ನವ ದೆಹಲಿ:ಸೆಪ್ಟೆಂಬರ್ 23 ರಾಷ್ಟ್ರೀಯ ಸಿನಿಮಾ ದಿನ. ಮಲ್ಟಿಪ್ಲೆಕ್ಸ್ ಅಥಾರಿಟಿ ಆಫ್ ಇಂಡಿಯಾ (MAI) ದೇಶದೆಲ್ಲೆಡೆ ಸಿನಿಮಾ ದಿನವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿತ್ತು. ಆ ಪ್ರಯುಕ್ತ ಸೆ.23ರಂದು ದೇಶದ 4000 ಸಾವಿರ ಮಲ್ಟಿಪ್ಲೆಕ್ಸ್ ಸಿನಿಮಾ ಚಿತ್ರಮಂದಿರದ ಟಿಕೆಟ್ ದರ 75 ರೂ. ಎಂದು ನಿಗದಿಸಲಾಗಿತ್ತು. ಇದೀಗ ಎಲ್ಲಾ ಚಿತ್ರಮಂದಿರಗಳು ಭರ್ತಿಯಾಗಿವೆ.
ವಿಶೇಷ ಆಫರ್​​ಗೆ ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಸಿನಿಮಾ ದಿನ’ದ ಮುಂಚಿತವಾಗಿಯೇ ಎಲ್ಲಾ ಟಿಕೆಟ್​​ಗಳು ಖರೀದಿಯಾಗಿವೆ ಎಂದು ಮಲ್ಟಿಪ್ಲೆಕ್ಸ್ ಅಥಾರಿಟಿ ಆಫ್ ಇಂಡಿಯಾ ಟ್ವೀಟ್ ಮಾಡಿದೆ.
ಸೆ.23 ಸಿನಿಮಾ ದಿನದ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಚಿತ್ರಮಂದಿರದತ್ತ ಬರುತ್ತಾರೆ. ಹೀಗಾಗಿ ವಿಶೇಷ ಆಫರ್​​ನ್ನು ನೀಡಿದ್ದೆವು. ಪಿವಿಆರ್, ಐನಾಕ್ಸ್, ಸಿನಿಪೊಲಿಸ್, ಕಾರ್ನಿವಲ್, ಮಿರಾಜ್, ಸಿಟಿಪ್ರೈಡ್, ಏಷ್ಯಾ, ಮುಖ್ತಾ 2, ಮೂವಿ ಟೈಮ್, ವೇವ್, ಎಮ್​​2ಕೆ, ಡೆಲಿಟಿ ಮುಂತಾದ ಮಲ್ಟಿಫ್ಲೆಕ್ಸ್​ ಚಿತ್ರಮಂದಿರಗಳಲ್ಲಿ ರಿಯಾಯಿತಿ ದರ ಘೋಷಿಸಿತ್ತು.
ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯದ ಸಿನಿಮಾ ಪ್ರೇಮಿಗಳಿಗೆ, ಮಲ್ಟಿಪ್ಲೆಕ್ಸ್ ಘೋಷಿಸಿದ್ದ ಈ ವಿಶೇಷ ಆಫರ್​ನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಚಿತ್ರಮಂದಿರ ಮತ್ತು ಟಿಕೆಟ್​​ನ ಬೆಲೆಗೆ ಸಂಬಂಧಿಸಿದಂತೆ ಪ್ರತಿಯೊಂದು ರಾಜ್ಯದಲ್ಲೂ ವಿಭಿನ್ನ ಕಾನೂನು ಪಾಲನೆಯಾಗುತ್ತಿದೆ.(ಏಜೆನ್ಸೀಸ್)
Cinemas recording sold out shows in advance on ‘National Cinema Day’#NationalCinemaDay2022#September23pic.twitter.com/PB8v6Xu5D0— Multiplex Association Of India (@MAofIndia)September 22, 2022
Cinemas recording sold out shows in advance on ‘National Cinema Day’#NationalCinemaDay2022#September23pic.twitter.com/PB8v6Xu5D0
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − eleven =
Remember me
