|ಬೆಂಕಿ ಬಸಣ್ಣ, ನ್ಯೂಯಾರ್ಕ್
6ನೇ ನಾವಿಕವಿಶ್ವ ಕನ್ನಡ ಸಮಾವೇಶವನ್ನು ಇದೇ ವರ್ಷದ  ಆಗಸ್ಟ್ 27, 28,  29 ರಂದು   ‘ಭಾಷೆ-ಬಾಂಧವ್ಯ-ಭರವಸೆ’  ಎಂಬ ಟ್ಯಾಗ್​ಲೈನ್​​ನೊಂದಿಗೆ ಆಚರಿಸಲಾಗುವುದು ಎಂದು ಅಧಿಕೃತವಾಗಿ ಘೋಷಿಸಲಾಗಿದೆ.
ನಾವಿಕ ಸಂಸ್ಥೆಯ ಅಧ್ಯಕ್ಷರಾದ ವಲ್ಲೀಶ ಶಾಸ್ತ್ರಿ ಅವರು ಮಾತನಾಡಿ,  “ಪ್ರತಿ ಎರಡು ವರ್ಷಗಳಿಗೊಮ್ಮೆ  ಅಮೆರಿಕದ ಯಾವುದಾದರೊಂದು ದೊಡ್ಡ ಊರಿನಲ್ಲಿ ಸಾವಿರಾರು ಜನರು  ಒಂದೇ ಸೂರಿನಡಿ ಒಟ್ಟಿಗೆ ಸೇರಿ ನಾವಿಕ ವಿಶ್ವ ಕನ್ನಡ ಸಮಾವೇಶಗಳನ್ನು ಆಚರಿಸುತ್ತಾ ಬಂದಿದ್ದೇವೆ.  ಆದರೆ ದುರದೃಷ್ಟದಿಂದ ಅಮೆರಿಕದಲ್ಲಿ ಈಗಲೂ ಸಹಿತ ಕರೊನಾ ಮಹಾಮಾರಿಯು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ, ನಾವಿಕ ವಿಶ್ವ ಕನ್ನಡ  ಸಮಾವೇಶವನ್ನು ಈ ವರ್ಷ ಅಂತರ್ಜಾಲದ ಮೂಲಕ ಆಚರಿಸಬೇಕಾದ ಅನಿವಾರ್ಯತೆ ಬಂದಿದೆ” ಎಂದು ತಿಳಿಸಿದರು.
ಈ ೬ನೇ  ನಾವಿಕ ವಿಶ್ವ ಕನ್ನಡ ಸಮ್ಮೇಳನ ಸಂಚಾಲಕರಾಗಿ  ಡಾ.ಕವಿತಾ ಕೊಟ್ರಪ್ಪ ಅವರು ಸೇವೆ ಸಲ್ಲಿಸಲಿದ್ದಾರೆ. ಜೊತೆಗೆ ಶಿವಕುಮಾರ್, ಆರುಡಿ ರಾಜಗೋಪಾಲ್ ಮತ್ತು ಮಂಜುನಾಥ್ ರಾವ್ ಸಹ-ಸಂಚಾಲಕರಾಗಿ ಸೇವೆ ಸಲ್ಲಿಸಲಿದ್ದಾರೆ.
ಪ್ರಚಾರ ಸಮಿತಿಯ ಚೇರ್ಮನ್ ಆಗಿ ಬೆಂಕಿ ಬಸಣ್ಣ,  ಜಾಗತಿಕ ಕನ್ನಡ ಕೂಟಗಳ ಆಯೋಜಕರಾಗಿ ಪುಷ್ಪಲತಾ,  ಭಾರತದ ಸಮಿತಿಗಳ ಚೇರ್ಮನ್ ಆಗಿ ಸಮೀರ ಭಾರದ್ವಾಜ ,  ಕನ್ನಡ-ಕಲಿ ಕಾರ್ಯಕ್ರಮಗಳ ಆಯೋಜಕರಾಗಿ ಡಾ.ಅಶೋಕ್ ಕಟ್ಟಿಮನಿ,    ಮೂಲಸೌಲಭ್ಯಗಳ ಆಯೋಜಕರಾಗಿ ಸತ್ಯಪ್ರಸಾದ್, ವಿವಿಧ ಪ್ರತಿಭಾ ಸ್ಪರ್ಧೆಗಳ ಆಯೋಜಕರಾಗಿ ರಾಮರಾವ್,  ನಾಟಕ ಸ್ಪರ್ಧೆಗಳ ನಿಯೋಜಕರಾಗಿ ಅಲಮೇಲು ಅಯ್ಯಂಗಾರ್, ನೃತ್ಯ ಸ್ಫರ್ಧೆಗಳ ಆಯೋಜಕರಾಗಿ ಮಂಗಳ ಪ್ರಶಾಂತ್,   ಕಾಮಿಡಿ ಮತ್ತು ಶಾರ್ಟ್ ಫಿಲ್ಮ್  ಕಾರ್ಯಕ್ರಮಗಳ  ಆಯೋಜಕರಾಗಿ ಶ್ರೀಕಾಂತ್ ಹಾಗೂ  ಸಂಗೀತ ಕಾರ್ಯಕ್ರಮಗಳ ನಿರ್ವಾಹಕರಾಗಿ ಶೇಷಪ್ರಸಾದ್ ಸೇವೆ ಸಲ್ಲಿಸಲಿದ್ದಾರೆ.
ಮೂರು ದಿನಗಳ ಸಮ್ಮೇಳನದಲ್ಲಿ  ಕನ್ನಡ ಭಾಷೆ , ಕಲೆ, ಪರಂಪರೆ , ವಾಣಿಜ್ಯ , ಉದ್ಯಮ, ಸಾಹಿತ್ಯ , ಸಿನಿಮಾ, ರಂಗಭೂಮಿ, ವಿಜ್ಞಾನ , ಮನೋರಂಜನೆ,  ಆರೋಗ್ಯ, ಯೋಗ, ವೈದ್ಯಕೀಯ ಮೊದಲಾದ ಕ್ಷೇತ್ರಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಮೂಡಿಬರಲಿವೆ.  ಪ್ರಪಂಚದ ವಿವಿಧ ದೇಶಗಳ ಕನ್ನಡ ಸಂಘಗಳು ಈ ನಾವಿಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸಕ್ರಿಯವಾಗಿ ಭಾಗವಹಿಸಲಿವೆ. ಸಾಗರೋತ್ತರದ ಪ್ರತಿಭೆಗಳ ಜೊತೆಗೆ ಕರ್ನಾಟಕದಲ್ಲಿರುವ ಉತ್ತಮೋತ್ತಮ ಕಲಾವಿದರಿಂದ ಸಂಗೀತ , ನೃತ್ಯ , ನಾಟಕ , ಯಕ್ಷಗಾನದಂತಹ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಯಿದೆ.
ಹೆಚ್ಚಿನ ವಿವರಗಳಿಗಾಗಿhttp://www.navika.orgಗೆ ಭೇಟಿಕೊಡಿ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 + two =
Remember me
