ಅಯೋಧ್ಯೆಯಲ್ಲಿಶ್ರೀರಾಮ ಮಂದಿರ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಹಂಚಲಾದ ಲಡ್ಡುವಿಗೆ ಕೆಎಂಎಫ್ ನಂದಿನಿ ಬ್ರಾಂಡ್​ನ ತುಪ್ಪ ಬಳಸಲಾಗಿದೆ. ನಂದಿನಿ ತುಪ್ಪವನ್ನು ಬಳಸಿಕೊಂಡು ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಲಡ್ಡು ತಯಾರು ಮಾಡುತ್ತಿರುವುದು ಪ್ರಸಿದ್ಧಿ. ಇಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ಶೇಷಾದ್ರಿ ಪಟನಾದಲ್ಲಿ ಹನುಮಾನ್ ಮಂದಿರದ ಮ್ಯಾನೇಜರ್ ಆಗಿ ನೇಮಕಗೊಂಡಿದ್ದು, ಒಂದು ವರ್ಷದಿಂದಲೂ ಅಲ್ಲಿಗೆ ನಂದಿನಿ ಬ್ರಾಂಡ್​ನ ತುಪ್ಪ ತರಿಸಿಕೊಂಡು ಲಡ್ಡು ಮಾಡಿಸುತ್ತಿದ್ದಾರೆ. ಕನ್ನಡಿಗನೊಬ್ಬನ ಕಾರಣದಿಂದ ನಂದಿನಿ ಬ್ರಾಂಡ್​ನ ತುಪ್ಪ ತಿರುಪತಿಯಿಂದ, ಪಟನಾಕ್ಕೆ ಬಳಿಕ ಅಯೋಧ್ಯೆಗೆ ತಲುಪಲು ಸಾಧ್ಯವಾಗಿದೆ.
ರಾತ್ರಿಯಿಡೀ ಭಜನೆ, ಜಾಗರಣೆ
ಪ್ರಧಾನಿ ಸಹಿತ ಪ್ರಮುಖರು ಆಗಮಿಸಲಿರುವ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ರಾತ್ರಿವೇಳೆ ಮನೆಯಿಂದ ಹೊರಬರದಂತೆ ಸೂಚಿಸಲಾಗಿತ್ತು. ಆದರೆ ಜನರ ಸಂಭ್ರಮಕ್ಕೆ ಈ ನಿಯಮ ಅಡ್ಡಿಬರಲಿಲ್ಲ. ಜನರು ಮನೆಯಲ್ಲೇ ರಾತ್ರಿಯಿಡೀ ರಾಮ ಭಜನೆ, ಕೀರ್ತನೆಗಳನ್ನು ಹಾಡಿದರು. ಇಡೀ ರಾತ್ರಿ ಅಯೋಧ್ಯೆಯಲ್ಲಿ ರಾಮ ಭಜನೆ ಪ್ರತಿಧ್ವನಿಸುತ್ತಿತ್ತು. ಬಹುತೇಕರು ನಿದ್ದೆ ಮಾಡದೇ ರಾಮನಾಮ ಪಠಿಸುವ ಮೂಲಕ ಜಾಗರಣೆ ಮಾಡಿದರು. ಸರಯೂ ನದಿಯ ತೀರದಲ್ಲಿ ದೀಪಗಳನ್ನು ಬೆಳಗಿ, ದೀಪಾವಳಿಯ ರೀತಿಯಲ್ಲಿ ಸಂಭ್ರಮ ಆಚರಿಸಲಾಯಿತು.
1.75 ಲಕ್ಷ ಲಡ್ಡು ವಿತರಣೆ
ಶ್ರೀರಾಮ ಮಂದಿರ ಭೂಮಿ ಪೂಜೆಗೆ 1.75 ಲಕ್ಷ ಲಡ್ಡುಗಳನ್ನು ವಿತರಣೆ ಮಾಡಲಾಗಿದೆ. ಅದಕ್ಕೆ 20 ಸಾವಿರ ಕೆಜಿ ನಂದಿನಿ ತುಪ್ಪ ಬಳಸಲಾಗಿದೆ.
ಅಯೋಧ್ಯೆಗೆ ಸೇರಬೇಕಿದ್ದ ಶ್ರೀರಾಮ, ಸೀತೆ, ಲಕ್ಷ್ಮಣರ ಪಂಚಲೋಹದ ವಿಗ್ರಹಗಳು ಬೆಳ್ತಂಗಡಿಯ ಕಣಿಯೂರಿನಲ್ಲಿ ಪ್ರತಿಷ್ಠಾಪನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 2 =
Remember me
