ಜಿನೇವಾ:ಕರೊನಾ ವೈರಸ್​ನ ವಿವಿಧ ಪ್ರಭೇದಗಳಿಗೆ ‘ಸುಲಭವಾಗಿ ಉಚ್ಚರಿಸಲು ಸಾಧ್ಯವಾಗುವ’ ಹಾಗೂ ‘ಕಳಂಕಿತ’ ಹಣೆಪಟ್ಟಿ ಬಾರದಂಥ ಹೆಸರುಗಳನ್ನು ಇಡಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ನಿರ್ಧರಿಸಿದೆ. ಸಾರ್ಸ್ ಸಿಒವಿ-2ರ ‘ಆಸಕ್ತಿದಾಯಕ ಪ್ರಭೇದ’ (ವೆರಿಯಂಟ್ ಆಫ್ ಇಂಟರೆಸ್ಟ್- ವಿಒಐ) ಮತ್ತು ‘ಕಳವಳಕಾರಿ ಪ್ರಭೇದ’ (ವೆರಿಯಂಟ್ ಆಫ್ ಕನ್ಸರ್ನ್-ವಿಒಸಿ) ಎಂದು ನಾಮಕರಣ ಮಾಡಲಾಗಿದೆ. ಈ ಎರಡು ರೂಪಾಂತರಿ ವಿಭಾಗಗಳಿಗೆ ಗ್ರೀಕ್ ಅಕ್ಷರಮಾಲೆಯ ಹೆಸರಿಡಲಾಗಿದೆ. ಅನೇಕ ದೇಶಗಳು ಮಾಡಿದ ಮನವಿಯನ್ನು ಪುರಸ್ಕರಿಸಿ ಡಬ್ಲ್ಯುಎಚ್​ಒ ಈ ಕ್ರಮಕ್ಕೆ ಮುಂದಾಗಿದೆ. ನಾಲ್ಕು ಪ್ರಭೇದಗಳನ್ನು ಗುರುತಿಸಲು ಗ್ರೀಕ್ ಅಕ್ಷರಮಾಲೆಯ ಅಕ್ಷರಗಳಾದ ಆಲ್ಪಾ, ಬೀಟಾ, ಗಾಮಾ, ಡೆಲ್ಟಾಗಳನ್ನು ಬಳಸಿದೆ.
ಆಕ್ಷೇಪ ಎತ್ತಿದ್ದ ಭಾರತ:ಭಾರತದಲ್ಲಿ ಮೊದಲಿಗೆ ಪತ್ತೆಯಾಗಿದ್ದ ವಿಒಸಿ ಬಿ.1.617 ಪ್ರಭೇದಕ್ಕೆ ‘ಭಾರತೀಯ ಪ್ರಭೇದ’ ಎಂದು ಮಾಧ್ಯಮಗಳಲ್ಲಿ ಉಲ್ಲೇಖ ವಾಗುತ್ತಿರುವುದಕ್ಕೆ ಭಾರತ ಸರ್ಕಾರ ಮೇ 12ರಂದು ಆಕ್ಷೇಪ ವ್ಯಕ್ತಪಡಿಸಿತ್ತು. ಡಬ್ಲ್ಯುಎಚ್​ಒ ಈ ರೀತಿ ಎಲ್ಲೂ ಉಲ್ಲೇಖಿಸಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿತ್ತು.
ನಾಮಕರಣ ಪದ್ಧತಿ ಮುಂದುವರಿಕೆ:ಸಾರ್ಸ್- ಸಿಒವಿ-2 ಅನುವಂಶೀಯತೆ (ಜೆನೆಟಿಕ್ ಲೈನೇಜ್) ಪತ್ತೆ ಮಾಡಲು ಹಾಗೂ ನಾಮಕರಣ ಮಾಡಲು ವಿಜ್ಞಾನಿಗಳು ಹಾಗೂ ವೈಜ್ಞಾನಿಕ ಸಂಶೋಧನಾ ಕ್ಷೇತ್ರ ಪ್ರಸಕ್ತ ಬಳಸುತ್ತಿರುವ ನಾಮಕರಣ ವ್ಯವಸ್ಥೆ ಈಗಿನಂತೆಯೇ ಮುಂದುವರಿಯಲಿದೆ ಎಂದು ಡಬ್ಲ್ಯುಎಚ್​ಒ ಸ್ಪಷ್ಟಪಡಿಸಿದೆ. ಪ್ರಭೇದಗಳ ಬಗ್ಗೆ ಸಾರ್ವಜನಿಕ ಚರ್ಚೆಗೆ ನೆರವಾಗಲು ಡಬ್ಲ್ಯುಎಚ್​ಒ ವೈರಸ್ ವಿಕಾಸ ಕಾರ್ಯಕಾರಿ ಗುಂಪಿನಿಂದ ವಿಜ್ಞಾನಿಗಳ ತಂಡ, ಡಬ್ಲ್ಯುಎಚ್​ಒ ಕೋವಿಡ್-19 ರೆಫರೆನ್ಸ್ ಲ್ಯಾಬೊರೇಟರಿ ಜಾಲ, ಜಿಐಎಸ್​ಎಐಡಿ, ನೆಕ್ಸ್ ್ಟ್ಟ್ರೇಯ್್ನ ಮತ್ತು ಪಾಂಗೊ ಸಂಸ್ಥೆಗಳ ಪ್ರತಿನಿಧಿಗಳ ತಂಡವನ್ನು ಡಬ್ಲ್ಯುಎಚ್​ಒ ರಚಿಸಿದೆ. ಇವರೊಂದಿಗೆ ವಿವಿಧ ದೇಶಗಳು ಹಾಗೂ ಸಂಸ್ಥೆಗಳ ವೈರಾಣು ತಜ್ಞರು, ಸೂಕ್ಷಾ್ಮಣುಜೀವಿ ನಾಮಕರಣ ಹಾಗೂ ಸಂವಹನ ತಜ್ಞರೂ ಸಮಿತಿಗೆ ನೆರವಾ ಗಲಿದ್ದಾರೆ. ಉಚ್ಚರಿಸಲು ಸುಲಭವಾಗುವ ಮತ್ತು ಯಾರಿಗೂ ಕಳಂಕ ಹಚ್ಚದ ರೀತಿಯ ಹೆಸರುಗಳನ್ನು ಸೂಚಿಸಲು ಈ ತಂಡದ ರಚನೆಯಾಗಿತ್ತು. ಈ ಸಮಿತಿ, ಸದ್ಯಕ್ಕೆ ಗ್ರೀಕ್ ವರ್ಣಮಾಲೆಯ ಆಲ್ಪಾ, ಬೀಟಾ, ಗಾಮಾ ಅಕ್ಷರಗಳನ್ನು ವೈರಸ್ ಪ್ರಭೇದಗಳ ಲೇಬಲಿಂಗ್​ಗೆ ಬಳಸುವಂತೆ ಶಿಫಾರಸು ಮಾಡಿತ್ತು. ಇದು ಸುಲಭ ಅಲ್ಲದೆ, ವಿಜ್ಞಾನೇತರ-ಸಮುದಾಯದ ಜನರಿಗೆ ರ್ಚಚಿಸಲೂ ಅನುಕೂಲಕರವಾಗಲಿದೆ ಎಂಬುದು ಡಬ್ಲ್ಯುಎಚ್​ಒ ವಿವರಣೆಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
