| ಪಂಕಜ ಕೆ.ಎಂ. ಬೆಂಗಳೂರುನೈಸರ್ಗಿಕವಾಗಿ ಗುಣ ಹೊಂದುವ ಶಕ್ತಿಯ ಮೇಲೆ ನಂಬಿಕೆ ಹೊಂದಿರುವ ಚಿಕಿತ್ಸಾ ಕ್ರಮವೇ ನ್ಯಾಚುರೋಪಥಿ ಅರ್ಥಾತ್ ಪ್ರಕೃತಿ ಚಿಕಿತ್ಸೆ. ಕೃತಕ ಔಷಧಗಳು, ವಿಕಿರಣ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಜೈವಿಕ ಔಷಧ ಮತ್ತು ಆಧುನಿಕ ವೈಜ್ಞಾನಿಕ ಕ್ರಮಗಳಿಗೆ ತದ್ವಿರುದ್ಧವಾದ ಕ್ರಮವಿದು. ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು, ಆರೋಗ್ಯಕರ ಆಹಾರ ಸೇವನೆ ಮತ್ತು ಕ್ರಮಬದ್ಧವಾದ ಜೀವನ ಪದ್ಧತಿಯಿಂದ ರೋಗಗಳ ನಿಯಂತ್ರಣಕ್ಕೆ ಒತ್ತು ನೀಡುವ ಪದ್ಧತಿ. ಇತ್ತೀಚಿನ ವರ್ಷಗಳಲ್ಲಿ ಇದರ ಬಗ್ಗೆ ಜನರ ಆಸಕ್ತಿ ಹೆಚ್ಚಾಗಿದೆ. ತತ್ಪರಿಣಾಮ, ನಿಸರ್ಗದ ಮಡಿಲಲ್ಲಿ ಪ್ರಕೃತಿ ಚಿಕಿತ್ಸಾ ಕೇಂದ್ರಗಳೂ ಹೆಚ್ಚಿನ ಸಂಖ್ಯೆಯಲ್ಲಿ ತಲೆ ಎತ್ತುತ್ತಿವೆ. ಅವುಗಳತ್ತ ಜನರು ಆಕರ್ಷಿತರಾಗುತ್ತಿದ್ದಾರೆ.
ಆರು ಸಿದ್ಧಾಂತಗಳು:ಪ್ರಕೃತಿ ಚಿಕಿತ್ಸೆಯು ಆರು ಪ್ರಮುಖ ಸಿದ್ಧಾಂತಗಳನ್ನು ಹೊಂದಿದೆ. ಯಾವುದೇ ಹಾನಿ ಉಂಟು ಮಾಡದೆ, ಕಡಿಮೆ ಅಪಾಯ ತರುವ ಹಾಗೂ ಅತ್ಯಂತ ಪರಿಣಾಮಕಾರಿಯಾದ ಚಿಕಿತ್ಸಾ ಕ್ರಮವಿದು. ಪ್ರತಿ ವ್ಯಕ್ತಿಯಲ್ಲಿ ಸ್ವಾಭಾವಿಕವಾಗಿ ಇರುವ ಸ್ವಯಂ ಗುಣ ಹೊಂದಬಹುದಾದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೇವಲ ರೋಗ ಲಕ್ಷಣಗಳನ್ನು ಮಾತ್ರ ಗುಣಪಡಿಸದೆ, ಅದರ ಹಿಂದಿರುವ ಕಾರಣಗಳನ್ನು ಪತ್ತೆ ಮಾಡಿ ಸಂಪೂರ್ಣ ನಿವಾರಣೆ ಮಾಡುವ ಪ್ರಯತ್ನವೇ ಈ ಚಿಕಿತ್ಸಾ ಕ್ರಮ. ರೋಗಿಗಳಿಗೆ ರೋಗದ ಬಗ್ಗೆ ಮತ್ತು ಅದರ ಮೂಲ ಕಾರಣಗಳ ಬಗ್ಗೆ ರ್ತಾಕ ಜ್ಞಾನ ಒದಗಿಸುವ, ಭರವಸೆ-ಸ್ಪೂರ್ತಿ ನೀಡಿ, ಆರೋಗ್ಯದ ಬಗ್ಗೆ ಕಾಳಜಿ ಮೂಡಿಸುತ್ತದೆ.
ಆಚರಣೆ ಆರಂಭವಾಗಿದ್ದು ಹೀಗೆ:ಯಾವುದೇ ಔಷಧ ಇಲ್ಲದೆ ನೈಸರ್ಗಿಕವಾಗಿ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮ ಉತ್ತೇಜಿಸಲು ಹಾಗೂ ಮಾನವ ಜೀವನದಲ್ಲಿ ಪ್ರಕೃತಿ ಚಿಕಿತ್ಸೆಯ ಪ್ರಯೋಜನ ಹಾಗೂ ಮಹತ್ವ ತಿಳಿಸಲು ಕೇಂದ್ರ ಆಯುಷ್ ಸಚಿವಾಲಯ 2018ರಲ್ಲಿ ‘ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನ’ ಎಂದು ಘೋಷಿಸಿತು. ನೇಚರ್ ಕ್ಯೂರ್ ಫೌಂಡೇಷನ್ ಟ್ರಸ್ಟ್​ನ ಅಜೀವ ಸದಸ್ಯರಾಗಿ ಮಹಾತ್ಮ ಗಾಂಧಿ ಅವರು ನಿಯುಕ್ತಿಗೊಂಡಿದ್ದು 1945ರ ನ. 18ರಂದು. ಹಾಗಾಗಿ ಅದೇ ದಿನವನ್ನು ಪ್ರಕೃತಿ ಚಿಕಿತ್ಸೆ ದಿನವನ್ನಾಗಿ ಆಯ್ಕೆ ಮಾಡಲಾಯಿತು. ಟ್ರಸ್ಟ್​ನ ಸದಸ್ಯರಾಗುವ ಮೂಲಕ ಗಾಂಧೀಜಿ ನೈಸರ್ಗಿಕ ಚಿಕಿತ್ಸೆಗಳು ಮತ್ತು ಅವುಗಳ ಪ್ರಯೋಜನಗಳು ಎಲ್ಲರಿಗೂ ಲಭ್ಯವಾಗಬೇಕೆಂಬ ಆಶಯ ಹೊಂದಿದ್ದರು.
ನ್ಯಾಚುರೋಪಥಿ ಮಹತ್ವ:ನೈಸರ್ಗಿಕ ಚಿಕಿತ್ಸೆಯು ದೀರ್ಘಾವಧಿಯಲ್ಲಿ ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಯಾವುದೇ ಅಸ್ವಸ್ಥತೆ ಅಥವಾ ಅನಾರೋಗ್ಯಕ್ಕೆ ಚಿಕಿತ್ಸೆ ನೀಡಲು ಆಹಾರ, ವ್ಯಾಯಾಮ ಹಾಗೂ ಇತರ ನೈಸರ್ಗಿಕ ಪರಿಹಾರಗಳು ಪ್ರಕೃತಿ ಚಿಕಿತ್ಸೆಯಲ್ಲಿ ಇವೆ. ಯಾವ ಔಷಧವನ್ನೂ ಶಿಫಾರಸು ಮಾಡದೆಯೇ ರೋಗ ಗುಣಪಡಿಸುವ ಸಾಮರ್ಥ್ಯವನ್ನು ನಮ್ಮ ದೇಹಕ್ಕೆ ಈ ಪದ್ಧತಿ ಒದಗಿಸುತ್ತದೆ. ಆರೋಗ್ಯಕರ ಜೀವನಶೈಲಿಯ ಮೂಲಕ ಆರೋಗ್ಯವಂತ ದೇಹವನ್ನು ಹೊಂದುವುದು ಪ್ರಕೃತಿ ಚಿಕಿತ್ಸೆಯ ಉದ್ದೇಶ. ಇದರಲ್ಲಿ ಮುಖ್ಯವಾಗಿ ಆಹಾರದ ಅಭ್ಯಾಸಗಳು, ಶುದ್ಧ ನೀರು ಸೇವನೆ ಮತ್ತು ಸೂರ್ಯನ ಬೆಳಕು, ದೈಹಿಕ ಮತ್ತು ಮಾನಸಿಕ ವ್ಯಾಯಾಮ ಇತ್ಯಾದಿ ನೈಸರ್ಗಿಕ ಅಂಶಗಳು ಇವೆ. ಇವು ದೇಹದ ಮೇಲೆ ಯಾವುದೇ ರೀತಿಯ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ.
ಯಾವ್ಯಾವ ವಿಧ?:ಪ್ರಕೃತಿ ಚಿಕಿತ್ಸೆಯಲ್ಲಿ ಆರೋಗ್ಯ ಸಮಸ್ಯೆಗೆ ಅನುಗುಣವಾಗಿ ಮಣ್ಣಿನ ಚಿಕಿತ್ಸೆ, ವಾಯು ಚಿಕಿತ್ಸೆ, ಜಲ ಚಿಕಿತ್ಸೆ, ಮ್ಯಾಗ್ನೆಟ್​ಥೆರಪಿ, ವರ್ಣ ಚಿಕಿತ್ಸೆ, ಅಕ್ಯುಪಂಕ್ಚರ್, ಆಕ್ಯುಪ್ರೆಶರ್, ಎಲೆಕ್ಟ್ರೋಥೆರಪಿ, ಫಿಜಿಯೋಥೆರಪಿ ಸೇರಿ ಹಲವು ಬಗೆಯ ಚಿಕಿತ್ಸೆಗಳಿವೆ. ಯೋಗ, ಉಪವಾಸ ಮತ್ತು ಪಥ್ಯವೂ ಈ ಚಿಕಿತ್ಸೆಯಲ್ಲಿ ಸೇರಿವೆ. ಪ್ರಕೃತಿ ಚಿಕಿತ್ಸೆಯ ಅವಿಭಾಜ್ಯ ಅಂಗ ಉಪವಾಸ. ಇದರಲ್ಲಿ ಹಲವು ವಿಧಗಳಿವೆ. ದಿನಪೂರ್ತಿ ಯಾವುದೇ ಆಹಾರ ಸೇವಿಸದೆ ಬರೀ ನೀರು ಕುಡಿದು ಇರುವುದು; ಉಪವಾಸ ಅಂತ್ಯಗೊಳಿಸುವಾಗ ಹಣ್ಣಿನ ರಸ, ಎಳನೀರು ಸೇವಿಸುವುದು ಒಂದು ವಿಧಾನ. ಕೇವಲ ಹಣ್ಣುಗಳು, ಹಸಿ ತರಕಾರಿ, ಮೊಳಕೆ ಕಾಳುಗಳನ್ನು ಸೇವಿಸುತ್ತ ಘನ ಆಹಾರದಿಂದ ದೂರ ಇರುವುದು ಇನ್ನೊಂದು ರೀತಿಯ ಉಪವಾಸ. ಈ ಅವಧಿಯಲ್ಲಿ ಬೇಯಿಸಿದ ಆಹಾರ, ಮೊಟ್ಟೆ, ಮಾಂಸಾಹಾರ ಮುಂತಾದವುಗಳನ್ನು ಸೇವಿಸುವಂತಿಲ್ಲ.
ಬಿಗಿಯಾಗುತ್ತಾ ರಾಜಾಹುಲಿ ಹಿಡಿತ?; ಬಿಎಸ್​ವೈಗೆ ಬಂತು ಬಲ!

ಕುತೂಹಲ ಕೆರಳಿಸಿದೆ ಯತ್ನಾಳ್ ಅವರ ಆ ಒಂದು ಸಾಲು; ಏನದು? ಭುಗಿಲೇಳುತ್ತಾ ಭಿನ್ನಮತ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − fifteen =
Remember me
