ಬೆಂಕಿ ಹೊತ್ತಿಕೊಂಡ ಕಾರಿನಲ್ಲಿಯೇ ಎನ್​ಸಿಪಿ ಮುಖಂಡನೋರ್ವ ಸಜೀವ ದಹನಗೊಂಡ ದುರ್ಘಟನೆ ಮಹಾರಾಷ್ಟ್ರದ ನಾಸಿಕ್​​ನಲ್ಲಿ ನಡೆದಿದೆ.
ಎನ್​ಸಿಪಿ ಮುಖಂಡ ಸಂಜಯ್ ಶಿಂಧೆ ಬೆಂಕಿಗೆ ಬಲಿಯಾಗಿದ್ದಾರೆ. ಇವರ ಕಾರು ಮುಂಬೈ-ಆಗ್ರಾ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ ಶಾರ್ಟ್​ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡಿದೆ. ನೋಡನೋಡುತ್ತಿದ್ದಂತೆ ಕಾರು ಧಗಧಗನೆ ಉರಿದು, ಕಾರಿನೊಳಗಿದ್ದ ಸಂಜಯ್​ ಶಿಂಧೆ ಅವರು ಸಾವನ್ನಪ್ಪಿದ್ದಾರೆ.ಇದನ್ನೂ ಓದಿ:ಜಿರಾಫೆ ಹೇಗೆ ಹುಲ್ಲು ತಿನ್ನತ್ತೆ? ಇದೆಂತಾ ಪ್ರಶ್ನೆ ಎಂದು ಅಸಡ್ಡೆ ಮಾಡ್ಬೇಡಿ..ಈ ವಿಡಿಯೋ ನೋಡಿದ್ರೆ ಅಚ್ಚರಿ ಪಡ್ತೀರಿ !
ಪ್ರಮುಖ ವೈನ್​ ಉತ್ಪಾದನಾ ಕೇಂದ್ರವಾಗಿರುವ ನಾಸಿಕ್​ನಲ್ಲಿ ಶಿಂಧೆ ಕೂಡ ದ್ರಾಕ್ಷಿ ಹಣ್ಣಿನ ಬೆಳೆಗಾರರು. ಇವರು ತಾವು ಬೆಳೆದ ಹಣ್ಣುಗಳನ್ನು ದೊಡ್ಡಮಟ್ಟದಲ್ಲಿ ರಫ್ತು ಮಾಡುತ್ತಾರೆ. ಇಂದು ತಮ್ಮ ಹಣ್ಣಿನ ತೋಟಕ್ಕೆ ಕೀಟನಾಶಕಗಳನ್ನು ಖರೀದಿಸಲು ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ. ಕಡ್ವಾ ನದಿಯ ಸೇತುವೆಯ ಮೇಲೆ ಕಾರಿಗೆ ಬೆಂಕಿ ಹೊತ್ತಿದೆ. ಆದರೆ ದುರಂತವೆಂದರೆ ಕಾರಿನ ಬಾಗಿಲುಗಳೂ ಜಾಮ್ ಆಗಿದ್ದವು. ಸ್ಥಳೀಯರು ಕೂಡಲೇ ಆಗಮಿಸಿ, ಅದರೊಳಗೆ ಇದ್ದವರನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬೆಂಕಿ ತೀಕ್ಷಣವಾಗಿ ಹರಡಿದ ಪರಿಣಾಮ ಶಿಂಧೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲಷ್ಟೇ ಸಾಧ್ಯವಾಯಿತು. ಕಾರಿನಲ್ಲಿ ಇನ್ಯಾರಾದರೂ ಇದ್ದರಾ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. (ಏಜೆನ್ಸೀಸ್​)
ಮತಾಂತರಗೊಂಡು ಮದುವೆಯಾದಳು: ಹಿಂಸೆ ತಾಳದೇ ವಿಧಾನಸಭಾ ಕಟ್ಟಡದೆದುರು ಬೆಂಕಿ ಹಚ್ಚಿಕೊಂಡಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 − one =
Remember me
