ನವದೆಹಲಿ: ಕರೊನಾ ಸಾಂಕ್ರಾಮಿಕದ ತೀವ್ರ ಹಾವಳಿ, ಅತ್ಯಂತ ದಯನೀಯ ಆರ್ಥಿಕ ಕುಸಿತ, ಚೀನಾ ಜತೆಗೆೆ ತೀಕ್ಷ್ಣ ಗಡಿ ಸಂಘರ್ಷ, ಪಾಕಿಸ್ತಾನದಿಂದ ನಿರಂತರ ತಗಾದೆ, ರೈತರ ಪ್ರತಿಭಟನೆಗಳು, ಕಾರ್ಖಾನೆಗಳಲ್ಲಿ ಉತ್ಪಾದನೆ ಕುಸಿತ ಹೀಗೆ ಸಾಲು ಸಾಲು ಕಠಿಣ ಸವಾಲುಗಳಿದ್ದರೂ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಗೆ ಒಂದಿಷ್ಟೂ ಕುಂದು ಬಂದಿಲ್ಲ. ಬದಲಿಗೆ ಅದು ಹೆಚ್ಚುತ್ತಲೇ ಇದೆ.
ಪ್ಲಸ್ ಪಾಯಿಂಟ್
1
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿ ರದ್ದತಿ.
2
ಪೌರತ್ವ ತಿದ್ದುಪಡಿ ಕಾನೂನು.
3
ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆ.
4
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ವಣಕ್ಕೆ ಶಿಲಾನ್ಯಾಸ.
ಕೋವಿಡ್-19 ಸಾಂಕ್ರಾಮಿಕತೆ ನಡುವೆಯೂ ಬಿಹಾರದ ವಿಧಾನಸಭೆ ಚುನಾವಣೆ ಸವಾಲಾಗಿದ್ದರು ಪ್ರಧಾನಿ ಮೋದಿ ಕಾರಣ ಬಿಜೆಪಿ ಕೂಟ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂದು ರಾಷ್ಟ್ರೀಯ ಮಾಧ್ಯಮದಲ್ಲಿ ವರದಿಯಾದ ಸಮೀಕ್ಷಾ ವರದಿಯೊಂದು ತಿಳಿಸಿದೆ.
ಶೇ. 71ರಿಂದ 78ಕ್ಕೆ ಜಿಗಿತ :ಕಳೆದ ವರ್ಷ ನಡೆದ ಜನಮತ ಸಂಗ್ರಹದಲ್ಲಿ ನರೇಂದ್ರ ಮೋದಿ ಆಡಳಿತದ ನಿರ್ವಹಣೆ ಉತ್ತಮವಾಗಿದೆ ಎಂದು ಶೇಕಡ 71ರಷ್ಟು ಜನರು ಹೇಳಿದ್ದರು. ಈ ವರ್ಷ ಆಗಸ್ಟ್​ನಲ್ಲಿ ಆ ಪ್ರಮಾಣ ಶೇಕಡ 78ಕ್ಕೆ ಜಿಗಿದಿದೆ.
ಪ್ರಬಲ ಪ್ರತಿಪಕ್ಷದ ಕೊರತೆ:ದೇಶದಲ್ಲಿ ಪ್ರಬಲ ಪ್ರತಿಪಕ್ಷ ಇಲ್ಲದಿರುವುದರಿಂದ ಮತದಾರರು ಮೋದಿಯವರಿಗೆ ದೀರ್ಘ ಕಾಲ ಆಡಳಿತ ನಡೆಸಲು ಅವಕಾಶ ನೀಡುವ ಮನೋಭಾವ ಹೊಂದಿದ್ದಾರೆ.
ಇದನ್ನೂ ಓದಿ:ಪ್ರತಿಸ್ಪರ್ಧಿಗಳನ್ನು ದುರ್ಬಲಗೊಳಿಸುವುದಕ್ಕಾಗಿ ಕಾನೂನು ಬಾಹಿರ ಕಾರ್ಯಾಚರಣೆ ಆರೋಪ: ಗೂಗಲ್ ವಿರುದ್ಧ ದಾವೆ
ಪ್ರಮುಖ ಕಾರಣಗಳು
* ಮೋದಿ ಜನಪ್ರಿಯತೆಗೆ ಜಾಗತಿಕ ಹೂಡಿಕೆದಾರರನ್ನು ಭಾರತದತ್ತ ಆಕರ್ಷಿಸಲು ಕೈಗೊಂಡ ಕ್ರಮ ಹಾಗೂ ಮುಲಾಜಿಲ್ಲದೆ ಹಿಂದೂತ್ವದ ಪ್ರತಿಪಾದನೆ ಎರಡು ಪ್ರಮುಖ ಕಾರಣವಾಗಿವೆ.* 2014ರ ಮೊದಲ ಅವಧಿ ಸರ್ಕಾರದಲ್ಲಿ ಬಡವರಿಗೆ ಒದಗಿಸಿದ ಸೌಲಭ್ಯಗಳ ಕುರಿತ ಪ್ರಚಾರ ಹಾಗೂ ಹಿಂದು ರಾಷ್ಟ್ರೀಯವಾದಿ ಅಜೆಂಡಾ 2019ರ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಭಾರಿ ಬಹುಮತದಿಂದ ಆಯ್ಕೆಯಾಗಲು ನೆರವಾದವು.* ಆಡಳಿತ ನಿರ್ವಹಣೆಯಲ್ಲಿ ಮೋದಿಯವರ ದೃಢತೆ ಹಾಗೂ ಚಾಕಚಕ್ಯತೆ ಕೂಡ ಅವರ ಜನಪ್ರಿಯತೆ ಮಾಸದಿರಲು ಕಾರಣ. ಜನಪ್ರಿಯತೆಗಾಗಿ ಅಗ್ಗದ ಕಾರ್ಯಕ್ರಮಗಳನ್ನು ಘೋಷಿಸುವ ಬದಲು ಜನರ ಕಲ್ಯಾಣಕ್ಕಾಗಿ ಸ್ಪಷ್ಟ ಧೋರಣೆಯೊಂದಿಗೆ ಕೆಲಸ ಮಾಡುತ್ತಾರೆ ಎಂಬುದು ಪ್ಲಸ್ ಪಾಯಿಂಟ್.* ತಪ್ಪು ನಡೆ ಇರಿಸದ ನಾಯಕನನ್ನು ಹೊಂದಿದ್ದೇವೆ ಹಾಗೂ ನುಡಿದಂತೆ ನಡೆಯುವ ಪ್ರಧಾನಿ ಎಂಬ ಅಭಿಪ್ರಾಯ ಜನರಲ್ಲಿ ವ್ಯಾಪಕ.* ಮನ್ ಕೀ ಬಾತ್ ರೇಡಿಯೊ ಕಾರ್ಯಕ್ರಮ, ಫೇಸ್​ಬುಕ್, ಟ್ವಿಟರ್ ಮತ್ತು ಯೂಟ್ಯೂಬ್​ನಂಥ ಸಾಮಾಜಿಕ ಮಾಧ್ಯಮ ಮೂಲಕ ಜನರೊಂದಿಗೆ ನೇರ ಸಂವಹನ ಮಾಡುವ ಅಪೂರ್ವ ಕಲೆ ಮೋದಿಗೆ ಸಿದ್ಧಿಸಿದೆ.
ಆಂಧ್ರಪ್ರದೇಶದಲ್ಲಿ ನವೆಂಬರ್ 2 ರಿಂದಲೇ ಶಾಲೆ ಶುರು ಮಾಡ್ತಾರಂತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 13 =
Remember me
