ನವದೆಹಲಿ:ಇನ್ಫೋಸಿಸ್​ನ ನಾರಾಯಣಮೂರ್ತಿ ಅಳಿಯ, ಭಾರತೀಯ ಮೂಲದ ರಿಷಿ ಸುನಕ್​ ಬ್ರಿಟನ್​ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದು, ಅ.28ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ದೀಪಾವಳಿ ಹಬ್ಬದ ದಿನವೇ ರಿಷಿ ಸುನಕ್​ ಆಯ್ಕೆಯಾಗಿದ್ದು, ಭಾರತೀಯರಿಗೂ ಸಂಭ್ರಮ ಹೆಚ್ಚಿಸಿದೆ. 42ನೇ ವಯಸ್ಸಿನ ಸುನಕ್​, ಅತ್ಯುನ್ನತ ಹುದ್ದೆಗೇರಿ, ಬ್ರಿಟನ್ನಿನ ಅತಿ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ. ಅಷ್ಟೇ ಅಲ್ಲ, ಎರಡು ಶತಮಾನ ಕಾಲ ಬ್ರಿಟಿಷರ ದಾಸ್ಯಕ್ಕೆ ಒಳಪಟ್ಟ ಭಾರತದ ಮತ್ತು ಹಿಂದು ಧರ್ಮೀಯರೊಬ್ಬರು ಬ್ರಿಟನ್​ ಪ್ರಧಾನಿಯಾದಂತಾಗಿದೆ.
ಬ್ರಿಟನ್​ ಪ್ರಧಾನಿಯಾದ ತನ್ನ ಅಳಿಯನಿಗೆ ನಾರಾಯಣಮೂರ್ತಿ ಅವರು ಮನಸಾರೆ ಶುಭಕೋರಿದ್ದಾರೆ. ಜತೆಗೆ ‘ಹೆಮ್ಮೆ’ಯಾಗುತ್ತಿದೆ ಎಂದೂ ಗುಣಗಾನ ಮಾಡಿದ್ದಾರೆ. “ರಿಷಿಗೆ ಅಭಿನಂದನೆಗಳು. ನಾವು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತೇವೆ ಮತ್ತು ನೀವು ಮತ್ತಷ್ಟು ಯಶಸ್ಸು ಸಾಧಿಸಿ. ಉತ್ತಮ ಆಡಳಿತ ನೀಡುವ ಮೂಲಕ ಯುನೈಟೆಡ್ ಕಿಂಗ್‌ಡಮ್‌ನ ಜನರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೀರಿ ಎಂಬ ವಿಶ್ವಾಸ ನಮಗಿದೆ” ಎಂದು ನಾರಾಯಣಮೂರ್ತಿ ಪ್ರತಿಕ್ರಿಯಿಸಿದ್ದಾರೆ.

ದೇಶದ ಆಥಿರ್ಕತೆ ಸುಧಾರಿಸಿ ಸ್ಥಿರತೆ ತರುವುದಕ್ಕೆ ಮೊದಲ ಆದ್ಯತೆ ಮತ್ತು ದೇಶದ ಏಕತೆ ಹಾಗೂ ಬ್ರಿಟನ್ನರ ಪ್ರಗತಿಗಾಗಿ ವಿನಮ್ರ ಸೇವೆ ಮಾಡುವೆ. ವಿಶ್ವಾಸವಿಟ್ಟು ಆಯ್ಕೆ ಮಾಡಿದ ಎಲ್ಲ ಸಂಸದರು ಮತ್ತು ಪಕ್ಷದ ನಾಯಕರಿಗೆ ಹೃತ್ಪೂರ್ವಕ ಧನ್ಯವಾದ ಎಂದು ರಿಷಿ ಸುನಕ್ ತಿಳಿಸಿದ್ದಾರೆ.
ಹಲವು ಪ್ರಥಮಗಳು ರಿಷಿಗೆ:ಬ್ರಿಟನ್ನಿನ ಅತಿ ಕಿರಿಯ ವಯಸ್ಸಿನ ಪ್ರಧಾನಿ ಎಂಬ ಹೆಗ್ಗಳಿಕೆ ರಿಷಿ ಸುನಕ್​ರದ್ದು. ಬ್ರಿಟನ್ನ ಪ್ರಧಾನಿ ಸ್ಥಾನಕ್ಕೇರಿದ ಏಷ್ಯಾ ಮೂಲದ ಮೊದಲಿಗ ಕೂ ಇವರೇ. ಪ್ರಧಾನಿ ನಿವಾಸ ಪ್ರವೇಶಿಸುವ ಹಿಂದು ಸಮುದಾಯದ ಕುಟುಂಬ ರಿಷಿ ಅವರದ್ದೇ. ಅತ್ಯುನ್ನತ ಹುದ್ದೆಗೆ ಆಯ್ಕೆಯಾದ ಮೊದಲ ಶ್ವೇತವರ್ಣೀಯೇತರ ವ್ಯಕ್ತಿ ಕೂಡ ಇವರೇ.
​ಬ್ರಿಟನ್​ ಪ್ರಧಾನಮಂತ್ರಿ ಹುದ್ದೆಯನ್ನು ಮೊದಲ ಹೋರಾಟದಲ್ಲಿ ಸ್ವಲ್ಪದರಲ್ಲಿ ತಪ್ಪಿಸಿಕೊಂಡ ರಿಷಿ ಸುನಕ್​ಗೆ ಎರಡನೇ ಬಾರಿ ಅದೃಷ್ಟ ಕೈ ಹಿಡಿದಿದೆ. ಕಳೆದ ಸೆಪ್ಟೆಂಬರ್​ ಆರಂಭದಲ್ಲಿ ಪ್ರಧಾನಿಯಾದ ಲಿಜ್​ ಟ್ರಸ್​ ಪ್ರಕಟಿಸಿದ ಆರ್ಥಿಕ ಸುಧಾರಣೆ ಯೋಜನೆಗಳು ಅವರಿಗೇ ಮುಳುವಾಗಿ ಕೇವಲ 44 ದಿನಗಳಲ್ಲಿ ರಾಜೀನಾಮೆ ಸಲ್ಲಿಸಿದರು. ಇದರ ಪರಿಣಾಮವಾಗಿ ಕನ್ಸರ್ವೇಟಿವ್​ ಪಕ್ಷ (ಟೋರಿ) ನಾಯಕತ್ವಕ್ಕೆ ಚುನಾವಣೆ ಎದುರಾಯಿತು. ಜತೆಗೆ, ಟ್ರಸ್​ ವಿರುದ್ಧ ಸೋತಿದ್ದ ಸುನಕ್​ಗೆ ಅವಿರೋಧ ಆಯ್ಕೆಯ ಅದೃಷ್ಟ ತಂದುಕೊಟ್ಟಿತು.
ನಾರಾಯಣಮೂರ್ತಿ ಅವರ ಮಗಳು ಅಕ್ಷತಾ ಅವರನ್ನ 2009ರಲ್ಲಿ ರಿಷಿ ಸುನಕ್​ ಮದುವೆಯಾದರು. ದಂಪತಿಗೆ ಕೃಷ್ಣ ಮತ್ತು ಅನುಷ್ಕಾ ಎಂಬ ಇಬ್ಬರು ಪುತ್ರಿಯರಿದ್ದಾರೆ.
ರಿಷಿ ಸುನಕ್​ಗೆ ಹಲವು ಸವಾಲು

ಹರ್ಷನ ಮನೆ ಬಳಿ ತಡರಾತ್ರಿ ಮಾರಕಾಸ್ತ್ರ ಹಿಡಿದು ಬೆದರಿಕೆ ಹಾಕಿದ ದುಷ್ಕರ್ಮಿಗಳು! ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ವಾತಾವರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one − 1 =
Remember me
