ನವದೆಹಲಿ:ಭಾರತ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಉಡಾವಣೆ ಮಾಡಿದ ಬೆನ್ನಲ್ಲೇ ರಷ್ಯಾ ಕೂಡ ಚಂದ್ರನ ಅಂಗಳಕ್ಕೆ ಲೂನಾ-25 ನೌಕೆಯನ್ನು ಕಳುಹಿಸಿತ್ತು. ಆದರೆ, ಚಂದ್ರನ ಅಂಗಳಕ್ಕೆ ಇಳಿಯುವ ಮುನ್ನವೇ ಲೂನಾ-25 ಪತನವಾಗಿ ರಷ್ಯಾ ಯೋಜನೆ ವಿಫಲವಾಯಿತು. ಇದೀಗ ಲೂನಾ 25 ಪತನವಾದ ಸ್ಥಳವನ್ನು ನಾಸಾ ಪತ್ತೆ ಹಚ್ಚಿದೆ.
ನಾಸಾದ ಲೂನಾರ್​ ರಿಕಾನೈಸೆನ್ಸ್​ ಆರ್ಬಿಟರ್​ (ಎಲ್​ಆರ್​ಒ) ಚಂದ್ರನ ಮೇಲಿನ ಕುಳಿಯ ಹೊಸ ಚಿತ್ರವನ್ನು ಸೆರೆಹಿಡಿದಿದ್ದು, ಲೂನಾ 25 ಮಿಷನ್​ ಪತನವಾದ ಸ್ಥಳ ಇದೇ ಎಂದು ಹೇಳಲಾಗಿದೆ. ಏಕೆಂದರೆ ಚಂದ್ರನ ಮೇಲಿನ ಕುಳಿಯ ಮೊದಲು ಮತ್ತು ನಂತರದ ಚಿತ್ರವನ್ನು ಆರ್ಬಿಟರ್​ ಸೆರೆಹಿಡಿದಿದೆ.
2022ರ ಜೂನ್​ ತಿಂಗಳಲ್ಲಿ ತೆಗೆದ ಚಿತ್ರ ಮತ್ತು ಇತ್ತೀಚೆಗೆ ಸೆರೆಹಿಡಿದ ಚಿತ್ರವನ್ನು ನಾಸಾ ಬಿಡುಗಡೆ ಮಾಡಿದ್ದು, ಮೊದಲು ತೆಗೆದ ಚಿತ್ರದಲ್ಲಿ ಚಂದ್ರನ ಮೇಲಿನ ಕುಳಿಯ ಪಕ್ಕದಲ್ಲಿ ಯಾವುದೇ ಗುರುತು ಅಂದರೆ ಮತ್ತೊಂದು ಕುಳಿ ಪತ್ತೆಯಾಗಿರಲಿಲ್ಲ. ಆದರೆ, ಇತ್ತೀಚೆಗೆ ತೆಗೆದ ಚಿತ್ರದಲ್ಲಿ ಚಂದ್ರನ ಕುಳಿಯ ಪಕ್ಕದಲ್ಲಿ ಮತ್ತೊಂದು ಕುಳಿ ಗೋಚರವಾಗುತ್ತಿದೆ. ಇದೇ ಲೂನಾ 25 ಪತನಗೊಂಡ ಜಾಗ ಎಂದು ಭಾವಿಸಲಾಗಿದೆ.
ಇದನ್ನೂ ಓದಿ:ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಕಪಿಲ್ ಸಿಬಲ್ ನೋಡಿದ ಬಳಿಕ ಕಾಂಗ್ರೆಸ್​​​​ನಲ್ಲಿ ಅಸಮಾಧಾನ ಸ್ಫೋಟ; ರಾಹುಲ್ ಹೇಳಿದ್ದೇನು?
ಚಂದ್ರನ ಮೇಲೆ ಅವರೋಹಣ ಕ್ರಮದಲ್ಲಿ ಇಳಿಯುವ ಸಂದರ್ಭದಲ್ಲಿ ಲೂನಾ 25 ಅಸಂಗತತೆಯನ್ನು ಎದುರಿಸಿದ್ದು, ಇದರ ಪರಿಣಾಮ ಚಂದ್ರನ ಮೇಲ್ಮೈ ಮೇಲೆ ಅಪ್ಪಳಿಸಿದೆ ಎಂದು ಹೇಳಲಾಗಿದೆ. ಹೊಸದಾಗಿ ರಚನೆಯಾಗಿರುವ ಕುಳಿಯು ಲೂನಾ 25 ಪತನದಿಂದ ಸೃಷ್ಟಿಯಾಗಿದೆ ಎಂದು ನಂಬಲಾಗಿದೆ.

ಚಂದ್ರನ ಮೇಲ್ಮೈನಲ್ಲಿ ಸೃಷ್ಟಿಯಾಗಿರುವ ಹೊಸ ಕುಳಿಯು ಸರಿಸುಮಾರು 10 ಮೀಟರ್ ವ್ಯಾಸವನ್ನು ಹೊಂದಿದೆ ಮತ್ತು ಚಂದ್ರನ ಮೇಲೆ 57.865 ಡಿಗ್ರಿ ದಕ್ಷಿಣ ಅಕ್ಷಾಂಶ ಮತ್ತು 61.360 ಡಿಗ್ರಿ ಪೂರ್ವ ರೇಖಾಂಶದಲ್ಲಿದೆ. ಇದು ಸುಮಾರು ಮೈನಸ್ 360 ಮೀಟರ್ ಎತ್ತರದಲ್ಲಿದೆ. ಈ ಸ್ಥಳವು 69.545 ಡಿಗ್ರಿ ದಕ್ಷಿಣ, 43.544 ಡಿಗ್ರಿ ಪೂರ್ವದಲ್ಲಿ ಲೂನಾ 25 ನೌಕೆಯ ಉದ್ದೇಶಿತ ಲ್ಯಾಂಡಿಂಗ್ ಪಾಯಿಂಟ್‌ಗಿಂತ ಸುಮಾರು 400 ಕಿಲೋಮೀಟರ್ ದೂರದಲ್ಲಿದೆ.
ಇಸ್ರೊ ನೌಕೆ ಚಂದ್ರಯಾನ-3 ಜುಲೈ 14ರಂದು ಉಡಾವಣೆಗೊಂಡರೆ ಲೂನಾ-25 ಬಹುತೇಕ ಒಂದು ತಿಂಗಳ ನಂತರ, ಆಗಸ್ಟ್ 11ರಂದು ಗಗನಕ್ಕೆ ಜಿಗಿಯಿತು. ಲೂನಾ-25, ಕಳೆದ 50 ವರ್ಷಗಳಲ್ಲಿ ರಷ್ಯಾದ ಮೊದಲ ಚಂದ್ರ ಮಿಷನ್ ಆಗಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್​ ಮಾಡುವ ಪ್ರಯತ್ನದಲ್ಲಿ ಕಕ್ಷೆಯನ್ನು ಕಡಿಮೆ ಮಾಡುವಾಗ ಲೂನಾ-25ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಪತನವಾಯಿತು. ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್​ಕಾಸ್ಮೋಸ್ ಈ ಲೂನಾ-25 ನೌಕೆಯನ್ನು ಉಡಾವಣೆ ಮಾಡಿತ್ತು.
ಇದನ್ನೂ ಓದಿ:ಈಗ ವಾಣಿಜ್ಯ ಬಳಕೆಯ ಸಿಲಿಂಡರ್ ದರವೂ ಕಡಿತ; ಹೊಸ ಬೆಲೆ ಇಂದಿನಿಂದ ಜಾರಿ, ಇತ್ತೀಚಿನ ದರ ಎಷ್ಟು?
ಇಸ್ರೋ ಚಂದ್ರಯಾನ 3 ಯಶಸ್ವಿಯಾಗಿದೆ. ಆಗಸ್ಟ್​ 23 ರಂದು ಸಂಜೆ 6 ಗಂಟೆ 4 ನಿಮಿಷಕ್ಕೆ ಸರಿಯಾಗಿ ಇಸ್ರೋದ ಚಂದ್ರಯಾನ ನೌಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಮೂಲಕ ಇತಿಹಾಸ ಬರೆಯಿತು. ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಮತ್ತು ಚಂದ್ರನ ಅಂಗಳದಲ್ಲಿ ಇಳಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.(ಏಜೆನ್ಸೀಸ್​)
ಕಿರುತೆರೆ ನಟಿ ಮನೆಯಲ್ಲಿ ಶವವಾಗಿ ಪತ್ತೆ; ಠಾಣೆ ಮೆಟ್ಟಿಲೇರಿದ ಪ್ರಕರಣ

ಒಂದು ದೇಶ, ಒಂದು ಚುನಾವಣೆ ಪ್ರಸ್ತಾವನೆ ಅಧ್ಯಯನಕ್ಕೆ ಮಾಜಿ ರಾಷ್ಟ್ರಪತಿ ನೇತೃತ್ವದಲ್ಲಿ ಸಮಿತಿ ರಚನೆ

ಕೇಂದ್ರ ಸಚಿವರ ಮನೆಯಲ್ಲಿ ಮೃತದೇಹ ಪತ್ತೆ! ಘಟನಾ ಸ್ಥಳದಲ್ಲಿದ್ದ ಬಂದೂಕು ಯಾರದ್ದು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − four =
Remember me
