ಬೆಂಗಳೂರು:‘ಸೂಪರ್​ಸ್ಪ್ರೆಡರ್​’ ಹಣೆಪಟ್ಟಿಯೊಂದಿಗೆ ಕರೊನಾ ಹಂಚಿದ ಕುಖ್ಯಾತಿಗೆ ಕಾರಣವಾಗಿದ್ದ ಮೈಸೂರು ಜಿಲ್ಲೆ ನಂಜನಗೂಡಿನ ಜುಬಿಲೆಂಟ್​ ಲೈಫ್​ ಸೈನ್ಸ್​ ಔಷಧ ಕಾರ್ಖಾನೆಯಲ್ಲಿ ಕರೊನಾಗೆ ಲಸಿಕೆ ಸಿದ್ಧವಾಗಲಿದೆ.
ಅಮೆರಿಕದ ಗಿಲಿಯಾಡ್​ ಸೈನ್ಸ್​ ಕಂಪನಿಯೊಂದಿಗೆ ಜುಬಿಲೆಂಟ್​ ಈಗಾಗಲೇ ನಾನ್​-ಎಕ್ಸ್​ಕ್ಲುಸಿವ್​ ಲೈಸೆನ್ಸಿಂಗ್​ ಒಪ್ಪಂದಕ್ಕೆ ಸಹಿ ಹಾಕಿದೆ. ಗಿಲಿಯಾಡ್​ನ ‘ರೆಮ್​ಡೆಸಿವಿರ್​’ ಲಸಿಕೆಯನ್ನು ಭಾರತವೂ ಸೇರಿ 127 ದೇಶಗಳಲ್ಲಿ ಮಾರಾಟ ಹಾಗೂ ತಯಾರಿಕೆ ಹಕ್ಕುಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ;ಜಗತ್ತಿನ ಅತಿ ದುಬಾರಿ ಲಸಿಕೆಯಾಗಲಿದೆಯೇ ಕರೊನಾ ಔಷಧ ?
ರೆಮ್​ಡೆಸಿವಿರ್​ ಲಸಿಕೆಯನ್ನು ಚೀನಾದಲ್ಲಿ ಕರೊನಾ ಸೋಂಕಿತರ ಮೇಲೆ ಬಳಸಲಾಗಿತ್ತು. ರೋಗಿಗಳು ಚೇತರಿಸಿಕೊಳ್ಳುವ ಅವಧಿಯನ್ನು ಈ ಲಸಿಕೆ ಗಮನಾರ್ಹವಾಗಿ ಕಡಿಮೆಗೊಳಿಸಿದೆ ಎಂಬುದು ಅಧ್ಯಯನದಲ್ಲಿ ಗೊತ್ತಾಗಿತ್ತು. ಹೀಗಾಗಿ ಕೋವಿಡ್​-19 ಪೀಡಿತರಿಗೆ ರೆಮ್​ಡೆಸಿವಿರ್​ ಲಸಿಕೆಯನ್ನು ಬಳಸಬಹುದು ಎಂದು ಅಮೆರಿಕದ ಆಹಾರ ಮತ್ತು ಔಷಧ ಇಲಾಖೆ ಶಿಫಾರಸು ಮಾಡಿದೆ.
ಜುಬಿಲೆಂಟ್​ ಈ ಲಸಿಕೆಯನ್ನು ಬಹುತೇಕ ಎಲ್ಲ ಕಡಿಮೆ ಆದಾಯದ ಹಾಗೂ ಮಧ್ಯಮ ಆದಾಯದ ದೇಶಗಳಲ್ಲಿ ಹಾಗೂ ಕೆಲ ಮುಂದುವರಿದ ರಾಷ್ಟ್ರಗಳಲ್ಲೂ ತಯಾರಿಸಿ ಮಾರಾಟ ಮಾಡುವ ಹಕ್ಕುಗಳನ್ನು ಪಡೆದುಕೊಂಡಿದೆ. ಭಾರತದಲ್ಲಿ ರೆಮ್​ಡೆಸಿವಿರ್​ ಲಸಿಕೆ ಉತ್ಪಾದನೆಗೆ ಸಂಬಂಧಿಸಿದಂತೆ ದೀರ್ಘಕಾಲಿಕ ಪರವಾನಗಿ ಒಪ್ಪಂದಗಳನ್ನು ಮಾಡಿಕೊಳ್ಳಲು ಹಲವು ಕಂಪನಿಗಳೊಂದಿಗೆ ಮಾತುಕತೆ ನಡೆಸಿರುವುದಾಗಿ ಗಿಲಿಯಾಡ್​ ಇತ್ತೀಚೆಗಷ್ಟೇ ಮಾಹಿತಿ ನೀಡಿತ್ತು.
ಇದನ್ನೂ ಓದಿ;ಕರೊನಾದಿಂದ ಹೆಚ್ಚಾಗಲಿದೆ ಎಚ್​ಐವಿ ಸೋಂಕಿತರ ಸಾವಿನ ಸಂಖ್ಯೆ..!
ಸದ್ಯ ಕೋವಿಡ್​ಗೆ ಯಾವುದೇ ಔಷಧ ತಯಾರಾಗದ ಹಿನ್ನೆಲೆಯಲ್ಲಿ ಈ ಲಸಿಕೆಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಈ ಕಾರಣದಿಂದಾಗಿ 2022ರ ವೇಳೆಗೆ ಎಲ್ಲ ರಾಷ್ಟ್ರಗಳಲ್ಲೂ ರೆಮ್​ಡೆಸಿವಿರ್​ ಉತ್ಪಾದನೆಗೆ ಗಿಲಿಯಾಡ್​ ಕಂಪನಿ ಮುಂದಾಗಿದೆ.
ನಿಷ್ಪ್ರಯೋಜಕವೆಂದು ಗುಜರಿ ಸೇರಿದ್ದ ಔಷಧ ಕರೊನಾಗೆ ರಾಮಬಾಣ? ಬಳಸಿ ಎಂದು ಭಾರತೀಯ ತಜ್ಞರು ಹೇಳುತ್ತಿರೋದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − eight =
Remember me
