ಮುಂಬೈ: ಇನ್ಫೋಸಿಸ್​ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ ತುಂಬ ಸರಳ ವ್ಯಕ್ತಿತ್ವದವರು ಎಂಬುದಕ್ಕೆ ಈಗಾಗಲೇ ಹಲವು ಘಟನೆಗಳು ಸಾಕ್ಷಿಯಾಗಿವೆ.ಈಗ ನಾರಾಯಣ ಮೂರ್ತಿಯವರು ಮತ್ತೊಮ್ಮೆ ಅದನ್ನು ಸಾಬೀತು ಪಡಿಸಿದ್ದಾರೆ. ಅವರು ಮಾಡಿದ ಒಂದು ಕಾರ್ಯ ದೇಶದ ಜನರ ಮನಗೆದ್ದಿದೆ.
ಇಂದು ಮುಂಬೈನಲ್ಲಿ ನಡೆದ ಟೈಕಾನ್​-2020 ಸಮಾರಂಭದಲ್ಲಿ ಉದ್ಯಮವಲಯದ ದಿಗ್ಗಜ​ ರತನ್​ ಟಾಟಾ ಅವರಿಗೆ ಲೈಫ್​ ಟೈಮ್ ಅಚೀವ್​ಮೆಂಟ್​ ಪ್ರಶಸ್ತಿ ನೀಡಿ ಪುರಸ್ಕಾರ ಮಾಡಲಾಯಿತು. ರತನ್​ ಟಾಟಾ ಅವರು ಭಾರತದ ಉದ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಯಿತು.
ಇನ್ಫೋಸಿಸ್​ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ರತನ್​ ಟಾಟಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಆದರೆ ಬರೀ ಪ್ರಶಸ್ತಿಯನ್ನು ನೀಡಿ ಸುಮ್ಮನಾಗದೆ, ರತನ್​ ಟಾಟಾ ಅವರ ಪಾದವನ್ನು ಮುಟ್ಟಿ ನಮಸ್ಕರಿಸಿ ಅವರ ಆಶೀರ್ವಾದ ಪಡೆದರು. ಈ ಮೂಲಕ ನಾರಾಯಣ ಮೂರ್ತಿ ಟಾಟಾ ಅವರಿಗೆ ಗೌರವ ಸಲ್ಲಿಸಿದರು.
ರತನ್ ಟಾಟಾ ಅವರು ನಾರಾಯಣ ಮೂರ್ತಿಯವರು ತಮಗೆ ಪ್ರಶಸ್ತಿ ಪ್ರದಾನ ಮಾಡಿದ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಅಲ್ಲದೆ, ಲೈಫ್​ ಟೈಮ್​ ಅಚೀವ್​ಮೆಂಟ್​ ಪ್ರಶಸ್ತಿಯನ್ನು ನನ್ನ ಆತ್ಮೀಯ ಸ್ನೇಹಿತರಾದ ನಾರಾಯಣ ಮೂರ್ತಿಯವರ ಕೈಯಿಂದ ಸ್ವೀಕರಿಸಿದ್ದಕ್ಕೆ ತುಂಬ ಖುಷಿಯಿದೆ. ನಾನು ನಿಜಕ್ಕೂ ವಿಧೇಯನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಟೈಕಾನ್​-2020ರಲ್ಲಿ ನಡೆದ ಈ ಅಪರೂಪದ ಕ್ಷಣದ ಫೋಟೋ, ವಿಡಿಯೋಗಳು ಟ್ವಿಟರ್​ನಲ್ಲಿ ಸಿಕ್ಕಾಪಟೆ ವೈರಲ್​ ಆಗಿವೆ. ಅದರಲ್ಲೂ ನಾರಾಯಣ ಮೂರ್ತಿಯವರು ಪ್ರಶಸ್ತಿ ನೀಡಿದ ತಕ್ಷಣ ರತನ್​ ಟಾಟಾ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿದ್ದಕ್ಕೆ ಸಿಕ್ಕಾಪಟೆ ಮೆಚ್ಚುಗೆ ವ್ಯಕ್ತವಾಗಿದೆ. ಇದು ಭಾರತೀಯ ಸಂಸ್ಕೃತಿ ಎಂದು ನೆಟ್ಟಿಗರು ಹೊಗಳುತ್ತಿದ್ದಾರೆ.
ಈ ಇಬ್ಬರೂ ಉದ್ಯಮ ದಿಗ್ಗಜರು ಪರಸ್ಪರ ಗೌರವಿಸಿಕೊಳ್ಳುವ ರೀತಿ ಮನಗೆದ್ದಿದೆ.(ಏಜೆನ್ಸೀಸ್​)
Historic Moment..😍!It's true Indian CultureIf one is truly humble, one will remain a success always. Legendary businessman, Narayana Murthy touched Ratan Tata’s feet!This taught me so much!!pic.twitter.com/MNmZxNLZVm— Supriya Tripathi (@iSupriya9)January 29, 2020
Historic Moment..😍!It's true Indian CultureIf one is truly humble, one will remain a success always. Legendary businessman, Narayana Murthy touched Ratan Tata’s feet!This taught me so much!!pic.twitter.com/MNmZxNLZVm
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + thirteen =
Remember me
