ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಅಥೆನ್ಸ್​ನಲ್ಲಿ ಗ್ರೀಕ್ ಸಹವರ್ತಿ ಕ್ಯಾರಿಯಾಕೋಸ್ ಮಿಸ್ಟೊಟಾಕಿಸ್ ಜೊತೆ ದ್ವಿಪಕ್ಷೀಯ ಬಾಂಧವ್ಯ ಹೆಚ್ಚಿಸುವ ಕುರಿತು ಮಾತುಕತೆ ನಡೆಸಿದರು. ಮೋದಿ, ಕಳೆದ 40 ವರ್ಷಗಳಲ್ಲಿ ಗ್ರೀಸ್​ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿಯಾಗಿದ್ದಾರೆ. 1983ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಗ್ರೀಸ್ ದೇಶದಲ್ಲಿ ಪ್ರವಾಸ ಕೈಗೊಂಡಿದ್ದರು.
ದಕ್ಷಿಣ ಆಫ್ರಿಕಾದ ಜೊಹಾನೆಸ್​ಬರ್ಗ್​ನಲ್ಲಿ ನಡೆದ 15ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡು ನೇರವಾಗಿ ಗ್ರೀಸ್ ರಾಜಧಾನಿಗೆ ತೆರಳಿದ ಮೋದಿ, ಅಥೆನ್ಸ್​ನಲ್ಲಿರುವ ಯುದ್ಧ ಸ್ಮಾರಕ ‘ಅನಾಮಿಕ ಯೋಧನ ಸಮಾಧಿ’ ಮೇಲೆ ಪುಷ್ಪಗುಚ್ಛವಿರಿಸಿ ನಮನ ಸಲ್ಲಿಸಿದರು.
ಅಧ್ಯಕ್ಷೆ ಕ್ಯಾತರಿನಾ ಎನ್ ಸ್ಯಾಕೆಲಾರೊಪೌಲೊ ಅವರನ್ನು ಭೇಟಿ ಮಾಡಿದ ನಂತರ ಪ್ರಧಾನಿ ಮಿಟ್ಸೊಟಾಕಿಸ್, ಮೋದಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಉಭಯ ದೇಶಗಳ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಕುರಿತು ಇಬ್ಬರೂ ನಾಯಕರು ರ್ಚಚಿಸಿದರು.
ಚಂದ್ರಯಾನ ಯಶಸ್ಸಿನ ಮಹತ್ವ:ಇದಕ್ಕೂ ಮುನ್ನ ಅಧ್ಯಕ್ಷೆ ಕ್ಯಾತರಿನಾರೊಂದಿಗೆ ನಡೆದ ಮಾತುಕತೆಯಲ್ಲಿ ಭಾರತದ ಚಂದ್ರಯಾನ-3 ಮಿಷನ್ ಯಶಸ್ಸಿನ ಕುರಿತು ಮೋದಿ ರ್ಚಚಿಸಿದರು. ‘ಇದು ಕೇವಲ ಭಾರತದ ವಿಜಯ ಮಾತ್ರವಲ್ಲ, ಇಡೀ ಮನುಕುಲದ ಗೆಲುವು’ ಎಂದು ಮೋದಿ ಬಣ್ಣಿಸಿದರು. ಚಂದ್ರಯಾನ-3 ಮಿಷನ್​ನಿಂದ ಸಂಗ್ರಹವಾಗುವ ದತ್ತಾಂಶಗಳಿಂದ ಇಡೀ ವೈಜ್ಞಾನಿಕ ಸಮುದಾಯ ಹಾಗೂ ಮನುಕುಲಕ್ಕೆ ನೆರವಾಗಲಿದೆ ಎಂದು ಮೋದಿ ಹೇಳಿದರು. ಚಂದ್ರಯಾನ ಮಿಷನ್ ಯಶಸ್ವಿಯಾಗಿದ್ದಕ್ಕೆ ಅಭಿನಂದನೆ ಸಲ್ಲಿಸಿದ ಗ್ರೀಸ್ ಅಧ್ಯಕ್ಷೆಗೆ ಮೋದಿ ಕೃತಜ್ಞತೆ ಸಲ್ಲಿಸಿದರು.
ಪ್ರಧಾನಿಗೆ ಗೌರವ ಪ್ರದಾನ:ಗ್ರೀಸ್​ನ ಎರಡನೇ ಅತ್ಯುನ್ನತ ನಾಗರಿಕ ಗೌರವ ಗ್ರಾ್ಯಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಹಾನರ್’ ಪ್ರಶಸ್ತಿಯನ್ನು ಪ್ರಧಾನಿ ಮೋದಿಗೆ ಪ್ರದಾನ ಮಾಡಲಾಯಿತು. ಅಧ್ಯಕ್ಷೆ ಕ್ಯಾತರಿನಾ ಪ್ರಶಸ್ತಿ ಪ್ರದಾನ ಮಾಡಿದರು. 1975ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದ್ದು ನಕ್ಷತ್ರದ ಮುಂಭಾಗದಲ್ಲಿ ಅಥೆನಾ ದೇವತೆಯ ತಲೆಯನ್ನು ಚಿತ್ರಿಸಲಾಗಿದೆ. ‘ಸದಾಚಾರಿಗಳನ್ನು ಮಾತ್ರವೇ ಗೌರವಿಸಬೇಕು’ ಎಂಬ ಮಾತನ್ನು ಫಲಕದ ಮೇಲೆ ಕೆತ್ತಲಾಗಿದೆ.
ಮಾಸ್ಕೋ:ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಖುದ್ದಾಗಿ ಹಾಜರಾಗುವ ಯೋಜನೆಯಿಲ್ಲ ಎಂದು ರಷ್ಯಾ ಆಡಳಿತ ಕೇಂದ್ರ ಕ್ರೆಮ್ಲಿನ್ ಶುಕ್ರವಾರ ತಿಳಿಸಿದೆ. ಉಕ್ರೇನ್​ನಲ್ಲಿ ಯುದ್ಧಾಪರಾಧ ಎಸಗಿರುವ ಕಾರಣ ಪುತಿನ್​ರ ಬಂಧನಕ್ಕೆ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ವಾರಂಟ್ ಹೊರಡಿಸಿದೆ. ಹೀಗಾಗಿ ಬಂಧನದ ಭೀತಿಯಿಂದ ಪುತಿನ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಆದರೆ ಯುದ್ಧಾಪರಾಧದ ಆರೋಪವನ್ನು ರಷ್ಯಾ ಬಲವಾಗಿ ತಳ್ಳಿ ಹಾಕಿದೆ.
ಐಸಿಸಿ ವಾರಂಟ್ ಇರುವುದರಿಂದ ಪುತಿನ್ ವಿದೇಶಕ್ಕೆ ತೆರಳಿದ್ದಾಗ ಬಂಧಿಸುವ ಸಾಧ್ಯತೆಗಳಿವೆ. ಈ ವಾರ ದಕ್ಷಿಣ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್ ಸಚಿವರ ಸಭೆಯಲ್ಲೂ ಪುತಿನ್ ಖುದ್ದಾಗಿ ಹಾಜರಾಗದೆ ವಿಡಿಯೋ ಲಿಂಕ್ ಮೂಲಕ ಭಾಷಣ ಮಾಡಿದ್ದರು.
ಒಬ್ಬ ಮಗನಿದ್ರೂ ಮತ್ತೆ ಗಂಡು ಮಗುವಾಗಿಲ್ಲ ಅಂತ ಮಕ್ಕಳ ಸಹಿತ ಬಾವಿಗೆ ಹಾರಿದ್ಲು; ಮೂವರು ಮಕ್ಕಳೂ ಸಾವು, ತಾಯಿ ಬಚಾವ್!

100 ಕೋಟಿ ರೂ. ಚೆಕ್​ ದೇಣಿಗೆಯಾಗಿ ಕೊಟ್ಟ ಭಕ್ತ; ಆಮೇಲಿನ ಸಂಗತಿ ಮೂಡಿಸಿತು ಅಚ್ಚರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
