ಬೆಂಗಳೂರು:‘ನಮಸ್ಕಾರ ದೇವರು’ ಎನ್ನುತ್ತಲೇ ವಿಶ್ವಪರ್ಯಟನೆ ಮಾಡುತ್ತಿರುವ ಕನ್ನಡದ ಜಾಗತಿಕ ರಾಯಭಾರಿ ಡಾ.ಬ್ರೋ (ಗಗನ್ ಶ್ರೀನಿವಾಸ್​) ಈಗ ಒಂದು ಮಹತ್ವದ ಮಜಲನ್ನು ತಲುಪಿದ್ದಾರೆ. ಅರ್ಥಾತ್, ಇದೀಗ ಯೂಟ್ಯೂಬ್​ನಲ್ಲಿ ಅವರ ಸಬ್​ಸ್ಕ್ರೈಬರ್ಸ್​ ಸಂಖ್ಯೆ 1 ಮಿಲಿಯನ್ ದಾಟಿದೆ. ಅಂದರೆ ಹತ್ತು ಲಕ್ಷಕ್ಕೂ ಅಧಿಕ ಮಂದಿ ಈಗ ಡಾ.ಬ್ರೋ ಮೇಲೆ ಲಕ್ಷ್ಯ ಇರಿಸಿದ್ದಾರೆ.
ಅಂಥ ಡಾ.ಬ್ರೋ ಈಗ ಲಕ್ಷಾಂತರ ‘ದೇವರ’ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಅರ್ಥಾತ್ ‘ನಮಸ್ಕಾರ ದೇವರು’ ಎಂತಲೇ ತಮ್ಮ ಸಬ್​ಸ್ಕ್ರೈಬರ್/ವೀಕ್ಷಕರನ್ನು ಸಂಬೋಧಿಸುವ ಗಗನ್, ಇದೀಗ ಹತ್ತು ಲಕ್ಷಕ್ಕೂ ಹೆಚ್ಚು ‘ದೇವರ’ನ್ನೇ ಸಬ್​ಸ್ಕ್ರೈಬರ್ಸ್​ ಆಗಿ ಹೊಂದಿರುವ ಕುರಿತು ತಮ್ಮ ಅನಿಸಿಕೆಯನ್ನು ವಿಜಯವಾಣಿ ಜತೆ ಹಂಚಿಕೊಂಡಿದ್ದಾರೆ.
ಒಂದು ಮಿಲಿಯನ್ ಆಗಿದ್ದಕ್ಕೆ ಖುಷಿ ಅಂತೇನಿಲ್ಲ.. ಪ್ರತಿ ಒಂದೊಂದು ಸಬ್​ಸ್ಕ್ರೈಬರ್​ ಜಾಸ್ತಿ ಆಗುತ್ತಿದ್ದ ಹಾಗೆ ಖುಷಿಗಿಂತ ಜಾಸ್ತಿ ಜವಾಬ್ದಾರಿ ಹೆಚ್ಚಾಗುತ್ತಿರುತ್ತದೆ. ಏಕೆಂದರೆ ಒಂದೇ ಸಲ ಹತ್ತು ಜನ ಕಾಯುತ್ತಿರುತ್ತಾರೆ. ಏನು ಮಾಡುತ್ತಿದ್ದಾನೆ ಗಗನ್, ಯಾವ ದೇಶಕ್ಕೆ ಹೋಗುತ್ತಿದ್ದಾನೆ, ಯಾವ ವಿಡಿಯೋ ಹಾಕುತ್ತಾನೆ ಅಂತ ಹತ್ತು ಲಕ್ಷ ಜನರ ಲಕ್ಷ್ಯವೂ ನನ್ನ ಕಡೆಗಿರುತ್ತದೆ. ಅವರೆಲ್ಲರನ್ನೂ ಖುಷಿ ಪಡಿಸುವುದು ದೊಡ್ಡ ಜವಾಬ್ದಾರಿ ಎಂದು ಡಾ.ಬ್ರೋ ತಿಳಿಸಿದ್ದಾರೆ.
ವಿಶ್ವಪರ್ಯಟನೆಯಲ್ಲಿ ಗಗನಸುಖಿ: ನಮಸ್ಕಾರ ದೇವರು.. ಇದು ಡಾಕ್ಟರ್ ಬ್ರೋ..!

‘ನಮಸ್ಕಾರ ದೇವರು’ ಅಂತ ಹೇಳೋದ್ಯಾಕೆ ಡಾಕ್ಟರ್​ ಬ್ರೋ?; ಹಣ ಬೇಕಾದಾಗ ಯಾವ ಹೋಟೆಲ್​ಗೆ ಹೋಗ್ತಾರೆ!

‘ಡಾ.ಬ್ರೋ’ಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಕನ್ನಡಿಗರ ಆಗ್ರಹ; ಏನಂತಾರೆ ‘ನಮಸ್ಕಾರ ದೇವರು’?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + two =
Remember me
