ನವದೆಹಲಿ:ಗೋಲ್ಡನ್ ಗ್ಲೋಬ್ ಟ್ರೋಫಿಯನ್ನು ಗೆದ್ದ RRRನ ‘ನಾಟು ನಾಟು’ ಹಾಡಿಗೆ ಯೂಕ್ರೇನ್​ ಜೊತೆಗೆ ಹತ್ತಿರದ ಸಂಬಂಧ ಇದೆ ಎಂದು ಅನೇಕರಿಗೆ ಗೊತ್ತಿಲ್ಲ.
ಹೌದು, ‘ನಾಟು ನಾಟು’ ಹಾಡನ್ನು ಆಗಸ್ಟ್ 2021ರಲ್ಲಿ ಯೂಕ್ರೇನ್‌ನಲ್ಲಿ ಚಿತ್ರೀಕರಿಸಲಾಗಿತ್ತು. ಅದು ಕೂಡ ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್​ಸ್ಕಿಯ ಅಧಿಕೃತ ನಿವಾಸದ ಹೊರಗೆ. ಯೂಕ್ರೇನ್ ಮೇಲೆ ರಷ್ಯಾ ಆಕ್ರಮಣ ಶುರು ಮಾಡುವ ಕೆಲವು ತಿಂಗಳುಗಳ ಮೊದಲು ಟ್ರ್ಯಾಕ್ ಅನ್ನು ಚಿತ್ರೀಕರಿಸಲಾಗಿತ್ತು.
ಮಾರ್ಚ್ 2022ರಲ್ಲಿ ‘RRR’ ಪ್ರಚಾರದ ಸಮಯದಲ್ಲಿ, ಚಿತ್ರದ ನಿರ್ದೇಶಕ ಎಸ್‌ಎಸ್ ರಾಜಮೌಳಿ ಯೂಕ್ರೇನ್‌ನಲ್ಲಿ ನಡೆದ ಹಾಡಿನ ಚಿತ್ರೀಕರಣವನ್ನು ನೆನಪಿಸಿಕೊಂಡು ರಷ್ಯಾ-ಯೂಕ್ರೇನ್ ಯುದ್ಧದ ಬಗ್ಗೆ ದುಃಖವನ್ನು ವ್ಯಕ್ತಪಡಿಸಿದ್ದರು. “ನಾವು ಕೆಲವು ನಿರ್ಣಾಯಕ ದೃಶ್ಯಗಳನ್ನು ಚಿತ್ರೀಕರಿಸಲು ಅಲ್ಲಿಗೆ ಹೋಗಿದ್ದೆವು, ನಾವು ಚಿತ್ರೀಕರಣ ಮಾಡುವಾಗ, ಇದ್ದ ಸಮಸ್ಯೆಗಳು ಯುದ್ಧದ ರೂಪ ಪಡೆದುಕೊಳ್ಳಬಹುದು ಎಂಬ ಅಂದಾಜು ಇರಲಿಲ್ಲ. ಈಗ ನನಗೆ ಆ ಪರಿಸ್ಥಿತಿಯ ಗಂಭೀರತೆ ಅರ್ಥವಾಗಿದೆ” ಎಂದು ರಾಜಮೌಳಿ ಹೇಳಿಕೆ ನೀಡಿದ್ದರು.(ಏಜೆನ್ಸೀಸ್​)


A post shared by Senthil Kumar (@dopkksenthilkumar)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 3 =
Remember me
