ಬೆಂಗಳೂರು:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿದ್ದ ಮಹತ್ವಾಕಾಂಕ್ಷೆಯ ಯೋಜನೆ ಚಂದ್ರಯಾನ-3 ಸಾಫ್ಟ್​ ಲ್ಯಾಂಡಿಂಗ್ ಆದಾಗಿನಿಂದ ನಿರಂತರವಾಗಿ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ನಟ ಪ್ರಕಾಶ್ ರಾಜ್ ಇಂದು ಮತ್ತೊಂದು ಹೇಳಿಕೆ ಮೂಲಕ ಗಮನ ಸೆಳೆದಿದ್ದಾರೆ.
ದೇಶದ ಹೆಸರನ್ನು ಇಂಡಿಯಾ ಬದಲಾಗಿ ಭಾರತ ಎಂದು ಬದಲಿಸುವ ಕುರಿತಂತೆ ಮಾತುಗಳು ಹೊರಬಿದ್ದಿರುವ ಹಿನ್ನೆಲೆಯಲ್ಲಿ ಇಂದು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿರುವ ಪ್ರಕಾಶ್​ ರಾಜ್ ಪ್ರಶ್ನೆಯೊಂದನ್ನು ಕೇಳಿದ್ದಾರೆ. ‘ಚುನಾವಣೆಯ ನಾಟಕಕ್ಕಾಗಿ ವೇಷಗಳನ್ನು.. ದೇಶದ ಹೆಸರನ್ನೂ ಬದಲಾಯಿಸುವ ವಿದೂಷಕ ಯಾರು?’ ಎಂದು ಪ್ರಶ್ನಿಸಿರುವುದು ಅವರು ಇನ್ನೊಮ್ಮೆ ಭಾರಿ ಟ್ರೋಲ್​ಗೆ ಒಳಗಾಗುವ ಲಕ್ಷಣ ಗೋಚರಿಸಿದೆ.
ಇದನ್ನೂ ಓದಿ:ನಿಮಗಿದು ಒಪ್ಪಿಗೆಯೇ? ಎಂದು ಸಾಧು-ಸಂತರನ್ನು ಗುರಿಯಾಗಿಸಿ ಇನ್ನೊಂದು ವಿವಾದಾತ್ಮಕ ಹೇಳಿಕೆ ನೀಡಿದ ನಟ ಪ್ರಕಾಶ್ ರಾಜ್​
ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ವೇಳೆ ಚಂದ್ರನಿಂದ ಬಂದ ಮೊದಲ ಫೋಟೋ ಎಂದು ವಿರೂಪಗೊಳಿಸಿದ್ದ ಚಾಯ್​ವಾಲ್​ ಫೋಟೋ ಪೋಸ್ಟ್ ಮಾಡಿ ಪ್ರಕಾಶ್ ರಾಜ್ ವಿವಾದಕ್ಕೆ ಒಳಗಾಗಿದ್ದರು. ಬಳಿಕ ಅದನ್ನು ಸಮರ್ಥಿಸಿಕೊಂಡು ಮತ್ತೆ ಪುನಃ ಟ್ರೋಲ್ ಆಗಿದ್ದರು.
ಇದನ್ನೂ ಓದಿ:ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕಾಶ್ ರಾಜ್, ನೆಟ್ಟಿಗರಿಂದ ಫುಲ್ ಟ್ರೋಲ್
ಬಳಿಕ ತಮಿಳುನಾಡು ಸಚಿವ ಉದಯನಿಧಿ ಸನಾತನ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬೆನ್ನಿಗೇ ‘ಹಿಂದೂಗಳು ತನಾತನಿಗಳು ಅಲ್ಲ, ತನಾತನಿಗಳು ಮಾನವವಿರೋಧಿಗಳು. ನೀವು ಇದನ್ನು ಒಪ್ಪಿದರೆ ರಿಟ್ವೀಟ್ ಮಾಡಿ, ಎಲ್ಲರಿಗೂ ಹ್ಯಾಪಿ ಸಂಡೇ’ ಎಂದು ಪ್ರಕಾಶ್ ರಾಜ್​ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ನಂತರ ಮೊನ್ನೆ ಸಾಧು-ಸಂತರನ್ನು ಗುರಿಯಾಗಿಸಿ ಇನ್ನೊಂದು ಪೋಸ್ಟ್ ಮಾಡಿದ್ದರು. ಇಂದು ಮತ್ತೆ ಒಂದು ವರ್ಗದವರನ್ನು ಕೆಣಕುವ ಪೋಸ್ಟ್ ಮಾಡಿದ್ದಾರೆ.
SURVEY of INDIA:-Name the CLOWN who changes CLOTHS and tries to change his COUNTRY s name too .. for his ELECTION DRAMA .. ಚುನಾವಣೆಯ ನಾಟಕಕ್ಕಾಗಿ ವೇಷಗಳನ್ನು.. ದೇಶದ ಹೆಸರನ್ನೂ ಬದಲಾಯಿಸುವ ವಿದೂಷಕ ಯಾರು#justasking— Prakash Raj (@prakashraaj)September 6, 2023
SURVEY of INDIA:-Name the CLOWN who changes CLOTHS and tries to change his COUNTRY s name too .. for his ELECTION DRAMA .. ಚುನಾವಣೆಯ ನಾಟಕಕ್ಕಾಗಿ ವೇಷಗಳನ್ನು.. ದೇಶದ ಹೆಸರನ್ನೂ ಬದಲಾಯಿಸುವ ವಿದೂಷಕ ಯಾರು#justasking
ಮಗು ಅಳುತ್ತಿದೆ ಅಂತ ಮೂಗು-ಬಾಯಿ ಒತ್ತಿ ಹಿಡಿದ ಅಪ್ಪ; ಉಸಿರುಗಟ್ಟಿ ಸಾವಿಗೀಡಾದ 14 ತಿಂಗಳ ಮಗ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + fifteen =
Remember me
