ಮುಪ್ಪಳ್ಳ:ಮೊದಲ ಹೆಂಡತಿಯ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ವೀಕ್ಷಿಸಿದ್ದಕ್ಕಾಗಿ ಎರಡನೇ ಪತ್ನಿಯು ತನ್ನ ಪತಿಯ ಖಾಸಗಿ ಅಂಗ ಸೇರಿದಂತೆ ಆತನ ಮೇಲೆ ಹಲ್ಲೆ ಮಾಡಿರುವ ವಿಚಿತ್ರ ಘಟನೆ ಆಂಧ್ರ ಪ್ರದೇಶದ ಎನ್​ಟಿಆರ್​​ ಜಿಲ್ಲೆಯಲ್ಲಿ ನಡೆದಿದೆ.ಇದನ್ನೂ ಓದಿ:ಎರಡು ತಿಂಗಳ ಹಸುಗೂಸಿಗೆ ಒಂದೇ ಬಾರಿಗೆ ನಾಲ್ಕು ಡೋಸ್​ ಲಸಿಕೆ ನೀಡಿದ ನರ್ಸ್..? ನಡೆದದ್ದು ಮಾತ್ರ ದುರಂತಘಟನೆಯಲ್ಲಿ ಕೋಟ ಆನಂದ್ ಬಾಬು ಎಂಬಾತ ತೀವ್ರ ಗಾಯಗೊಂಡಿದ್ದಾನೆ. ಮುಪ್ಪಳ್ಳ ಗ್ರಾಮದ ನಿವಾಸಿಯಾಗಿರುವ ಆನಂದ್, ಮದುವೆಯಾಗಿ ಮೊದಲನೇ ಹೆಂಡತಿಯಿಂದ ಬೇರ್ಪಟ್ಟ ನಂತರ 5 ವರ್ಷಗಳ ಹಿಂದೆ ವರಮ್ಮ ಎಂಬ ಮಹಿಳೆಯನ್ನು ಮದುವೆಯಾಗಿ ಸಂಸಾರ ನಡೆಸುತ್ತಿದ್ದನು.ಆದರೆ ಕೆಲ ದಿನಗಳಿಂದ ಆನಂದ್​​, ತನ್ನ ಮೊದಲ ಪತ್ನಿಯ ರೀಲ್ಸ್​​​ಗಳನ್ನು ಇನ್​​ಸ್ಟಾಗ್ರಾಮ್​​ನಲ್ಲಿ ನೋಡುತ್ತಿದ್ದನು. ಇದರಿಂದ ಬೇಸತ್ತಿದ್ದ ಎರಡನೇ ಪತ್ನಿಯು ನಿನ್ನೆ ರಾತ್ರಿ ಆನಂದ್ ರೀಲ್ಸ್​​ಗಳನ್ನು ನೋಡುತ್ತಿದ್ದ ವೇಳೆ ಸಿಟ್ಟಿಗೆದ್ದು, ಮದುವೆಯಾದ ನಂತರವೂ ಮೊದಲ ಪತ್ನಿಯ ವಿಡಿಯೋಗಳನ್ನು ಏಕೆ ನೋಡುತ್ತಿದ್ದೀಯ ಎಂದು ಪ್ರಶ್ನಿಸಿದ್ದಾಳೆ. ಇದರಿಂದಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ಶುರುವಾಗಿದ್ದು ಈ ವೇಳೆ ಆಕೆಯ ಬ್ಲೇಡ್​​ನಿಂದ ಹಲ್ಲೆ ನಡೆಸಿ ಕೈ, ಕಾಲು ಸೇರಿದಂತೆ ಆತನ ಖಾಸಗಿ ಅಂಗವನ್ನು ಗಾಯಗೊಳಿಸಿದ್ದಾಳೆ.ಆನಂದ್​​​ ನೋವು ತಾಳಲಾರದೆ ಕೆಳಗೆ ಬಿದ್ದಿದ್ದು, ಗೊಂದಲಕ್ಕೊಳಗಾದ ವರಮ್ಮ ಜೋರಾಗಿ ಕಿರುಚಿದ್ದಾರೆ. ಕೂಡಲೇ ಸುತ್ತಮುತ್ತಲಿನ ಜನರು ಬಂದು ಏನಾಯಿತು ಎಂದು ವಿಚಾರಿಸಿದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆನಂದ್ ನನ್ನು ಕೂಡಲೇ ನಂದಿಗಮ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಪರಿಸ್ಥಿತಿ ಚಿಂತಾಜನಕವಾಗಿದ್ದರಿಂದ ಕುಟುಂಬಸ್ಥರು ಉತ್ತಮ ಚಿಕಿತ್ಸೆಗಾಗಿ ವಿಜಯವಾಡದ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ನಂದಿಗಾಮ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
