ತಿರುಪತಿ:ವಿಶ್ವವಿಖ್ಯಾತ ಧಾರ್ಮಿಕ ಯಾತ್ರಾಸ್ಥಳ ತಿರುಪತಿ-ತಿರುಮಲೆಯಲ್ಲಿ ನವರಾತ್ರಿ ಬ್ರಹ್ಮೋತ್ಸವ ಅದ್ಧೂರಿಯಾಗಿ ಆರಂಭವಾಗಿದ್ದು, ತಿರುಮಲೆ ಸಿಂಗಾರಗೊಂಡಿದೆ. ದಸರಾ ರಜೆ ಕಾರಣದಿಂದ ಬೃಹತ್ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಬರುತ್ತಿದ್ದು, ಟಿಟಿಡಿ ವಿಸ್ತೃತ ವ್ಯವಸ್ಥೆಗಳನ್ನು ಮಾಡಿದೆ.
ಇದನ್ನೂ ಓದಿ:ಇಲ್ಲಿ ಚಿನ್ನದ ಭಂಡಾರವೇ ಇದೆ…1400 ವರ್ಷಗಳಷ್ಟು ಹಳೆಯದಾದ ಈ ದೇವಾಲಯ ಎಲ್ಲಿದೆ ಗೊತ್ತಾ?
ತಿರುಮಲೆಯಲ್ಲಿ ಬ್ರಹ್ಮೋತ್ಸವದ ನಿಮಿತ್ತ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ಎಲ್ಲೆಡೆ ಜಗಮಗಿಸುವ ವಿದ್ಯುತ್​ ದೀಪಗಳಿಂದ ಸಿಂಗರಿಸಲಾಗಿದೆ. ಭಾನುವಾರ ಉತ್ಸವಗಳಿಗೆ ವಿಧ್ಯುಕ್ತವಾಗಿ ಚಾಲನೆ ಸಿಕ್ಕಿದ್ದು, ಶ್ರೀದೇವಿ, ಭೂದೇವಿ ಸಮೇತ ಶ್ರೀಮಲಯಪ್ಪ ಸ್ವಾಮಿ(ವೆಂಕಟರಮಣಸ್ವಾಮಿ)ಯ ಮೆರವಣಿಗೆ ಸಡಗರದಿಂದ ನಡೆಯಿತು. ಪೆದ್ದಶೇಷ(ದೊಡ್ಡಶೇಷ) ವಾಹನದ ಮೇಲೆ ಸ್ವಾಮಿಯು ವಿರಾಜಮಾನರಾಗಿ ನೆರೆದಿದ್ದ ಸಹಸ್ರಾರು ಭಕ್ತರಿಗೆ ದರ್ಶನ ನೀಡಿದ್ದು, ಭಕ್ತಿಯ ಪರಾಕಷ್ಠೆ ಮುಗಿಲುಮುಟ್ಟಿತ್ತು.
ವಿವಿಧ ಜಾನಪದ ಕಲಾತಂಡಗಳು, ಭಕ್ತರ ಸಂಕೀರ್ತನೆ, ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಒಂಬತ್ತು ದಿನಗಳ ನವರಾತ್ರಿ ಬ್ರಹ್ಮೋತ್ಸವದಲ್ಲಿ ಮಲಯಪ್ಪ ಸ್ವಾಮಿ ವಿವಿಧ ವಾಹನ ವೇರಿ ಬರಲಿದ್ದು, ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತರು ಈ ಸಂದರ್ಭ ಸೇರುತ್ತಾರೆ.
ಅಕ್ಟೋಬರ್ 19 ರಂದು ನಡೆಯುವ ಗರುಡವಾಹನ ಸೇವೆಯಲ್ಲಿ ಅಧಿಕ ಸಂಖ್ಯೆಯ ಭಕ್ತರು ಭಾಗವಹಿಸುವ ಸಾಧ್ಯತೆ ಇದೆ. ಅ.23 ರಂದು ಚಕ್ರಸ್ನಾನದೊಂದಿಗೆ ಉತ್ಸವವು ಮುಕ್ತಾಯಗೊಳ್ಳಲಿದೆ. ಅಧಿಕ ಮಾಸದ ಕಾರಣ ಈ ವರ್ಷ ಎರಡನೇ ಬಾರಿ ಬ್ರಹ್ಮೋತ್ಸವವನ್ನು ನಡೆಸಲಾಗುತ್ತಿದೆ.ಇನ್ನು ತಿರುಮಲೆಯಲ್ಲಿ 15,000 ವಾಹನಗಳ ಸಾಮರ್ಥ್ಯದ 32 ಪಾರ್ಕಿಂಗ್ ಸ್ಥಳಗಳನ್ನು ಮೀಸಲಿಡಲಾಗಿದೆ. ತಿರುಮಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಬಿಗಿ ಬಂದೋಸ್ತ್ ಏರ್ಪಡಿಸಿ ಅಹಿತಕರ ಘಟನೆಗಳು ನಡೆಯದಂತೆ ಶೋಧ ನಡೆಸುತ್ತಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
