ನವದೆಹಲಿ:ಕಾಶ್ಮೀರ ಮೂಲದ ತಂದೆ ಮಗಳಿಗೆ ದೆಹಲಿಯಲ್ಲಿ ತಂಗುವುದಕ್ಕೆ ಓಯೋ ಹೋಟೆಲ್​ ಒಂದರಲ್ಲಿ ರೂಂ ನೀಡಲು ನಿರಾಕರಿಸಲಾಗಿದೆ. ಅವರಿಬ್ಬರೂ ಕಾಶ್ಮೀರಿಗಳು ಎನ್ನುವ ಕಾರಣದಿಂದಲೇ ರೂಂ ನೀಡಿಲ್ಲ ಎನ್ನಲಾಗಿದೆ.
ದೆಹಲಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ನೌಮನ್​ ರಫೀಕ್​ರನ್ನು ನೋಡಲು ಆಕೆಯ ತಂದೆ ಮತ್ತು ತಂಗಿ ದೆಹಲಿಗೆ ಬಂದಿದ್ದರು. ಮಗಳನ್ನು ಭೇಟಿ ಮಾಡಿದ ಅವರು ದೆಹಲಿಯ ವಿಜಯ ನಗರದಲ್ಲಿರುವ ಆಶಾ ರೆಸಿಡೆನ್ಸಿ ಹೋಟೆಲ್​ನಲ್ಲಿ ರೂಂ ಕೇಳಿದ್ದಾರೆ. ಆದರೆ ಹೋಟೆಲ್​ನಲ್ಲಿ ಇವರು ಕಾಶ್ಮೀರಿಗಳು ಎಂಬ ಕಾರಣದಿಂದ ರೂಂ ನೀಡಲಾಗಿಲ್ಲ. ತಂದೆಯ ಬಳಿ ಎಲ್ಲಾ ದಾಖಲಾತಿಗಳು ಇದ್ದರೂ ಸಹ ಅದನ್ನು ನೋಡದೆಯೇ ರೂಂ ನೀಡಲು ನಿರಾಕರಿಸಲಾಗಿದೆ ಎಂದು ನೌಮನ್​ ತಿಳಿಸಿದ್ದಾರೆ.
ಏತಕ್ಕಾಗಿ ರೂಂ ನೀಡುವುದಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ದೆಹಲಿ ಪೊಲೀಸರು ನಮಗೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಜನರಿಗೆ ರೂಂ ನೀಡದಿರುವಂತೆ ಆದೇಶಿಸಿದ್ದಾರೆ ಎಂದು ಹೋಟೆಲ್​ನಲ್ಲಿ ತಿಳಿಸಿದ್ದಾರೆ. ನಾನು ಆ ಮೂರೂ ದೇಶದವನಲ್ಲ ನಾನು ಕಾಶ್ಮೀರದವನು ಎಂದು ಹೇಳಿದ್ದಕ್ಕೆ, ಕಾಶ್ಮೀರದವರಿಗೂ ಸಹ ರೂಂ ನೀಡದಿರುವಂತೆ ಆದೇಶಿಸಿದ್ದಾರೆ ಎಂದು ತಿಳಿಸಲಾಗಿದೆ.
ಈ ವಿಚಾರವಾಗಿ ನೌಮನ್​ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಳ್ಳುತ್ತಿದ್ದಂತೆ ಅನೇಕರು ಓಯೋ ಮತ್ತು ಪೊಲೀಸರ ಬಗ್ಗೆ ಆಕ್ರೋಶವ್ಯಕ್ತ ಪಡಿಸಿದ್ದಾರೆ.
ವಿಷಯ ಬೆಳಕಿಗೆ ಬರುತ್ತಿದ್ದಂತೆ ಪ್ರತಿಕ್ರಿಯಿಸಿರುವ ಓಯೋ, ತಮ್ಮ ಸಂಸ್ಥೆಯು ದೇಶದ ಯಾವ ಮೂಲೆಯಲ್ಲಿಯೂ ಇಂತಹ ಆದೇಶ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದೆ. ಮುಖರ್ಜಿ ನಗರ ಪೊಲೀಸರು ಸಹ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು ಪೊಲೀಸ್​ ಇಲಾಖೆ ಆ ರೀತಿಯ ಯಾವುದೇ ಆದೇಶ ನೀಡಿಲ್ಲ ಎಂದು ಹೇಳಿದೆ.
ಆದರೆ ಆಶಾ ರೆಸಿಡೆನ್ಸಿ ಹೋಟೆಲ್​ ಮ್ಯಾನೇಜ್​ಮೆಂಟ್​ ಮಾತ್ರ ಪೊಲೀಸರೇ ತಮಗೆ ಈ ಆದೇಶ ಹೊರಡಿಸಿದ್ದರು ಎಂದು ಆರೋಪಿಸಿದೆ. ಶಾಹಿನ್​ ಬಾಗ್​ ಮತ್ತು ಇತರೆ ಕಡೆಗಳಲ್ಲಿ ಸಿಎಎ ವಿರುದ್ಧದ ಹೋರಾಟ ನಿಲ್ಲುವವರೆಗೂ ಜಮ್ಮು ಕಾಶ್ಮೀರ ಮತ್ತು ಲಡಾಕ್​ನ ಜನರಿಗೆ ರೂಂ ನೀಡದಿರುವಂತೆ ಪೊಲೀಸರು ತಿಳಿಸಿದ್ದರು ಎಂದು ಮ್ಯಾನೇಜ್​ಮೆಂಟ್​ ತಿಳಿಸಿದೆ. ವಿಜಯ ನಗರದ ಇತರೆ ಹೋಟೆಲ್​ಗಳಲ್ಲಿ ವಿಚಾರಿಸಿದಾಗ ಮೂರು ಇಸ್ಲಾಮಿಕ್​ ದೇಶಗಳ ಜನರಿಗೆ ರೂಂ ನೀಡದಿರುವಂತೆ ಆದೇಶ ನೀಡಲಾಗಿತ್ತು ಆದರೆ ಜಮ್ಮು ಮತ್ತು ಲಡಾಕ್​ ಬಗ್ಗೆ ಯಾವುದೇ ಆದೇಶವಿರಲಿಲ್ಲ ಎಂದು ತಿಳಿಸಿವೆ.(ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 3 =
Remember me
