ಹೈದರಾಬಾದ್​​:ನಟ ನಂದಮೂರಿ ಬಾಲಕೃಷ್ಣ ಸದ್ಯ ಎಪಿ ಪಾಲಿಟಿಕ್ಸ್ ನಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ಇತ್ತೀಚಿಗೆ ಬಾಲಯ್ಯ ಸಿನಿಮಾ, ರಾಜಕೀಯದ ಹೊರತಾಗಿ ಬೇರೆ ವಿಷಯಗಳಿಗೂ ವೈರಲ್ ಆಗುತ್ತಿದೆ.
ಬಾಲಕೃಷ್ಣ ಅವರ ಸಿನಿಮಾಗಳಲ್ಲಿ ಬಾಲಯ್ಯ ಬಾಬು ಸಿಂಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ಬಾಲಕೃಷ್ಣರನ್ನು ಸಿಂಹದಂತೆ ಪವರ್ ಫುಲ್ ದೃಶ್ಯಗಳಲ್ಲಿ ತೋರಿಸಲಾಗಿದೆ. ಅವರ ಸಿನಿಮಾಗಳ ಟೈಟಲ್ ನಲ್ಲಿ ಸಿಂಹಗಳನ್ನು ಬಳಸಲಾಗಿದೆ. ಇತ್ತೀಚೆಗೆ ಬಾಲಕೃಷ್ಣ ಸಿಂಹದ ಮುಖವಾಡ ಇರುವ ಬ್ಯಾಗ್​ನ್ನು ಹೆಗಲ ಮೇಲೆ ಹೊತ್ತು ಸಾಗುತ್ತಿರುವ ವಿಡಿಯೋ ವೈರಲ್ ಆಗಿದೆ.
ಇತ್ತೀಚೆಗಷ್ಟೇ ಹೈದರಾಬಾದ್​​ನಿಂದ ವಿಜಯವಾಡಕ್ಕೆ ತೆರಳಿದ್ದ ಬಾಲಕೃಷ್ಣ ಗನ್ನವರಂ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಈ ವೇಳೆ ಅವರ ಹೆಗಲ ಮೇಲೆ ಬ್ಯಾಗ್ ಹಾಕಿಕೊಂಡು ತೆರಳಿದ್ದರು. ಬ್ಯಾಗ್​​ ಮೇಲೆ ಸಿಂಹದ ತಲೆಯ ಆಕೃತಿ ಇದೆ. ಚಿನ್ನದ ಬಣ್ಣದಲ್ಲಿರುವ ಈ ಬ್ಯಾಗ್ ವೈರಲ್ ಆಗಿದೆ. ಸಿಂಹವು ಚೀಲವನ್ನು ಹೊತ್ತಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಬಾಲಯ್ಯ ಕೂಡ ತಮ್ಮ ಸಿಂಹದ ಚೀಲದೊಂದಿಗೆ ವೈರಲ್ ಆಗಿದ್ದಾರೆ.

A post shared by Kamlesh Nand (work) (@artistrybuzz_)
ಅಖಂಡ ಮತ್ತು ವೀರ ಸಿಂಹ ರೆಡ್ಡಿ ಚಿತ್ರಗಳೊಂದಿಗೆ ಬಾಲಯ್ಯ ಬ್ಯಾಕ್ ಟು ಬ್ಯಾಕ್ 100 ಕೋಟಿ ಹಿಟ್‌ಗಳನ್ನು ಗಳಿಸುತ್ತಿದ್ದಾರೆ. ಈ ದಸರಾದಲ್ಲಿ ಭಗವಂತ ಕೇಸರಿ ಜೊತೆ ಬಾಲಕೃಷ್ಣ ಮತ್ತೆ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ.
ಗ್ಯಾಸ್ ಸೋರಿಕೆಗೆ ಬಲಿಯಾದ ದಂಪತಿ; ಕಾಫಿ ಮಾಡುವಾಗ ಸಂಭವಿಸಿದ್ದ ಅವಘಡ

Sign in to your account
Please enter an answer in digits:thirteen − 12 =
Remember me
