ಒಡಿಶಾ:ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಹಿನ್ನಡೆ ಅನುಭವಿಸಿದ ನಂತರ, ಒಡಿಶಾ ಮುಖ್ಯಮಂತ್ರಿ ಮತ್ತು ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್ ಅವರ 24 ವರ್ಷಗಳ ಆಳ್ವಿಕೆ ಕೊನೆಗೊಂಡಿತು. ಅವರು ಇಂದು ಭುವನೇಶ್ವರದ ರಾಜಭವನದಲ್ಲಿ ರಾಜ್ಯದ ರಾಜ್ಯಪಾಲ ರಘುಬರ್ ದಾಸ್ ಅವರಿಗೆ ರಾಜೀನಾಮೆ ಸಲ್ಲಿಸಿದರು.
ಇದನ್ನೂ ಓದಿ:ಫಲಿತಾಂಶದಲ್ಲಿ ಹಿನ್ನಡೆ; ರಾಜೀನಾಮೆ ನೀಡಲು ಮುಂದಾದ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್‌!
ಇಂದು ಭುವನೇಶ್ವರದಲ್ಲಿರುವ ರಾಜಭವನಕ್ಕೆ ತೆರಳಿದ ಪಾಟ್ನಾಯಕ್​ ರಾಜ್ಯಪಾಲರಾದ ರಘುಬರ್​ ದಾಸ್​ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಒಡಿಶಾದಲ್ಲಿ ಆಡಳಿತವಿರೋಧಿ ಅಲೆಗೆ ಸಿಕ್ಕ ಆಡಳಿತರೂಢ ಬಿಜೆಡಿ ಅಧಿಕಾರ ಕಳೆದುಕೊಂಡಿದೆ. ಬಿಜೆಪಿ ಸರಳ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
147 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ 80 ಸ್ಥಾನ ಗೆದ್ದುಕೊಂಡಿದ್ದು, ಸರಳ ಬಹುಮತ ಪಡೆದಿದೆ. ಅಧಿಕಾರ ಕಳೆದುಕೊಂಡರೂ ಬಿಜೆಡಿ 49 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್​ 14 ಸ್ಥಾನಗಳನ್ನು ಗಳಿಸಿದೆ.
ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರೇ 2 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದರು. ಈ ಪೈಕಿ ಬೊಲಾಂಗೀರ್‌ ಜಿಲ್ಲೆಯ ಕಾಂತಾಬಂಜಿ ಕ್ಷೇತ್ರದಲ್ಲಿ ಬಿಜೆಪಿಯ ಲಕ್ಷ್ಮಣ್‌ ಬಾಗ್ ಅವರ ವಿರುದ್ಧ ಸೋತಿದ್ದಾರೆ. ಆದರೆ, ಕಣಕ್ಕಿಳಿದಿದ್ದ ಮತ್ತೊಂದು ಕ್ಷೇತ್ರ ಗಂಜಾಂ ಜಿಲ್ಲೆಯ ಹಿಂಜಿಲಿಯಲ್ಲಿ ಬಿಜೆಪಿ ಅಭ್ಯರ್ಥಿ ಸಿಸಿರ್ ಕುಮಾರ್ ಮಿಶ್ರಾ ವಿರುದ್ಧ ಜಯಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಟ್ನಾಯಕ್ ಅವರು 1998 ರ ಲೋಕಸಭಾ ಉಪಚುನಾವಣೆಯಲ್ಲಿ ಅಸ್ಕಾ ಕ್ಷೇತ್ರದಿಂದ ಗೆಲ್ಲುವ ಮೂಲಕ ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಆದರೆ, 2000 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಡಿ ಗೆಲುವು ಸಾಧಿಸಿದ ನಂತರ ಮತ್ತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರವನ್ನು ರಚಿಸಿದ ನಂತರ, ರಾಜ್ಯದ ಮುಖ್ಯಮಂತ್ರಿ ಪಾತ್ರವನ್ನು ವಹಿಸಿಕೊಳ್ಳಲು ಪಟ್ನಾಯಕ್ ಕೇಂದ್ರ ಸಂಪುಟದಲ್ಲಿನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಸತತ ಮೂರನೇ ಬಾರಿಗೆ ಎನ್​​ಡಿಎ ಸರ್ಕಾರ ರಚಿಸಲಿದೆ: ಗೆಲುವು ಕೊಟ್ಟ ದೇಶವಾಸಿಗಳಿಗೆ ಮೋದಿ ಧನ್ಯವಾದ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × two =
Remember me
