ನವದೆಹಲಿ:ದೇಶದ ಮೊಟ್ಟಮೊದಲ ರ‍್ಯಾಪಿಡ್​​ ಎಕ್ಸ್ ರೈಲು ಸಂಚಾರ ಅ. 20ರಂದು ಆರಂಭವಾಗಲಿದೆ. ವಂದೇ ಭಾರತ್ ರೈಲಿನ ವೇಗಕ್ಕೆ ಸರಿಸಮನಾಗಿ ಸಂಚರಿಸುವ ಮತ್ತೊಂದು ಸೆಮಿ ಸ್ಪೀಡ್ ರೈಲು ಇದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.
ದೆಹಲಿ- ಗಾಜಿಯಾಬಾದ್- ಮೀರತ್ ರೀಜನಲ್ ರ‍್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್ (ಆರ್​ಆರ್​ಟಿಎಸ್- ಪ್ರಾದೇಶಿಕ ತ್ವರಿತ ಸಂಚಾರ ವ್ಯವಸ್ಥೆ) ಯೋಜನೆಯಡಿ ರ‍್ಯಾಪಿಡ್​​ ಎಕ್ಸ್ ರೈಲಿನ ಮೊದಲ ಪ್ರಯಾಣವು ಅಕ್ಟೋಬರ್ 20 ರಂದು ಸಾಹಿಬಾಬಾದ್​ನಿಂದ ದುಹೈ ಡಿಪೋವರೆಗೆ ನಡೆಯಲಿದೆ. ಆರ್​ಆರ್​ಟಿಎಸ್ ಕಾರಿಡಾರ್​ನ ಒಟ್ಟು ಉದ್ದವು ರಾಜಧಾನಿ ದೆಹಲಿಯಿಂದ ಉತ್ತರಪ್ರದೇಶದ ರಾಜ್ಯದ ಮೀರತ್​ವರೆಗೆ 82 ಕಿ.ಮೀ. ಆಗಿದೆ. ಈ ಸಂಪೂರ್ಣ ರೈಲು ಮಾರ್ಗವನ್ನು 2025ರ ಹೊತ್ತಿಗೆ ಪೂರ್ಣಗೊಳಿಸಲು ಗುರಿ ಹಾಕಿಕೊಳ್ಳಲಾಗಿದೆ. ಈ ಕಾರಿಡಾರ್ ಪೈಕಿ 17 ಕಿಮೀ ಉದ್ದದ ಆದ್ಯತೆಯ ವಿಭಾಗವಾದ ಸಾಹಿಬಾಬಾದ್​ನಿಂದ ದುಹೈ ಡಿಪೋವರೆಗೆ ರೈಲು ಸಂಚಾರ ಈಗ ಆರಂಭವಾಗಲಿದೆ. ಗಾಜಿಯಾ ಬಾದ್, ಗುಲ್ಧರ್ ಮತ್ತು ದುಹೈ ನಿಲ್ದಾಣಗಳ ಮೂಲಕ ಈಗ ರೈಲು ಸಾಗುತ್ತದೆ. ಉದ್ಘಾಟನೆಯ ಮರುದಿನವಾದ ಅ. 21 ರಿಂದ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತಿದೆ.
ಈ ರೈಲು ಪ್ರತಿ ಗಂಟೆಗೆ ಸರಾಸರಿ 100 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ರ‍್ಯಾಪಿಡ್​​ ಎಕ್ಸ್ ರೈಲಿನ ಯೋಜನೆಯನ್ನು ರಾಷ್ಟ್ರೀಯ ರಾಜಧಾನಿ ಪ್ರಾದೇಶಿಕ ಸಾರಿಗೆ ಸಂಸ್ಥೆ (ಎನ್​ಸಿಆರ್​ಟಿಸಿ) ಜಾರಿಗೊಳಿಸುತ್ತಿದೆ.
ದರ:ಸ್ಟ್ಯಾಂಡರ್ಡ್​​ ಕೋಚ್​ಗಳಿಗೆ ಕನಿಷ್ಠ ದರ 20 ರೂ. ಮತ್ತು ಗರಿಷ್ಠ 50 ರೂ. ಪ್ರೀಮಿಯಂ ಕೋಚ್​ಗಳಿಗೆ ಕನಿಷ್ಠ ದರ 40 ರೂ. ಮತ್ತು ಗರಿಷ್ಠ 100 ರೂ. ಈ ರೈಲುಗಳು ಬೆಳಗ್ಗೆ 6 ರಿಂದ ರಾತ್ರಿ 11 ರವರೆಗೆ ಕಾರ್ಯನಿರ್ವಹಿಸಲಿವೆ. ಪ್ರತಿ 15 ನಿಮಿಷಗಳಿಗೆ ಒಂದು ರೈಲು ಸಂಚರಿಸಲಿದೆ.
ಪೆಟ್ರೋಲ್ ಬಂಕ್​ಗಳಲ್ಲಿನ ಮೋಸ ತಪ್ಪಿಸಲು ಸರ್ಕಾರಕ್ಕೆ ಹೊಸ ಬೇಡಿಕೆ: ವಿಡಿಯೋ ವೈರಲ್!

ಐಸ್​ ಕ್ರೀಮ್​ ಟ್ರಕ್​ಗಳಲ್ಲಿ ಶವ!: ಹೊರಗೆ ಮಕ್ಕಳು ಐಸ್ ​​ಕ್ರೀಮ್ ಮೆಲ್ಲುವ ಚಿತ್ರ, ಒಳಗೆ ಮೃತದೇಹಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 2 =
Remember me
