ನವದೆಹಲಿ:ಹಿಂದುಗಳ ಪವಿತ್ರ ಧಾರ್ವಿುಕ ಕ್ಷೇತ್ರಗಳಲ್ಲೊಂದಾದ ಕಾಶಿ ಭಾರತ-ಭಾರತೀಯರ ಶಕ್ತಿ, ಸನಾತನ ಸಂಸ್ಕೃತಿಯ ಆತ್ಮ ಹಾಗೂ ಅಸ್ಮಿತೆಯೂ ಹೌದು. ಕಾಶಿಯಾತ್ರೆ ಮಾಡಿದರೆ ಪುಣ್ಯ ಸಿಗುವುದೆಂಬ ಪ್ರತೀತಿ ಹಿನ್ನೆಲೆಯಲ್ಲಿ ವಿಶ್ವನಾಥನ ದರ್ಶನಕ್ಕೆ ನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ದಶಕಗಳಿಂದ ದಟ್ಟಣೆ, ಮೂಲಸೌಕರ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದ ಈ ಪುಣ್ಯಕ್ಷೇತ್ರವೀಗ ಗತವೈಭವಕ್ಕೆ ಮರಳಿದೆ. ಗಂಗಾನದಿ ತಟದಿಂದಲೇ ದೇಗುಲಕ್ಕೆ ನೇರ ಸಂಪರ್ಕ ಕಲ್ಪಿಸುವ ಕಾಶಿ ಕಾರಿಡಾರ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು. ಆ ಮೂಲಕ ಅಭಿವೃದ್ಧಿಯ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದರು.
ಸೇವೆಗೆ ತೆರೆದ ಕಾರಿಡಾರ್:ಕಾಶಿಯ ವಿಶ್ವನಾಥ ದೇಗುಲದ ಆವರಣದಲ್ಲಿ ನಿರ್ವಿುಸಲಾಗಿರುವ ಅತ್ಯಾಧುನಿಕ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಇದಕ್ಕೂ ಮುನ್ನ ವಿಶ್ವನಾಥ ದೇಗುಲದಲ್ಲಿ ಪೂಜೆ ಸಲ್ಲಿಸಿದರು.
ಮಧ್ವಾಚಾರ್ಯರ ಸ್ಮರಣೆ:ಮೋದಿ ಭಾಷಣದಲ್ಲಿ ಕನ್ನಡ ಹಾಗೂ ದ್ವೈತ ಮತದ ಸ್ಥಾಪಕ ಮಧ್ವಾಚಾರ್ಯರನ್ನು ಸ್ಮರಿಸಿದರು. ‘ಕಾಶಿಯ ವಿಶ್ವನಾಥ ಪಾಪದ ನಿವಾರಣೆ ಮಾಡುತ್ತಾನೆ ಎಂದು ಮಧ್ವಾಚಾರ್ಯರು ಶಿಷ್ಯರಿಗೆ ತಿಳಿಸಿದ್ದರು’ ಎಂದರು.
ದಾಳಿ ಮೆಟ್ಟಿನಿಂತ ದೇಗುಲ:ಕಾಶಿಯ ವಿಶ್ವನಾಥ ದೇಗುಲವನ್ನು 1669ರ ಸೆ.2ರಂದು ಔರಂಗಜೇಬನ ಆದೇಶದ ಮೇರೆಗೆ ಕೆಡವ ಲಾಯಿತು. ಹಿಂದು ರಾಣಿ ಅಹಲ್ಯಾಬಾಯಿ ಹೋಳ್ಕರ್ 1776-78ರಲ್ಲಿ ಮರು ನಿರ್ಮಾಣ ಮಾಡಿದರು. ಆಗಿನ ದಿನದಲ್ಲೇ ಕಾಶಿ ಹಲವು ಅಭಿವೃದ್ಧಿ ಕಾಮಗಾರಿ ಗಳನ್ನು ಕಂಡಿತ್ತು. ಇದೀಗ ಹೊಸ ರೂಪ ಪಡೆದಿದೆ.
ಆಕ್ರಮಣಕಾರರು ಈ ನಗರದ ಮೇಲೆ ದಾಳಿ ಮಾಡಿದ್ದಾರೆ. ನಾಶಕ್ಕೆ ಪ್ರಯತ್ನಿಸಿದ್ದಾರೆ. ಇತಿಹಾಸವು ಔರಂಗಜೇಬನ ಕ್ರೌರ್ಯ, ಅವನ ಭಯೋತ್ಪಾದನೆಗೆ ಸಾಕ್ಷಿಯಾಗಿದೆ. ಆತ ಕತ್ತಿಯಿಂದ ನಾಗರಿಕತೆ ಬದಲಿಸಲು ಪ್ರಯತ್ನಿಸಿದ, ಮತಾಂಧತೆಯಿಂದ ಸಂಸ್ಕೃತಿ ತುಳಿಯಲು ಪ್ರಯತ್ನಿಸಿದ. ಆದರೆ ಜಗತ್ತಿನ ಉಳಿದ ಭಾಗಗಳಿಗಿಂತ ಭಿನ್ನವಾದ ಈ ಮಣ್ಣು ಒಬ್ಬ ಮೊಗಲ್ ಚಕ್ರವರ್ತಿಗೆ ಬದಲಾಗಿ ಒಬ್ಬ ಶಿವಾಜಿಯನ್ನು ಹುಟ್ಟುಹಾಕಿತು.
|ನರೇಂದ್ರ ಮೋದಿಪ್ರಧಾನಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 8 =
Remember me
