ನಾಸಿಕ್​:ಲಾಕ್​ಡೌನ್​ ನಿಯಮ ಪಾಲಿಸಿ ಎಂದು ಎಲ್ಲರೂ ಮನವಿ ಮಾಡುತ್ತಲೇ ಇದ್ದಾರೆ. ಆದರೆ, ನಿಯಮ ಉಲ್ಲಂಘನೆ ಮಾಡುತ್ತಿರುವ ಪ್ರಕರಣಗಳಂತೂ ನಿಲ್ಲುತ್ತಿಲ್ಲ. ಇದೀಗ ಹಲವು ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಕೇಳುವವರೇ ಇಲ್ಲದಂತಾಗಿದೆ ಎಂಬುದು ಪೊಲೀಸರ ಅಳಲು.ಇದರ ನಡುವೆಯೂ ಹಲವರು ಕಟ್ಟುನಿಟ್ಟಾಗಿ ಲಾಕ್​ಡೌನ್​ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಅಂಥವರ ಬಗ್ಗೆ ಪೊಲೀಸರು ಕೂಡ ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹ ನೀಡುತ್ತಿದ್ದಾರೆ. ಅಂಥದ್ದರಲ್ಲಿ ಮನೆಯಲ್ಲಿಯೇ ಮದುವೆಯಾದವರಿಗೆ ಪೊಲೀಸರಿಂದ ಭರ್ಜರಿ ಆಫರ್​ ಇಲ್ಲಿದೆ.ಮಹಾರಾಷ್ಟ್ರ ನಾಸಿಕ್​ನ ಪೊಲೀಸರು ಇಂಥ ಜೋಡಿಗೆ ವಿನೂತನವಾಗಿ ಶುಭಾಶಯ ಕೋರಿದ್ದು ಭಾರಿ ಪ್ರಶಂಸೆಗೆ ಕಾರಣವಾಗಿದೆ.
ಇದನ್ನೂ ಓದಿ;ಅಬ್ಬಾ ಏನ್​ ಶಿಸ್ತು…! ಐಟಿಪಿಎಲ್​ ಮುಖ್ಯರಸ್ತೆ ಅನ್ನೋ ಹೆಗ್ಗಳಿಕೇನಾ?
ನಾಸಿಕ್​ನ ಅಪಾರ್ಟ್​​ಮೆಂಟ್​ವೊಂದರಲ್ಲಿ ಜೋಡಿಯೊಂದು ಮನೆಯಲ್ಲಿಯೇ ಮದುವೆ ಮಾಡಿಕೊಂಡು ಲಾಕ್​ಡೌನ್​ನ ಎಲ್ಲ ನಿಯಮಗಳನ್ನು ಪಾಲಿಸಿತ್ತು. ಈ ವಿಷಯ ಅರಿವಿಗೆ ಬರುತ್ತಿದ್ದಂತೆ ಸ್ಥಳೀಯ ಪೊಲೀಸರು ಅವರಿಗೆ ವಿಭಿನ್ನವಾಗಿ ಶುಭಾಶಯ ಕೋರಲು ಮುಂದಾದರು.ಪೊಲೀಸ್​ ಗಸ್ತು ವಾಹನಗಳೊಂದಿಗೆ ಅಪಾರ್ಟ್​ಮೆಂಟ್​ ಮುಂದಿನ ರಸ್ತೆಯಲ್ಲಿ ನಿಂತ ಪೊಲೀಸ್​ ಸಿಬ್ಬಂದಿ ವಾಹನದಲ್ಲಿ ಮೈಕ್​ನಲ್ಲಿ ಮುಬಾರಕ್​ ಹೋ ತುಮ್ಕೋ ಯೇ ಶಾದಿ ತುಮ್ಹಾರಿ… ಹಾಡನ್ನು ನುಡಿಸಿದ್ದಾರೆ. ಬಳಿಕ ಹಾಡಿಗೆ ಚಪ್ಪಾಳೆ ತಟ್ಟುತ್ತ ನವಜೋಡಿಗೆ ಶುಭಾಶಯ ಕೋರಿದ್ದಾರೆ. ಜತೆಗೆ, ಕೆಲ ಜನರೂ ಕೂಡ ಪೊಲೀಸರಿಗೆ ಸಾಥ್​ ನೀಡಿದ್ದಾರೆ.
ಪೊಲೀಸರಿಂದ ದೊರೆತ ಈ ಉಡುಗೊರೆ ನವವಿವಾಹಿತರನ್ನು ಭಾವುಕರನ್ನಾಗಿಸಿದೆ. ಅವರೂ ಕೂಡ ಚಪ್ಪಾಲೆ ತಟ್ಟುತ್ತ ಸಂತಸ ವ್ಯಕ್ತಪಡಿಸಿದ್ದಾರೆ. ಈ ಹೃದಯಸ್ಪರ್ಶಿ ಸನ್ನಿವೇಶದ ವಿಡಿಯೋವನ್ನು ಮಹಾರಾಷ್ಟ್ರ ಸಿಎಂ ಕಚೇರಿ ಕೂಡ ಶೇರ್​ ಮಾಡಿದೆ.ಅದರ ಲಿಂಕ್​ ಇಲ್ಲಿದೆ ನೋಡಿ….
https://www.instagram.com/tv/B_sBGqdJLG5/?utm_source=ig_web_copy_link
ಇದೆಂಥ ದೌರ್ಭಾಗ್ಯ.. ಕೇರಳದ ಅತಿದೊಡ್ಡ ಅರಮನೆಯಲ್ಲಿ ಅದರ ಮಾಲೀಕ ವಾಸವಿದ್ದದ್ದು ಕೇವಲ ಒಂದು ತಿಂಗಳಷ್ಟೇ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − six =
Remember me
