ಮಧ್ಯಪ್ರದೇಶ:ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾ ಚೀತಾಗಳು ಹೊಡೆದಾಡಿಕೊಂಡಿವೆ. ಕಾದಾಟದಲ್ಲಿ ಅಗ್ನಿ ಹೆಸರಿನ ಆಫ್ರಿಕನ್ ಚೀತಾಗೆ ಗಾಯವಾಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿಭಾಗೀಯ ಅರಣ್ಯಾಧಿಕಾರಿ ಪಿ.ಕೆ.ವರ್ಮಾ ತಿಳಿಸಿದ್ದಾರೆ.
ಗೌರವ್ ಮತ್ತು ಶೌರ್ಯ (ನಮೀಬಿಯಾ ಚೀತಾ) ಹೆಸರಿನ ಚೀತಾಗಳೊಂದಿಗೆ ಜೂ.26ರಂದು ಸಂಜೆ 6 ಗಂಟೆ ಸುಮಾರಿಗೆ ಅಗ್ನಿ ಮತ್ತು ವಾಯು (ದಕ್ಷಿಣ ಆಫ್ರಿಕಾ ಚೀತಾ) ಹೆಸರಿನ ಚೀತಾ ನಡುವೆ ಜಗಳ ಸಂಭವಿಸಿದೆ. ಈ ವೇಳೆ ಎಚ್ಚೆತ್ತ ಅರಣ್ಯ ಅಧಿಕಾರಿಗಳು, ಹೊಡೆದಾಡ ನಿಲ್ಲಿಸಲು ಸೈರನ್ ಮತ್ತು ಪಟಾಕಿಗಳನ್ನು ಸಿಡಿಸಿದ್ದಾರೆ.
ಇದನ್ನೂ ಓದಿ:ಆಡುಗಳ ಮೇಲೆ ‘ಅಲ್ಲಾ’ ಗುರುತು ಪತ್ತೆ! 51 ಲಕ್ಷ ರೂ.ಗೆ ಮಾರಾಟವಾಯ್ತು ಜೋಡಿ ಮೇಕೆ
ಗಾಯಗೊಂಡ ‘ಅಗ್ನಿ’ಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಆರೋಗ್ಯ ಸ್ಥಿರವಾಗಿದ್ದು, ಪ್ರಾಣಕ್ಕೇನು ಹಾನಿಯಾಗಿಲ್ಲ. ಕಾಡು ಪ್ರಾಣಿಗಳ ನಡುವೆ ಇಂತಹ ಜಗಳಗಳು ನಡೆಯುವುದು ಸಾಮಾನ್ಯ ಎಂದು ಅರಣ್ಯಾಧಿಕಾರಿ ಪಿ.ಕೆ.ವರ್ಮಾ ಹೇಳಿದ್ದಾರೆ.
ಕಳೆದ ವರ್ಷ ಸೆ.17ರಂದು ನಮೀಬಿಯಾ ದೇಶದಿಂದ 8 ಚೀತಾಗಳನ್ನು ಭಾರತಕ್ಕೆ ಕರೆತರಲಾಗಿತ್ತು. 8 ರಲ್ಲಿ 5 ಹೆಣ್ಣು ಮತ್ತು 3 ಗಂಡು ಚೀತಾಗಳು. ನಮೀಬಿಯಾ ರಾಜಧಾನಿ ವಿಂಡ್ಹೋಕ್​ನಿಂದ ವಿಶೇಷವಾಗಿ ಡಿಸೈನ್​ ಮಾಡಲಾದ ಹುಲಿ ಮುಖದ ಬಿ-747 ಜಂಬೋ ಜೆಟ್​ನಿಂದ ಚೀತಾಗಳನ್ನು ಕರೆತರಲಾಗಿತ್ತು. ಅವುಗಳನ್ನು ಪ್ರಧಾನಿ ಮೋದಿ ಅವರು ತಮ್ಮ ಜನ್ಮದಿನದಂದೇ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾವನಕ್ಕೆ ಬಿಟ್ಟಿದ್ದರು. 70 ವರ್ಷಗಳ ಹಿಂದೆಯೇ ಅಳಿದು ಹೋಗಿದ್ದ ಚೀತಾ ಸಂತತಿಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಭಾರತಕ್ಕೆ ಚೀತಾಗಳನ್ನು ಕರೆತರಲಾಗಿದೆ. ಇದಕ್ಕಾಗಿ ಪ್ರಾಜೆಕ್ಟ್​ ಚೀತಾ ಹೆಸರಿನಲ್ಲಿ ಭಾರತವು ನಮೀಬಿಯಾದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
