ನವದೆಹಲಿ :ರಾಷ್ಟ್ರ ಪ್ರಶಸ್ತಿ ವಿಜೇತ ಹಿರಿಯ ನಟಿ ಸುರೇಖಾ ಸಿಕ್ರಿ ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 75 ವರ್ಷ ವಯಸ್ಸಾಗಿದ್ದ ಸಿಕ್ರಿ ಅವರು ಬ್ರೇನ್​ ಸ್ಟ್ರೋಕ್​ನಿಂದಾದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ.
ನ್ಯಾಷನಲ್ ಸ್ಕೂಲ್ ಆಫ್​ ಡ್ರಾಮಾದಲ್ಲಿ ವ್ಯಾಸಂಗ ಮಾಡಿದ್ದ ಸುರೇಖಾ ಸಿಕ್ರಿ ಅವರು ಪ್ರತಿಭಾವಂತ ಕಲಾವಿದೆಯಾಗಿದ್ದರು. 1989 ರಲ್ಲಿ ಅವರಿ ಸಂಗೀತ್​ ನಾಟಕ್​ ಅಕಾಡೆಮಿ ಅವಾರ್ಡ್ ಕೂಡ ಸಂದಿತ್ತು. 2019 ರಲ್ಲಿ ಹಿಂದಿ ಚಿತ್ರ ‘ಬದಾಯಿ ಹೋ’ನಲ್ಲಿನ ನಟನೆಗೆ ಅತ್ಯುತ್ತಮ ಪೋಷಕ ನಟಿಯ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಸಿಕ್ರಿ ಅವರಿಗೆ 1988 ರಲ್ಲಿ ‘ತಮಸ್​’ ಚಿತ್ರದ ಪಾತ್ರಕ್ಕೆ ಮತ್ತು 1995ರಲ್ಲಿ ‘ಮಮ್ಮೋ’ ಚಿತ್ರದ ಪಾತ್ರಕ್ಕೆ ಕೂಡ ರಾಷ್ಟ್ರಪ್ರಶಸ್ತಿಗಳು ಲಭಿಸಿದ್ದವು.
ಇದನ್ನೂ ಓದಿ:ರಿಷಭ್ ಪಂತ್‌ಗೆ ವೈರಸ್ ಹರಡಿದ್ದು ಯಾರಿಂದ ಗೊತ್ತೇ..?
ಟೆಲಿವಿಷನ್​ ಸೀರಿಸ್ ‘ಬಾಲಿಕಾ ವಧು’ವಿನಲ್ಲಿ ಅವರು ವಹಿಸಿದ್ದ ‘ದಾದಿಸಾ’ ಪಾತ್ರ ಅವರಿಗೆ ಬಹು ಜನಪ್ರಿಯತೆ ತಂದಿತ್ತು. ಕಡೆಯದಾಗಿ ನೆಟ್​ಫ್ಲಿಕ್ಸ್​ನ ಧಾರಾವಾಹಿ ಘೋಸ್ಟ್​ ಸ್ಟೋರೀಸ್​ನಲ್ಲಿ, ಸಿಕ್ರಿ ಅವರು ಪಾತ್ರ ವಹಿಸಿದ್ದರು.
ನೀನಾ ಗುಪ್ತಾ, ಮನೋಜ್ ಬಾಜಪೇಯಿ, ದಿಯಾ ಮಿರ್ಜಾ, ಪೂಜಾ ಭಟ್, ರಂದೀಪ್ ಹೂಡ, ದಿವ್ಯಾ ದತ್ತ, ಆಶಿಶ್ ವಿದ್ಯಾರ್ಥಿ, ಆಯುಷ್ಮಾನ್ ಖುರಾನ ಮುಂತಾದ ಬಾಲಿವುಡ್​ ನಟನಟಿಯರು ಸಿಕ್ರಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.(ಏಜೆನ್ಸೀಸ್)
ದೇಹಸೌಂದರ್ಯ ಹೆಚ್ಚಿಸಿ ಮನಸ್ಸಿಗೆ ಏಕಾಗ್ರತೆ ನೀಡುತ್ತೆ, ಈ ಸುಲಭ ಯೋಗಾಸನ!

“ಕರೊನಾ ತಡೆಯಲ್ಲಿ ಮುಂದಿನ 125 ದಿನಗಳು ಭಾರೀ ಮಹತ್ವದ್ದಾಗಿವೆ”

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 4 =
Remember me
