ನವದೆಹಲಿ:ದೇಶದ ಮೊದಲ ವೈದ್ಯಕೀಯ ಉಪಕರಣಗಳ ಉದ್ಯಾನ (ಮೆಡಿಕಲ್​ ಡಿವೈಸ್​ ಪಾರ್ಕ್​-ಮೆಡ್ಸ್​ ಪಾರ್ಕ್) ಕೇರಳದಲ್ಲಿ ಸ್ಥಾಪನೆ ಆಗಲಿದೆ. ಹೆಚ್ಚಿನ ರಿಸ್ಕ್​ ಹೊಂದಿರುವ ವೈದ್ಯಕೀಯ ಉಪಕರಣಗಳ ವಲಯವನ್ನು ಗಮನದಲ್ಲಿ ಇರಿಸಿಕೊಂಡು ಈ ಮೆಡ್ಸ್​ ಪಾರ್ಕ್​ ನಿರ್ಮಾಣವಾಗಲಿದೆ.
ಇದರಿಂದ ಅಭಿವೃದ್ಧಿ ಮತ್ತು ಸಂಶೋಧನೆ, ಪರೀಕ್ಷೆ, ಮೌಲ್ಯಮಾಪನ ಸಂಬಂಧಿತ ಸಂಶೋಧನೆಗಳಿಗೆ ಸಂಬಂಧಿಸಿದ ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಇದು ಸಹಕಾರಿ ಆಗಲಿದೆ. ಮೆಡ್ಸ್​ ಪಾರ್ಕ್​ ನಿರ್ಮಾಣದ ಬಗ್ಗೆ ಕೇಂದ್ರದ ಸೈನ್ಸ್​ ಆ್ಯಂಡ್​ ಟೆಕ್ನಾಲಜಿ ಸಚಿವಾಲಯ ಅಧಿಕೃತ ಮಾಹಿತಿ ಹೊರಹಾಕಿದೆ. ಈ ನೂತನ ಮೆಡ್ಸ್​ ಪಾರ್ಕ್​ ನಿರ್ಮಾಣ ಸಂಬಂಧ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಶ್ರೀಚಿತ್ರ ತಿರುಣಾಲ್​ ಇನ್​​ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸಸ್​ ಆ್ಯಂಡ್ ಟೆಕ್ನಾಲಜಿ, ಇನ್​ಸ್ಟಿಟ್ಯೂಟ್​ ಆಫ್​ ಡಿಪಾರ್ಟ್​ಮೆಂಟ್ ಆಫ್​ ಸೈನ್ಸ್​ ಆ್ಯಂಡ್​ ಟೆಕ್ನಾಲಜಿ, ಕೇರಳ ಸರ್ಕಾರದ ಕೈಗಾರಿಕಾ ಅಭಿವೃದ್ಧಿ ನಿಗಮ, ಕೇರಳ ಸರ್ಕಾರದ ಇಂಡಸ್ಟ್ರಿಯಲ್​ ಆ್ಯಂಡ್​ ಇನ್​ವೆಸ್ಟ್​ಮೆಂಟ್​ ಪ್ರಮೋಷನ್​ ಏಜೆನ್ಸಿಗಳ ಸಹಯೋಗದಲ್ಲಿ ತಿರುವನಂತಪುರದ ತೊನ್ನಕ್ಕಲ್​ ಲೈಫ್​ ಸೈನ್ಸ್​ ಪಾರ್ಕ್​ನಲ್ಲಿ ಮೆಡ್ಸ್​ ಪಾರ್ಕ್​ ಸ್ಥಾಪನೆಗೊಳ್ಳಲಿದೆ. ಈ ಮೆಡ್ಸ್​ ಪಾರ್ಕ್​ನಿಂದ 1200 ಮಂದಿಗೆ ನೇರವಾಗಿ ಉದ್ಯೋಗ ಸಿಗಲಿದ್ದು, ಪರೋಕ್ಷವಾಗಿ 4ರಿಂದ 5 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎನ್ನಲಾಗಿದೆ. (ಏಜೆನ್ಸೀಸ್​)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 × three =
Remember me
