ನ್ಯೂಯಾರ್ಕ್:ಚಂದಿರನ ಅಂಗಳದಲ್ಲಿ 4ಜಿ ಇಂಟರ್​ನೆಟ್ ಜಾಲ ಸ್ಥಾಪಿಸಲು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ನಿರ್ಧರಿಸಿದೆ. ಈ ಕೆಲಸ ನಿಭಾಯಿಸಲು ಟೆಲಿಕಾಂ ದಿಗ್ಗಜ ನೋಕಿಯಾ ಸಹಿತ ಹಲವು ಕಂಪನಿಗಳು ಗುತ್ತಿಗೆ ಪಡೆದಿವೆ. ಮೊದಲು 4ಜಿ/ಎಲ್​ಟಿಇ ಜಾಲ ಸ್ಥಾಪಿಸಿ ನಂತರ ಅದನ್ನು 5ಜಿಗೆ ಪರಿವರ್ತಿಸಲು ನೋಕಿಯಾ ಯೋಜಿಸಿದೆ. ನಾಸಾದ ‘ಟಿಪ್ಪಿಂಗ್ ಪಾಯಿಂಟ್’ ಆಯ್ಕೆ ಪ್ರಕ್ರಿಯೆಯನ್ವಯ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಬಾಹ್ಯಾಕಾಶ ಸಂಶೋಧನೆ ಮತ್ತು ಅಭಿವೃದ್ಧಿ ಈ ಯೋಜನೆಯ ಉದ್ದೇಶವಾಗಿದೆ.
ಗುರಿಯೇನು?:ಚಂದ್ರನ ಮೇಲೆ ಈ ದಶಕದ ಅಂತ್ಯದೊಳಗೆ ಕಾಯಂ ‘ಆರ್ಟೆಮಿಸ್’ ಕಾರ್ಯಕ್ರಮ ಜಾರಿಗೊಳಿಸಲು ಅಗತ್ಯವಾದ ತಂತ್ರಜ್ಞಾನ ಅಭಿವೃದ್ಧಿ ಪಡಿಸುವುದು ನಾಸಾದ ಗುರಿ.
ವೇಗದ ಸಂವಹನ:4ಜಿ ವ್ಯವಸ್ಥೆ ಚಂದ್ರನ ಮೇಲ್ಮೈ ಮೇಲೆ ಅತಿ ದೂರದ, ಅತಿ ವೇಗದ ಹಾಗೂ ದಕ್ಷ ಸಂವಹನಕ್ಕೆ ನೆರವಾಗುತ್ತದೆ ಎಂದು ನಾಸಾ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ವಲಸೆಗೆ ತಯಾರಿ:ಚಂದ್ರನ ಮೇಲ್ಮೈ ಮೇಲೆ ದೀರ್ಘ ಕಾಲ ಬಾಳುವಂಥ ಇಂಧನ ವ್ಯವಸ್ಥೆ ಅಗತ್ಯವಾಗಿದೆ. ಚಂದ್ರನ ಮೇಲೆ ಮಾನವ ವಲಸೆ ಹೋಗುವ ಸಾಮರ್ಥ್ಯವನ್ನು ಕೂಡ ಅಭಿವೃದ್ಧಿಪಡಿಸಬೇಕಾಗಿದೆ ಎಂದು ನಾಸಾ ಆಡಳಿತಾಧಿಕಾರಿ ಜಿಮ್ ಬ್ರೖೆಡನ್​ಸ್ಟೈನ್ ಹೇಳಿದ್ದಾರೆ.
ಈ ಯೋಜನೆಗೆ ನಾಸಾ ಒಟ್ಟು 14 ಅಮೆರಿಕನ್ ಕಂಪನಿಗಳನ್ನು ಆಯ್ಕೆ ಮಾಡಿದೆ. ಅವುಗಳಲ್ಲಿ ನೋಕಿಯಾ ಕೂಡ ಒಂದು. ಸ್ಪೇಸ್ ಎಕ್ಸ್, ಲಾಕ್​ಹೀಡ್ ಮಾರ್ಟಿನ್, ಸಿಯೆರಾ ನೆವಾಡಾ, ಎಸ್​ಎಸ್​ಎಎಲ್ ರೊಬೋಟಿಕ್ಸ್ ಮತ್ತು ಯುನೈಟೆಡ್ ಲಾಂಚ್ ಅಲಯನ್ಸ್ (ಯುಎಲ್​ಎ) ಇತರ ಪ್ರಮುಖ ಕಂಪನಿಗಳು.
ಚಂದ್ರನ ಮೇಲೆ ಎಲ್​ಟಿಇ ನೆಟ್​ವರ್ಕ್ ಸ್ಥಾಪಿಸಲು ನೋಕಿಯಾ 2018ರಲ್ಲೇ ಪ್ರಥಮ ಪ್ರಯತ್ನ ನಡೆಸಿತ್ತು. ಅಪೋಲೊ ಲ್ಯಾಂಡಿಂಗ್​ಗಾಗಿ ನೆಟ್​ವರ್ಕ್ ಸ್ಥಾಪಿಸಲು ಜರ್ಮನಿಯ ಬಾಹ್ಯಾಕಾಶ ಸಂಸ್ಥೆ ಪಿಟಿಸೈಂಟಿಸ್ಟ್ ್ಸ ಮತ್ತು ಬ್ರಿಟನ್​ನ ವೊಡಾಫೋನ್ ಜೊತೆ ಕೈಜೋಡಿಸಿತ್ತು. ಆದರೆ ಆ ಯೋಜನೆ ಕೊನೆಗೂ ಕೈಗೂಡಲೇ ಇಲ್ಲ.
2028ರ ಹೊತ್ತಿಗೆ ನಾಸಾದ ಗಗನಯಾನಿಗಳು ಚಂದ್ರನ ಮೇಲೆ ಕೆಲಸ ಮಾಡುವುದನ್ನು ನೋಡುವುದು ನಮ್ಮ ಗುರಿಯಾಗಿದೆ. ಅದಕ್ಕಾಗಿ ತ್ವರಿತವಾಗಿ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗುತ್ತದೆ.
|ಜಿಮ್ ಬ್ರೖೆಡನ್​ಸ್ಟೈನ್, ನಾಸಾ ಆಡಳಿತಾಧಿಕಾರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + sixteen =
Remember me
