ನವದೆಹಲಿ:ದೇಶದ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟು ಮಾಡಬಲ್ಲ ಹೊಸ ಯೋಜನೆಗೆ ಚಾಲನೆ ದೊರೆತಿದೆ.ದೇಶಾದ್ಯಂತ ರಾಷ್ಟ್ರೀಯ ಡಿಜಿಟಲ್​ ಆರೋಗ್ಯ ಯೋಜನೆ ( ನ್ಯಾಷನಲ್​ ಡಿಜಿಟಲ್​ ಹೆಲ್ತ್​ ಮಿಷನ್​) ಇಂದು ಆರಂಭವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ.
ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಯೋಜನೆಯನ್ನು ಘೋಷಿಸಿದ ಮೋದಿ, ಆರೋಗ್ಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಇದು ಕಾರಣವಾಗಲಿದೆ. ಪ್ರತಿ ಭಾರತಿಯನಿಗೂ ಆರೋಗ್ಯ ಗುರುತಿನ ಸಂಖ್ಯೆ ನೀಡಲಾಗುವುದು ಹಾಗೂ ಪ್ರತಿಯೊಬ್ಬರ ಆರೋಗ್ಯ ಮಾಹಿತಿಯನ್ನು ಕಾಯ್ದಿಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ;ಕರೊನಾ ನಿಯಂತ್ರಿಸುವಲ್ಲಿ ಮತ್ತೊಂದು ದಾಖಲೆ ಬರೆದ ದೆಹಲಿ; ದೇಶದಲ್ಲಿಯೇ ನಂಬರ್​ ಒನ್​…!
ಏನಿದು ಆರೋಗ್ಯ ಗುರುತಿನ ಸಂಖ್ಯೆ?: ರಾಷ್ಟ್ರೀಯ ಡಿಜಿಟಲ್​ ಆರೋಗ್ಯ ಮಿಷನ್​ ಅನ್ವಯ ಪ್ರತಿಯೊಬ್ಬರಿಗೂ ವಿಶಿಷ್ಟ ಆರೋಗ್ಯ ಗುರುತಿನ ಸಂಕ್ಯೆಯನ್ನು ನೀಡಲಾಗುತ್ತದೆ. ಇದರಲ್ಲಿ ವ್ಯಕ್ತಿಯ ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ ಇರಲಿದೆ.
ಒಂದೇ ಗುರುತಿನ ಸಂಖ್ಯೆಯಲ್ಲಿ ಎಲ್ಲ ಕಾಯಿಲೆ, ಅದಕ್ಕಾಗಿ ಮಾಡಿಸಲಾದ ಪರೀಕ್ಷೆ, ಪಡೆದ ಚಿಕಿತ್ಸೆ, ತೆಗೆದುಕೊಂಡ ಔಷಧದ ಮಾಹಿತಿ ಇರಲಿದೆ. ಯಾವ ವೈದ್ಯರು ಯಾವ ಔಷಧ, ಚಿಕಿತ್ಸೆ ನೀಡಿದ್ದರು ಎಂಬ ವಿವರವನ್ನು ಇದು ಒಳಗೊಂಡಿರುತ್ತದೆ ಎಂದು ಮೋದಿ ಮಾಹಿತಿ ನೀಡಿದ್ದಾರೆ.ಒಂದೇ ಸಂಖ್ಯೆಯಲ್ಲಿ ಎಲ್ಲ ಆರೋಗ್ಯ ಮಾಹಿತಿ ಅಡಗಿರುವಂತೆಯೇ, ಎಲ್ಲ ಆಸ್ಪತ್ರೆ, ಕ್ಲಿನಿಕ್​, ಪ್ರಯೋಗಾಲಯ ಹಾಗೂ ಇತರ ವೈದ್ಯಕೀಯ ಸಂಸ್ಥೆಗಳನ್ನು ಒಂದೇ ವೇದಿಕೆಗೆ ತರಲಾಗುತ್ತದೆ.
ಇದನ್ನೂ ಓದಿ;ಪ್ರಧಾನಿ ಮೋದಿ ಹೇಳಿದ ಮೂರು ದೇಶೀಯ ಕರೊನಾ ಲಸಿಕೆಗಳಾವವು? ಇಲ್ಲಿದೆ ಮಾಹಿತಿ?
ಈ ಗುರುತಿನ ಸಂಖ್ಯೆ ಹೇಗೆ ವಿಭಿನ್ನ?:ಇದು ವ್ಯಕ್ತಿಯ ಆರೋಗ್ಯದ ಬಗ್ಗೆ ಎಲ್ಲವನ್ನೂ ಒಳಗೊಂಡಿರುತ್ತದೆ. ಯಾವಾಗ, ಯಾವ ಕಾಯಿಲೆಗೆ ತುತ್ತಾಗಿದ್ದಾರೆ, ಅದಕ್ಕೆ ಪಡೆದ ಚಿಕಿತ್ಸೆ ಏನು ಎಂಬುದು ಕೂಡ ಗೊತ್ತಾಗಲಿದೆ. ಇನ್ನೊಂದೆಡೆ, ಆಸ್ಪತ್ರೆಗೆ ಹೋಗುವಾಗ ಎಲ್ಲ ವೈದ್ಯಕೀಯ ದಾಖಲೆಗಳನ್ನು ಕೊಂಡೊಯ್ಯಬೇಕೆಂದೇನಿಲ್ಲ. ಗುರುತಿನ ಸಂಖ್ಯೆ ಹೇಳಿದರೆ ಎಲ್ಲ ಮಾಹಿತಿಯನ್ನು ವೈದ್ಯರೇ ಪಡೆದುಕೊಳ್ಳುತ್ತಾರೆ. ಯಾವುದೇ ವ್ಯಕ್ತಿ ವೈದ್ಯರ ಬಳಿಗೆ ಹೋದರೂ ಆತನಿಗಿರುವ ಆರೋಗ್ಯ ಸಮಸ್ಯೆ ಏನು? ಅದಕ್ಕೆ ಪಡೆದ ಚಿಕಿತ್ಸೆ ಯಾವುದು ಎಂಬುದೆಲ್ಲ ಇದರಲ್ಲಿ ದಾಖಲಾಗುತ್ತದೆ.
ಮಹಿಳೆಯರ ಮದುವೆ ವಯಸ್ಸು ಹದಿನೆಂಟಲ್ಲ..! ಕನಿಷ್ಠ ಪ್ರಾಯ ಹೆಚ್ಚಳದ ಸುಳಿವು ನೀಡಿದ ಪ್ರಧಾನಿ ಮೋದಿ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:12 + nine =
Remember me
