ಬೆಂಗಳೂರು:ದೇಶದ ಮುಂಚೂಣಿ ಸುದ್ದಿವಾಹಿನಿಗಳಲ್ಲಿ ಒಂದೆನಿಸಿರುವ ರಿಪಬ್ಲಿಕ್ ಮೀಡಿಯಾ ನೆಟ್​ವರ್ಕ್ ಕನ್ನಡ ಮಾಧ್ಯಮ ಲೋಕಕ್ಕೆ ಅಡಿಯಿಟ್ಟಿದೆ. ದಿಗ್ವಿಜಯ ನ್ಯೂಸ್ ಚಾನೆಲ್ ಅನ್ನು ಮಾರ್ಪಡಿಸಿ ‘ರಿಪಬ್ಲಿಕ್ ಕನ್ನಡ’ ವಾಹಿನಿಯಾಗಿ ಹೊಸ ರೂಪದಲ್ಲಿ ಕನ್ನಡಿಗರ ಮನಗೆಲ್ಲಲು ಮುಂದಾಗಿದೆ.
ಶುಕ್ರವಾರ ದಿಗ್ವಿಜಯ ನ್ಯೂಸ್ ಸ್ಟುಡಿಯೋದಲ್ಲಿ ರಿಪಬ್ಲಿಕ್ ಕನ್ನಡ ವಾಹಿನಿಯನ್ನು ವಿಧ್ಯುಕ್ತವಾಗಿ ಘೋಷಣೆ ಮಾಡಿದ ರಿಪಬ್ಲಿಕ್ ಮೀಡಿಯಾ ನೆಟ್​ವರ್ಕ್ ಮುಖ್ಯಸ್ಥ ಅರ್ನಬ್ ಗೋಸ್ವಾಮಿ, ಹೊಸ ಚಾನೆಲ್ ಮೂಲಕ ಕನ್ನಡಿಗರ ಹೃದಯದಲ್ಲಿ ನಂಬರ್ 1 ಸ್ಥಾನ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡದಲ್ಲಿ ವಾಹಿನಿ ಆರಂಭಿಸುವ ಕಾರಣ ಹೊರಹಾಕಿದ ಅರ್ನಬ್ ಗೋಸ್ವಾಮಿ, ರಾಷ್ಟ್ರೀಯತೆ ಹಾಗೂ ಸಮಗ್ರತೆ ನಮ್ಮವಿಚಾರಧಾರೆಯಾಗಿದೆ. ಪ್ರತಿಶತ ನೂರರಷ್ಟು ಸುದ್ದಿಯನ್ನು ವೀಕ್ಷಕರಿಗೆ ಉಣಬಡಿಸುವ ವೇಳೆ ನಿಖರ ಹಾಗೂ ಕರಾರುವಕ್ಕಾದ ಸುದ್ದಿಗಳನ್ನೇ ನೀಡಲು ಆದ್ಯ ಗಮನ ಹರಿಸಲಾಗುವುದು.
ಉದ್ಯಮ ನಡೆಸುವುದು ಲಾಭಕ್ಕಲ್ಲ, ಬದಲಾಗಿ ಪ್ಯಾಷನ್​ಗಾಗಿ ಮಾತ್ರ. ರಾಷ್ಟ್ರೀಯತೆಗೆ ಸಂಬಂಧಿತ ವಿಷಯಗಳು ವಾಹಿನಿಗಳಲ್ಲಿ ಪ್ರಮುಖವಾಗಿ ಚರ್ಚೆಯಾಗಬೇಕು. ಜನರಿಂದ ನೇರವಾಗಿ ಪಡೆದ ಮಾಹಿತಿಯೊಂದಿಗೆ ಸುದ್ದಿಯಾಗಿಸುವುದು ಕೂಡ ವೀಕ್ಷಕರಿಗೆ ನಾವು ಕೊಡುವ ಫರ್ಫೆಕ್ಟ್ ನ್ಯೂಸ್ ಆಗಿರುತ್ತದೆ ಎಂದು ನಿಲುವು ವ್ಯಕ್ತಪಡಿಸಿದರು.
ಮುಂದಿನ ವರ್ಷ ಜಾಗತಿಕ ಚಾನೆಲ್:ಭವಿಷ್ಯದಲ್ಲಿ ದೇಶದ ಎಲ್ಲ ರಾಜ್ಯಗಳ ಪ್ರಾದೇಶಿಕ ಭಾಷೆಗಳಲ್ಲಿ ಚಾನೆಲ್ ತರುವ ಗುರಿ ಹೊಂದಲಾಗಿದೆ. ಸ್ಥಳೀಯ ಜನರ ಧ್ವನಿಗೆ ಪ್ರಾಧಾನ್ಯತೆ ಸಿಗಬೇಕು. ಜನರ ಆಶೋತ್ತರಗಳನ್ನು ಈಡೇರಿಸುವ ಆಶಯವೂ ಇದೆ. ಮುಂದಿನ ವರ್ಷ ಭಾರತದ ನೆಲದಿಂದಲೇ ಜಾಗತಿಕ ಮಟ್ಟದ ಚಾನೆಲ್ ಆರಂಭಿಸುವುದಾಗಿ ಅರ್ನಬ್ ಗೋಸ್ವಾಮಿ ಪ್ರಕಟಿಸಿದರು.
ರಿಪಬ್ಲಿಕ್ ಮೀಡಿಯಾ ನೆಟ್​ವರ್ಕ್ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಹೊಸ ವಾಹಿನಿ ಘೋಷಿಸುವ ವೇಳೆ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರನ್ನು ಪ್ರಶಂಸಿಸಿದರು. ವಿಆರ್​ಎಲ್ ಗ್ರೂಪ್​ನ ಜನರನ್ನು ನಾವು ಹೆಚ್ಚಾಗಿ ಗೌರವಿಸುತ್ತೇವೆ ಹಾಗೂ ಅವರಿಂದ ಪ್ರಭಾವಿತರಾಗಿದ್ದೇವೆ. ಮುಂದೆಯೂ ಇದೇ ತೆರನಾದ ಬಾಂಧವ್ಯ ಮುಂದುವರಿಯಲಿದೆ ಎಂದು ಮೆಚ್ಚುಗೆಯ ಮಾತನ್ನಾಡಿದರು.
ದಿಗ್ವಿಜಯ ನ್ಯೂಸ್ ಚಾನೆಲ್ ಇನ್ನು ಮುಂದೆ ರಿಪಬ್ಲಿಕ್ ಕನ್ನಡ ವಾಹಿನಿಯಾಗಿ ಅರ್ನಬ್ ಗೋಸ್ವಾಮಿ ನೇತೃತ್ವದಲ್ಲಿ ಮುಂದುವರಿಯಲಿದೆ. ಉನ್ನತ ದೂರದೃಷ್ಟಿ ಉಳ್ಳ ಅವರು ವಾಹಿನಿಯನ್ನೂ ಹೊಸ ಎತ್ತರಕ್ಕೆ ಏರಿಸುವ ವಿಶ್ವಾಸ ಇದೆ.
| ಡಾ.ಆನಂದ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕರು, ವಿಆರ್​ಎಲ್ ಸಮೂಹ ಸಂಸ್ಥೆಗಳು
ರಿಪಬ್ಲಿಕ್ ಮೀಡಿಯಾ ಯುವ ಮಾಧ್ಯಮವಾಗಿದ್ದು, ದಣಿವರಿಯದೆ ಕಾರ್ಯಪ್ರವೃತ್ತಿಯಲ್ಲಿದೆ. ದೇಶದೆಲ್ಲೆಡೆ ಭಾಷೆಗಳ ಗಡಿ ದಾಟಿ ಪ್ರಾದೇಶಿಕ ಮಟ್ಟದಲ್ಲಿ ವಾಹಿನಿ ಆರಂಭಿಸಿ ಸ್ಥಳೀಯರಿಗೆ ನಿಖರವಾದ ನ್ಯೂಸ್ ಕೊಡಲಿದ್ದೇವೆ. ನಾವು ಸುದ್ದಿ ಜಗತ್ತಿನಲ್ಲಿ ಸುದ್ದಿ ಮಾಡುವುದು ನಿಶ್ಚಿತ.
| ಅರ್ನಬ್ ಗೋಸ್ವಾಮಿ, ರಿಪಬ್ಲಿಕ್ ಮೀಡಿಯಾ ನೆಟ್​ವರ್ಕ್ ಮುಖ್ಯಸ್ಥ
ವಿಆರ್​ಎಲ್ ಗ್ರೂಪ್​ನ ಡಾ. ವಿಜಯ ಸಂಕೇಶ್ವರ ಹಾಗೂ ಡಾ. ಆನಂದ ಸಂಕೇಶ್ವರ ಅವರು ಅತ್ಯಂತ ಪ್ರೀತಿಯಿಂದ ಸ್ಥಾಪಿಸಿದ ಮೌಲ್ಯಯುತ ಚಾನೆಲ್ ಅನ್ನು ರಿಪಬ್ಲಿಕ್ ಮೀಡಿಯಾ ನೆಟ್​ವರ್ಕ್​ಗೆ ಕೊಡುತ್ತಿರುವುದು ನಮಗೊಂದು ಸೌಭಾಗ್ಯ. ನಾವೂ ಸಹ ರಾಷ್ಟ್ರೀಯತೆ ಮತ್ತು ಸಮಗ್ರತೆಯ ಮೌಲ್ಯಗಳನ್ನು ಹಂಚುವ ಕೆಲಸ ಮುಂದುವರಿಸುತ್ತೇವೆ. ದಿಗ್ವಿಜಯ ಚಾನೆಲ್ ಅನ್ನು ಬರೀ ವ್ಯಾಪಾರ ಮನೋಭಾವದಿಂದ ರಿಪಬ್ಲಿಕ್ ಮೀಡಿಯಾ ನೆಟ್​ವರ್ಕ್ ತೆಕ್ಕೆಗೆ ಪಡೆಯುತ್ತಿಲ್ಲ. ಡಾ. ಆನಂದ ಸಂಕೇಶ್ವರ ಅವರೊಂದಿಗಿನ ಉತ್ತಮ ಸ್ನೇಹ ಹಾಗೂ ಅವರ ತಂದೆ ಡಾ. ವಿಜಯ ಸಂಕೇಶ್ವರ ಅವರ ಮೇಲಿನ ಗೌರವದಿಂದ ಪಾಲುದಾರಿಕೆಯಲ್ಲೇ ಚಾನೆಲ್ ಮುಂದುವರಿಯಲಿದೆ ಎಂದು ಭಾವಿಸುವುದಾಗಿ ಅರ್ನಬ್ ಗೋಸ್ವಾಮಿ ಹೇಳಿದರು.
300ಕ್ಕೂ ಹೆಚ್ಚು ವೃತ್ತಿಪರರೊಂದಿಗೆ ಶೀಘ್ರ ಆನ್​ಏರ್:ರಿಪಬ್ಲಿಕ್ ಕನ್ನಡ, ಕರ್ನಾಟಕದ ಎಲ್ಲ 31 ಜಿಲ್ಲೆಗಳಲ್ಲಿ ನಿಯೋಜಿಸಲಾದ 100ಕ್ಕೂ ಹೆಚ್ಚು ಪತ್ರಕರ್ತರು ಸೇರಿ 300ಕ್ಕೂ ಹೆಚ್ಚು ವೃತ್ತಿಪರರೊಂದಿಗೆ ಆನ್-ಏರ್ ಕಾರ್ಯಾಚರಣೆ ಆರಂಭಿಸುತ್ತದೆ. 500ಕ್ಕೂ ಹೆಚ್ಚು ಬಿಡಿ ವರದಿಗಾರರನ್ನು ಹೊಂದುವ ಆಲೋಚನೆ ಇದೆ. ಕರ್ನಾಟಕದ ಪ್ರತಿಯೊಂದು ಪ್ರದೇಶ, ಪ್ರತಿ ಹಳ್ಳಿ ಮತ್ತು ಪ್ರದೇಶದ ಜನರ ಪ್ರತಿಯೊಂದು ಕಥೆ, ಅನ್ಯಾಯ, ಬೇಡಿಕೆಗೆ ‘ರಿಪಬ್ಲಿಕ್ ಕನ್ನಡ’ ಗಟ್ಟಿಯಾದ ಮತ್ತು ಪರಿಣಾಮಕಾರಿ ಧ್ವನಿಯನ್ನು ನೀಡುವ ಭರವಸೆ ಕೊಟ್ಟಿದೆ.
‘ದಿಗ್ವಿಜಯ ನ್ಯೂಸ್’ ಇನ್ನು ‘ರಿಪಬ್ಲಿಕ್ ಕನ್ನಡ’; ರಾಷ್ಟ್ರೀಯತೆ ನಮ್ಮ ವಿಚಾರಧಾರೆ ಎಂದ ಅರ್ನಬ್ ಗೋಸ್ವಾಮಿ

ಪೊಲೀಸ್ ‘ಪೋಸ್ಟ್​’ಗಳಲ್ಲೂ ಕ್ರಿಯೇಟಿವಿಟಿ; ಇಂಪ್ರೆಸ್​ ಆಗುವಂತೆ ‘ಎಕ್ಸ್​’ಪ್ರೆಸ್ ಮಾಡುತ್ತಿರುವ ಪೊಲೀಸರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 6 =
Remember me
