ಮುಂಬೈ:ಮಹಾರಾಷ್ಟ್ರದಲ್ಲಿ ಬಜೆಟ್​ ಅಧಿವೇಶನ ನಡೆಯುತ್ತಿದ್ದು, ರಾಜ್ಯದ ಶಾಸಕರುಗಳು ತಮ್ಮ ತಮ್ಮ ಕ್ಷೇತ್ರದ ಬೇಡಿಕೆಗಳನ್ನು ಸದನದ ಮುಂದಿಡುತ್ತಿದ್ದಾರೆ. 8 ತಿಂಗಳ ಗರ್ಭಿಣಿಯಾಗಿರುವ ನಮಿತಾ ಮುಂಡದ ಅಧಿವೇಶನದಲ್ಲಿ ಪಾಲ್ಗೊಂಡಿದ್ದು ನೆಟ್ಟಿಗರಿಂದ ಭಾರೀ ಮೆಚ್ಚುಗೆಯನ್ನು ಪಡೆಯಲಾರಂಭಿಸಿದ್ದಾರೆ.
“ಬಜೆಟ್​ ಅಧಿವೇಶನ ನಡೆಯುತ್ತಿದೆ. ಇದರಲ್ಲಿ ನಾನು ಪಾಲ್ಗೊಳ್ಳುವುದು ಶಾಸಕಿಯಾಗಿ ನನ್ನ ಕರ್ತವ್ಯ. ನನ್ನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳನ್ನು ನಾನು ಸದನದಲ್ಲಿ ಮಾತನಾಡಬೇಕಿದೆ. ಸದನದ ಗಮನವನ್ನು ನನ್ನ ಕ್ಷೇತ್ರದತ್ತ ಹರಿಸಬೇಕಿದೆ.” ಎಂದು ಶಾಸಕಿ ನಮಿತಾ ಹೇಳಿದ್ದಾರೆ.
ಬೇರೆ ಗರ್ಭಿಣಿಯರಂತೆ ತಮಗೂ ಸಹ ಅನೇಕ ತೊಂದರೆಗಳಿದ್ದು ವೈದ್ಯರ ಸಲಹೆಯ ಮೇರೆಗೆ ಆಕೆ ತನ್ನ ಆರೈಕೆ ಮಾಡಿಕೊಳ್ಳುತ್ತಿದ್ದು, ತನ್ನ ಕ್ಷೇತ್ರವನ್ನೂ ಸಹ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಎನ್​ಸಿಪಿ ಪಕ್ಷದಿಂದ ಗೆದ್ದು ಸಚಿವೆಯಾಗಿದ್ದ ವಿಮಲ​ ಮುಂಡದ ಅವರ ಸೊಸೆಯಾಗಿರುವ ನಮಿತಾ 2019ರ ವಿಧಾನ ಸಭಾ ಚುನಾವಣೆಯಲ್ಲಿ ಎನ್​ಸಿಪಿ ಪಕ್ಷದ ಪರವಾಗಿ ಬೀಡ್​ ಕ್ಷೇತ್ರದಿಂದ ಸ್ಪರ್ಧಿಸುವ ನಿರ್ಧಾರ ಮಾಡಿದ್ದರು. ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಿ ಬಿಜೆಪಿ ಸೇರಿದ ಅವರು ಗೆಲುವು ಸಾಧಿಸಿಕೊಂಡಿದ್ದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 2 =
Remember me
