ನೀಲಗಿರಿ:ಕಾಡಾನೆ ದಾಳಿಯಿಂದ ಬೈಕ್​ ಸವಾರರು ಬಚಾವ್​ ಆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಘಟನೆ ಗುರುವಾರ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಮಧುಮಲೈನಲ್ಲಿ ನಡೆದಿದೆ.
ವಿಡಿಯೋದಲ್ಲಿ ಆನೆ ಲಾರಿಯತ್ತ ಸಾಗುತ್ತಿರುವ ದೃಶ್ಯವಿದೆ. ಲಾರಿಯ ಬಲಭಾಗದಲ್ಲಿ ಆನೆ ಹಾಗೂ ಎಡಭಾಗದಲ್ಲಿ ಬೈಕ್ ಸವಾರರು ಇದ್ದರು. ಕೂಡಲೇ ಲಾರಿ ಚಾಲಕ ಬಾಗಿಲು ತೆರೆದು ಒಳಗೆ ಬರಲು ಹೇಳಿದ. ಅಷ್ಟರಲ್ಲೇ ಆನೆ ಇನ್ನೊಂದು ಬದಿಗೆ ಬಂದರೂ ಲಾರಿಯೊಳಗೆ ಹತ್ತಿದ್ದರಿಂದ ಸವಾರರು ಪಾರಾಗಿದ್ದಾರೆ.
ಲಾರಿ ಚಾಲಕನ ಸಮಯ ಪ್ರಜ್ಞೆವಿಡಿಯೋದಲ್ಲಿ ಆನೆ ಸ್ವಲ್ಪ ಸಮಯ ಅಲ್ಲಿಯೇ ಉಳಿದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಅವರ ಹಿಂದೆ ಕಾರಿನಲ್ಲಿ ಬಂದಿದ್ದ ಮಲಯಾಳಿಗಳು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಲಾರಿ ಚಾಲಕನ ಸಮಯ ಪ್ರಜ್ಞೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಗುಂಡ್ಲುಪೇಟೆ ಮಾರ್ಗದ ಮೈಸೂರು-ಊಟಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಬಂಡೀಪುರ-ಮದುಮಲೈ ವನ್ಯಜೀವಿ ಅಭಯಾರಣ್ಯದ ಮೂಲಕ ಸುಮಾರು ಒಂದು ಕಿಲೋಮೀಟರ್​ಗೂ ಹೆಚ್ಚು ದೂರ ಈ ರಸ್ತೆಯಲ್ಲಿ ಪ್ರಯಾಣಿಸಬೇಕು.(ಏಜೆನ್ಸೀಸ್​)
ತಡರಾತ್ರಿ ಕಾರು ಅಪಘಾತ: ಕಾಂಗ್ರೆಸ್​ ಅಭ್ಯರ್ಥಿ, ಮಾಜಿ ಸಚಿವ ಬಾಬುರಾವ್​ ಚಿಂಚನಸೂರ್​ಗೆ ಗಾಯ

ನಿಜವಾದ ಸ್ನೇಹ ಅಂದ್ರೆ ಇದು! ಭೇಟಿಯೇ ಆಗದ ಫೇಸ್​ಬುಕ್​ ಫ್ರೆಂಡ್​ ಕಷ್ಟಕ್ಕೆ ಮಿಡಿದ ಶಿಕ್ಷಕ, 16 ಲಕ್ಷ ರೂ. ಸಂಗ್ರಹ

ರಾಜ್ಯಕ್ಕೆ ಡಬಲ್ ಎಂಜಿನ್ ಸರ್ಕಾರದ ಅವಶ್ಯಕತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
