ಮಧ್ಯಪ್ರದೇಶ:ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ದಾತಿಯಾದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರ ಹೆಸರನ್ನು ಬಳಸಿ ವಿವಾದಕ್ಕೆ ಕಾರಣರಾದರು.
ಭಾರತೀಯ ಜನತಾ ಪಕ್ಷದ ಶಾಸಕ ಮತ್ತು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಹೊಸ ವಿವಾದಕ್ಕೆ ಗುರಿಯಾಗಿದ್ದಾರೆ. ದಾತಿಯಾದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರ ಹೆಸರನ್ನು ಬಳಸಿದ ನಂತರ “ಮಹಿಳೆಯರನ್ನು ಅವರು ಅವಮಾನಿಸಿದ್ದಾರೆ” ಎಂದು ಆರೋಪಿಸಲಾಗಿದೆ.
ಸಾರ್ವಜನಿಕರ ಮುಂದೆ ಹಿಂದಿಯಲ್ಲಿ ಮಾತನಾಡಿದ ಮಿಶ್ರಾ, ಹೇಮಾ ಮಾಲಿನಿ ಹೆಸರನ್ನು ಪ್ರಸ್ತಾಪಿಸಿ, “ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಲ್ಲದೆ, ಹೇಮಾಮಾಲಿನಿಯವರು ಸಹ ನೃತ್ಯ ಮಾಡುವಷ್ಟು ದಾತಿಯಾ ಅಭಿವೃದ್ಧಿಪಡಿಸಿದ್ದೇನೆ” ಎಂದು ಹೇಳಿದರು.
ಮಿಶ್ರಾ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಿಶ್ರಾ ಅವರ ಹೇಳಿಕೆಯನ್ನು  ಸಂಯುಕ್ತ ಜನತಾದಳದ ಅಧಿಕೃತ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, ಮಿಶ್ರಾ ಅವರದೇ ಪಕ್ಷದ ಸಂಸದೆ ಹೇಮಾ ಮಾಲಿನಿ ಬಗ್ಗೆ ಇಂತಹ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಬರೆಯಲಾಗಿದೆ.
Madhya Pradesh BJP Home Minister Narottam Mishra insult Women in Rally !pic.twitter.com/fHEZ4jPoK7
— Ashish Singh (@AshishSinghKiJi)October 25, 2023

ಮಧ್ಯಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ನರೋತ್ತಮ್ ಮಿಶ್ರಾ ನಾಲ್ಕನೇ ಬಾರಿಗೆ ದಾತಿಯಾದಿಂದ ಸ್ಪರ್ಧಿಸುತ್ತಿದ್ದಾರೆ. ಮಿಶ್ರಾ ಅವರು 2008, 2013 ಮತ್ತು 2018 ರ ವಿಧಾನಸಭಾ ಚುನಾವಣೆಯಲ್ಲಿ ದಾತಿಯಾದಿಂದ ಗೆದ್ದರು. ಈ ಕ್ಷೇತ್ರದಿಂದ ಕಾಂಗ್ರೆಸ್ ಹಿರಿಯ ನಾಯಕ ರಾಜೇಂದ್ರ ಭಾರ್ತಿ ಅವರನ್ನು ಕಣಕ್ಕಿಳಿಸಿದೆ.
ಇಸ್ರೇಲ್-ಹಮಾಸ್ ಯುದ್ಧ: ಬಾಂಬ್ ಸ್ಫೋಟದಿಂದ ತತ್ತರಿಸಿರುವ ಗಾಜಾದಲ್ಲಿ ಸಂಕಷ್ಟದಲ್ಲಿದ್ದಾರೆ 50 ಸಾವಿರ ಗರ್ಭಿಣಿಯರು

Sign in to your account
Please enter an answer in digits:1 × three =
Remember me
