ಜಗತ್ತನ್ನು ಪ್ರಮುಖವಾಗಿ ಕಾಡುತ್ತಿರುವ ಸಮಸ್ಯೆಗಳಲ್ಲಿ ಭಯೋತ್ಪಾದನೆಯೂ ಒಂದು. ಪ್ರಸಕ್ತ ಕರೊನಾ ಸೋಂಕಿನ ವಿರುದ್ಧ ಹೋರಾಟ ಅಗತ್ಯವೇ. ಆದರೆ, ಇದರ ಮಧ್ಯೆ, ಭಯೋತ್ಪಾದನಾ ವಿರೋಧಿ ಹೋರಾಟ ದುರ್ಬಲವಾಗಬಾರದು ಅಥವಾ ಪ್ರಾಮುಖ್ಯ ಕಳೆದುಕೊಳ್ಳಬಾರದು. ಇಡೀ ಅಂತಾರಾಷ್ಟ್ರೀಯ ವಲಯ ಕರೊನಾ ವಿರುದ್ಧ ಹೋರಾಟದಲ್ಲಿ ಮುಳುಗಿದ್ದರೆ ಪಾಕಿಸ್ತಾನ ಮಾತ್ರ ಈ ಸ್ಥಿತಿಯಲ್ಲೂ ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದೆ. ಬೇಸಿಗೆ ಸಮಯ ಆಗಿರುವುದರಿಂದ ಜಮ್ಮು-ಕಾಶ್ಮೀರ ಪ್ರದೇಶದಲ್ಲಿ ಹಿಮ ಕರಗುತ್ತಿದ್ದು, ಈ ಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಭಯೋತ್ಪಾದಕರು ಭಾರತದ ಗಡಿಯೊಳಗೆ ನುಸುಳಿ ಬರಲು ಯತ್ನಿಸುತ್ತಲೇ ಇದ್ದಾರೆ. ಇಂಥ ಹಲವು ಯತ್ನಗಳನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸಿದೆ.
ಇದನ್ನೂ ಓದಿ:ಲಾಕ್​ಡೌನ್​ನಲ್ಲಿ ಅಪ್ಪ-ಮಗಳ ದಿನಕ್ಕೊಂದು ವೇಷ​!
ದಿನಾಚರಣೆ ಉದ್ದೇಶ:ಭಯೋತ್ಪಾದನೆಯಿಂದಾಗುವ ಹಿಂಸೆ, ಅಪಾಯ ಮತ್ತು ಜನರ, ಸಮಾಜ ಮತ್ತು ದೇಶಗಳ ಮೇಲೆ ಅದರಿಂದ ಉಂಟಾಗುವ ಪರಿಣಾಮದ ಬಗ್ಗೆ ದೇಶದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಮೇ 21ರಂದು ಭಾರತದಲ್ಲಿ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ದಿನವನ್ನು ಆಚರಿಸಲಾಗುತ್ತದೆ. ಜನಸಾಮಾನ್ಯರು ಭಯೋತ್ಪಾದನೆಯ ಭೀತಿಯಿಂದ ದೂರವಾಗಿ ಶಾಂತಿಯಿಂದ ಬದುಕಬೇಕು ಎಂಬ ಉದ್ದೇಶ ಇದರ ಹಿಂದಿದೆ. ಈ ದಿನ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಭಯೋತ್ಪಾದಕರ ಅಟ್ಟಹಾಸಕ್ಕೆ ಬಲಿಯಾದ ದಿನವೂ ಹೌದು. ಅವರ ಪುಣ್ಯಸ್ಮರಣೆ ಅಂಗವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ಭಾರತಕ್ಕೆ ಬೆಂಬಿಡದ ಸಮಸ್ಯೆ:ಭಾರತ ಹಲವಾರು ಸಂದರ್ಭಗಳಲ್ಲಿ ಭಯೋತ್ಪಾದಕರ ಕರಾಳ ಕೃತ್ಯಗಳಿಗೆ ಸಾಕ್ಷಿಯಾಗಿದೆ. ಕದ್ದುಮುಚ್ಚಿ ದಾಳಿ ನಡೆಸುತ್ತಿದ್ದ ಭಯೋತ್ಪಾದಕರು 2008 ನವೆಂಬರ್​ನಲ್ಲಿ ಮುಂಬೈನ ಹಲವು ತಾಣಗಳ ಮೇಲೆ ಏಕಾಏಕಿ ದಾಳಿ ನಡೆಸಿದ ಆಘಾತವನ್ನು ದೇಶ ಇನ್ನೂ ಮರೆತಿಲ್ಲ. ಭಾರತವು ಭಯೋತ್ಪಾದನೆಯ ನಿಗ್ರಹಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದೆ. ಮುಖ್ಯವಾಗಿ, ಭಯೋತ್ಪಾದನಾ ನಿಗ್ರಹ ಕಾಯ್ದೆಯನ್ನು ಬಲಪಡಿಸಿದೆ, ಭದ್ರತಾ ಪಡೆಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಲಾಗಿದೆ. ಪ್ರತಿವರ್ಷದ ಬಜೆಟ್​ನಲ್ಲಿ ಭಯೋತ್ಪಾದನಾ ನಿಗ್ರಹ ಚಟುವಟಿಕೆಗಳಿಗೆ ಹೆಚ್ಚಿನ ಹಣವನ್ನು ವಿನಿಯೋಗಿಸಲಾಗುತ್ತಿದೆ.
ಇದನ್ನೂ ಓದಿ:VIDEO: ಸರ್ಕಾರವನ್ನು ಪ್ರಶ್ನಿಸಿದ್ದಕ್ಕೆ ಆಗ ಅಮಾನತು ಶಿಕ್ಷೆ; ಈಗ ಕಟ್ಟಿ, ಥಳಿಸಿ, ಎಳೆದಾಡಿದ ಪೊಲೀಸರು- ವೀಡಿಯೋ ವೈರಲ್​
ಜಾಗತಿಕ ಸವಾಲು:ಭಯೋತ್ಪಾದನೆಯ ಕರಾಳ ಛಾಯೆ ಭಾರತವನ್ನು ಮಾತ್ರ ವ್ಯಾಪಿಸಿಕೊಂಡಿಲ್ಲ. ಜಗತ್ತಿನ ಬಹುತೇಕ ದೇಶಗಳು ಒಂದಲ್ಲ ಒಂದು ರೀತಿಯಲ್ಲಿ ಭಯೋತ್ಪಾದನೆ ದಾಳಿಗೆ ನಲುಗುತ್ತಿವೆ. ಕೆಲವು ದೇಶಗಳಲ್ಲಿ ಈ ಪಿಡುಗು ನಿತ್ಯದ ಬವಣೆಯಾಗಿದೆ. ಮತ್ತೆ ಕೆಲ ದೇಶಗಳಂತೂ ಸದಾ ಕಾಲ ಭಯೋತ್ಪಾದನೆ ದಾಳಿಯ ಭಯದಲ್ಲಿಯೇ ಬದುಕು ನಡೆಸುವ ಶೋಚನೀಯ ಸ್ಥಿತಿ ಸೃಷ್ಟಿಯಾಗಿದೆ. ಇದು ಭಯೋತ್ಪಾದನೆಯ ವ್ಯಾಪಕ ಸ್ವರೂಪ ಮತ್ತು ಸಮಸ್ಯೆಯ ಗಂಭೀರತೆಗೆ ಸಾಕ್ಷಿ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಮಾತ್ರವಲ್ಲ, ಅಭಿವೃದ್ಧಿ ರಾಷ್ಟ್ರಗಳಿಗೂ ಭಯೋತ್ಪಾದನೆ ದಾಳಿಯ ಭಯ ತಪ್ಪಿದ್ದಲ್ಲ. ಅಮೆರಿಕ ಕೂಡ ಭಯೋತ್ಪಾದನೆಯ ಸಂತ್ರಸ್ತ ರಾಷ್ಟ್ರವೇ ಆಗಿದೆ ಮತ್ತು 2001 ಸೆಪ್ಟೆಂಬರ್ 11ರಂದು ನಡೆದ ದಾಳಿಯ ಬಳಿಕವೇ ಅದು ಎಚ್ಚೆತ್ತುಕೊಂಡು, ಭಯೋತ್ಪಾದನೆ ವಿರುದ್ಧ ಸಮರ ಸಾರಿದೆ. ಆ ಮುಂಚೆ, ಭಾರತ ಈ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದರೂ ಅಮೆರಿಕ ಜಾಣಮೌನ ವಹಿಸಿತ್ತು.
ಇದನ್ನೂ ಓದಿ:ನಿಮಗೆ ತಿಳಿದಿರಲಿ- ಪ್ರಾಣಿ ಸಂಕುಲಕ್ಕೂ ಅವುಗಳದ್ದೇ ಆದ ಕಾರಿಡಾರ್​ಗಳಿವೆ….
ತೀವ್ರಗೊಳ್ಳಲಿ ಸಮರ:ಅಂತಾರಾಷ್ಟ್ರೀಯ ಸಮುದಾಯ ಭಯೋತ್ಪಾದನೆಯ ಅಪಾಯವನ್ನು ಕೊಂಚ ತಡವಾಗಿಯಾದರೂ ಅರ್ಥ ಮಾಡಿಕೊಂಡಿದೆ. ಆದರೂ, ಉಗ್ರವಾದವನ್ನು ಬೆಂಬಲಿಸುತ್ತಿರುವ ರಾಷ್ಟ್ರಗಳಿಗೆ ಹಣಕಾಸಿನ, ಶಸ್ತ್ರಾಸ್ತ್ರಗಳ ಬೆಂಬಲ ಸಿಗುವುದು ಇನ್ನೂ ನಿಂತಿಲ್ಲ. ಭಯೋತ್ಪಾದನೆ ಇಡೀ ವಿಶ್ವಕ್ಕೆ ಕಂಟಕ ಎಂಬುದನ್ನು ಅರಿಯಬೇಕಿದೆ. ಹಾಗಾಗಿ, ಎಲ್ಲ ಬಗೆಯ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಜಾಗತಿಕ ಸಮುದಾಯ ಸಂಘಟಿತವಾಗಿ ಮತ್ತಷ್ಟು ತೀವ್ರಪ್ರಮಾಣದಲ್ಲಿ ಸಮರ ನಡೆಸಬೇಕಿದೆ. ಆ ಮೂಲಕ ಹಿಂಸೆಯನ್ನು, ರಕ್ತಪಾತವನ್ನು ಕೊನೆಗೊಳಿಸುವ ಸಂಕಲ್ಪ ಸಾಕಾರಗೊಳ್ಳಬೇಕಿದೆ.
ಬಾಯ್​ ಫ್ರೆಂಡ್​ಗೆ ಆಕೆ ಕೊಟ್ಟದ್ದು ಒಂದಲ್ಲ, ಎರಡಲ್ಲ ಬರೋಬ್ಬರಿ 1,000 ಕಿಲೋ ಈರುಳ್ಳಿ ಗಿಫ್ಟ್​ ! ಯಾಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + seven =
Remember me
