಭವಿಸುತ್ತೀರುವ ಕಷ್ಟವನ್ನು ಹೇಳಿಕೊಂಡಿದ್ದಾರೆ.
ಬಾಲಿವುಡ್ ಮತ್ತು ಟಿವಿ ಜಗತ್ತಿನಲ್ಲಿ ಒಬ್ಬ ನಟ ಒಂದಕ್ಕಿಂತ ಹೆಚ್ಚು ಮದುವೆ ಮಾಡಿಕೊಳ್ಳುವುದು ಸಾಮಾನ್ಯ. ಸಂಬಂಧಗಳು ರೂಪುಗೊಳ್ಳುವುದನ್ನು ಮತ್ತು ಹದಗೆಡುವುದನ್ನು ನಾವು ನೋಡುತ್ತೇವೆ. ಆದರೆ ಈ ಬಾರಿ ವಿಷಯ ಬೇರೆಯೇ ಇದೆ. ಬಡೇ ಅಚ್ಚೆ ಲಗ್ತೆ ಹೇ ಖ್ಯಾತಿಯ ನಕುಲ್ ಮೆಹ್ತಾ ಅವರು 18 ನೇ ಬಾರಿಗೆ ಮದುವೆಯಾಗಲಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಅದರ ವಿಡಿಯೋವನ್ನು ಅವರೇ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಅಂತಾರಾಷ್ಟ್ರೀಯ ಚುಂಬನ ದಿನ: ಮಾನಸಿಕ, ದೈಹಿಕ ಆರೋಗ್ಯಕ್ಕೆ ಸಾಕಾ ಒಂದು ಮುತ್ತು…
ಓಯ್​… ಗಾಬರಿಯಾಗಬೇಡಿ! ವಾಸ್ತವವಾಗಿ, ಟಿವಿ ನಟ ನಕುಲ್ ಮೆಹ್ತಾ ಅವರು ತಮ್ಮ ಜೀವನದಲ್ಲಿ 17 ಬಾರಿ ವರ ಆಗಿದ್ದಾರೆ ಮತ್ತು ಅವರ 18 ನೇ ಮದುವೆಗೆ ಸಿದ್ಧತೆ ನಡೆಯುತ್ತಿದೆ ಎಂದು ಇನ್​ಸ್ಟಾಗ್ರಾಮ್​​ನಲ್ಲಿ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಬಹಿರಂಗಪಡಿಸಿದ್ದಾರೆ. ಇಲ್ಲಿಯವರೆಗೆ ತೆರೆಮೇಲೆ 17 ಬಾರಿ ಮದುವೆಯಾಗಿದ್ದೇನೆ. ನಿಜ ಜೀವನದಲ್ಲಿ 1 ಬಾರಿ ಮದುವೆಯಾಗಿದ್ದೇನೆ. ನಾನು ಎಷ್ಟು ಬಾರಿ ಅಂತ ಮದುವೆಯಾಗಲಿ ಎಂದು ವಿಡಿಯೋದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
ಇದನ್ನೂ ಓದಿ:ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ ಯಾರು? ಯಾವ ನಗರದಲ್ಲಿದ್ದಾರೆ?
ನಕುಲ್ ಮೆಹ್ತಾ ಅವರು ಈ ವೀಡಿಯೊದಲ್ಲಿ ಈಗ ಅವರ ‘ಬಡೆ ಅಚ್ಚೆ ಲಗ್ತೆ ಹೇ ಸೀಸನ್ 3’ ನಲ್ಲಿ ತಮ್ಮ ಮತ್ತು ದಿಶಾ ಪರ್ಮಾರ್ ಅವರ ಮದುವೆಯ ದೃಶ್ಯ ಅಂದರೆ ರಾಮ್ ಮತ್ತು ಪ್ರಿಯಾ ಅವರ ವಿವಾಹದ ದೃಶ್ಯ ಚಿತ್ರೀಕರಣ ನಡೆಯುತ್ತಿದೆ. ಮತ್ತೆ ಮತ್ತೆ ಮದುಮಗ ಎಂದು ಬೇಸರದಿಂದ ಹೇಳಿದ್ದಾರೆ. ಅದೇನೇ ಇರಲಿ, ನಕುಲ್‌ನ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಅದೃಷ್ಟ ಎಂದರೆ ನಿಂದೆ ಗುರು ಎಂದು ನೆಟ್ಟಿಗರು ಕಾಮೆಂಟ್​​ ಮಾಡುತ್ತಿದ್ದಾರೆ.
A post shared by Nakuul Mehta (@nakuulmehta)
ನಿಜ ಜೀವನದಲ್ಲಿ, ನಕುಲ್ ಮೆಹ್ತಾ 2012ರಲ್ಲಿ ಜಾನಕಿ ಪರೇಖ್ ಅವರನ್ನು ವಿವಾಹವಾಗಿದ್ದಾರೆ. ಈ ದಂಪತಿಗೆ ಮುದ್ದಾದ ಮಗನಿದ್ದಾನೆ. ನಕುಲ್ ಮೆಹ್ತಾ ಇದುವರೆಗೆ ಕೇವಲ 4ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ ಆದರೆ ಅವರು ಜನರ ಪ್ರೀತಿಯನ್ನು ಪಡೆದಿದ್ದಾರೆ. ಅವರು ತೆಲುಗು ಚಲನಚಿತ್ರಗಳು ಮತ್ತು ಹಲವಾರು ವೆಬ್‌ಸರಣಿಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ನಿರ್ಮಾಪಕರೂ ಹೌದು.
ಅಂತಾರಾಷ್ಟ್ರೀಯ ಚುಂಬನ ದಿನ: ಮಾನಸಿಕ, ದೈಹಿಕ ಆರೋಗ್ಯಕ್ಕೆ ಸಾಕಾ ಒಂದು ಮುತ್ತು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 9 =
Remember me
